ಗದಗ 01: ಗದುಗಿನ ನಗರಸಭೆ ಕಾಲೇಜು ಆವರಣದಲ್ಲಿ ರಾಜ್ಯೋತ್ಸವದ ಅಂಗವಾಗಿ ತಾತಯಿ ಭುವನೇಶ್ವರಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪೂಜೆ ಸಲ್ಲಿಸುವ ಮೂಲಕ ಕಲಾತಂಡ, ಸ್ತಬ್ದ ಚಿತ್ರ ಹಾಗೂ ವಿಧ್ಯಾತರ್ಿಗಳ ಮೆರವಣಿಗೆಗೆ ಚಾಲನೆ ನೀಡಿದರು. ವಾಯುವ್ಯ ಕನರ್ಾಟಕ ಸಾರಿಗೆ ಸಂಸ್ಥೆಯ ವಿರೇಶ್ವರ ಪುಣ್ಯಾಶ್ರಮದ ಪುಟ್ಟಯ್ಯಜ್ಜನವರ ಹಾಗೂ ಗದಗ ಪಬ್ಲಿಕ ಶಾಲೆಯ ಮಕ್ಕಳ ಪುಟ್ಟಯ್ಯಜ್ಜನವರ ಕುರಿತು ಸ್ತಬ್ದ ಚಿತ್ರಗಳು ನೋಡುಗರ ಗಮನ ಸೆಳೆದವು ವಿವಿಧ ಸಕರ್ಾರದ ಸೌಲಭ್ಯಗಳ ಯೋಜನೆಗಳ ಮಾಹಿತಿ ನೀಡುವ ಕೃಷಿ, ಆರೋಗ್ಯ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಪಾಲನೆ, ಹಿಂದುಳಿದ ವರ್ಗಗಳ ಕಲ್ಯಾಣ, ತೋಟಗಾರಿಕೆ, ಆಹಾರ ಮತ್ತು ನಾಗರಿಕ, ಸಾಮಾಜಿಕ ಅರಣ್ಯ, ಮೃಗಾಲಯ ಪ್ರಾಧಿಕಾರದ ಬಿಂಕದಕಟ್ಟಿ, ಜಿಲ್ಲಾ ಪಂಚಾಯತ ಸ್ವಚ್ಛ ಭಾರತ ಅಭಿಯಾನದ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.