ರಾಹುಲ್ ಸಿದ್ದಮ್ಮನಹಳ್ಳಿ ಕುಸ್ತಿಯಲ್ಲಿ ತೃತೀಯ ಸ್ಥಾನ

Rahul Siddhammanahalli third position in wrestling

ರಾಹುಲ್ ಸಿದ್ದಮ್ಮನಹಳ್ಳಿ ಕುಸ್ತಿಯಲ್ಲಿ ತೃತೀಯ ಸ್ಥಾನ 

  ಗದಗ 25: ಮಂಗಳೂರ-ಉಡುಪಿಯಲ್ಲಿ ಕರ್ನಾಟಕ ಒಲಂಪಿಕ್ ಸಂಸ್ಥೆಯವರು ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ-2025ದಲ್ಲಿ 92ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ತೋಂಟದಾರ್ಯ ಪ್ರೌಢಶಾಲಾ ವಿದ್ಯಾರ್ಥಿ ರಾಹುಲ್ ವಸಂತ ಸಿದ್ದಮ್ಮನಹಳ್ಳಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾನೆ. ಗದಗ ಜಿಲ್ಲಾ ಕುಸ್ತಿ ತರಬೇತುದಾರ ವಿನಾಯಕ ಯಂಕಂಚಿ ಅವರಿಂದ ತರಬೇತಿ ಪಡೆದಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿ  ಸೀನಿಯರ್ ಓಲಂಪಿಕ್‌ನಲ್ಲಿ ಭಾಗವಹಿಸಿ  ತೃತೀಯ ಸ್ಥಾನ ಪಡೆದಿದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕಿಯರು ಅಭಿನಂದಿಸಿದ್ದಾರೆ.