ರಾಫೆಲ್ ಡೀಲ್ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ರಾಹುಲ್ ಗಾಂದಿ ಆರೋಪ ತಳ್ಳಿಹಾಕಿದ ಫ್ರಾನ್ಸ್


ನವದೆಹಲಿ: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಫ್ರಾನ್ಸ್, ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. 

ಈ ಸಂಬಂಧ ಪ್ರಕಟಣೆ ನೀಡಿರುವ ಫ್ರಾನ್ಸ್ ಸಕರ್ಾರ, ರಾಹುಲ್ ಗಾಂಧಿ ಅವರು ಭಾರತದ ಸಂಸತ್ ನಲ್ಲಿ 36 ಯುದ್ಧ ವಿಮಾನ ಖರೀದಿಯ ಒಪ್ಪಂದದಲ್ಲಿ ಯಾವುದೇ ರಹಸ್ಯ ಷರತ್ತು ಇಲ್ಲ ಎಂಬ ಹೇಳಿಕೆ ನೀಡಿರುವುದನ್ನು ಗಮನಸಿದ್ದೇವೆ. ಆದರೆ ಒಪ್ಪಂದ ಅತ್ಯಂತ ಸೂಕ್ಷ್ಮವಾಗಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. 

ಫ್ರಾನ್ಸ್ ಮತ್ತು ಭಾರತ 2008ರಲ್ಲಿ ರಕ್ಷಣಾ ಒಪ್ಪಂದ ಪೂರ್ಣಗೊಳಿಸಿದ್ದು, ಇದು ಉಭಯ ದೇಶಗಳ ಭದ್ರತೆ ಮತ್ತು ರಕ್ಷಣಾ ಸಾಧನದ ಕಾಯರ್ಾಚರಣೆಯ ಸಾಮಥ್ರ್ಯಗಳನ್ನು ಪರಿಣಾಮ ಬೀರುವ ವಿಚಾರವಾಗಿರುವುದರಿಂದ ಎರಡೂ ದೇಶಗಳು ಒಪ್ಪಂದದ ಮಾಹಿತಿಯನ್ನು ರಕ್ಷಿಸಲು ಬದ್ಧವಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ರಾಫೆಲ್ ಡೀಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಯುಪಿಎ ಅವಧಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಈಗ ಅದು 1600 ಕೋಟಿ ರುಪಾಯಿ ಹೆಚ್ಚಿದ್ದು, ಈ ಬಗ್ಗೆ ಮಾಹಿತಿ ನೀಡಲು ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದ್ದಾರೆ ಮತ್ತು ಇದೊಂದು ರಹಸ್ಯ ಷರತ್ತು ಎಂದು ಹೇಳಿದ್ದಾರೆ. ಆದರೆ ನಾನು ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿದಾಗ ರಹಸ್ಯ ಷರತ್ತಿನ ಬಗ್ಗೆಯೂ ಪ್ರಶ್ನಿಸಿದ್ದೆ. 

ಆದರೆ ಅಂತಹ ಯಾವುದೇ ಷರತ್ತಿಲ್ಲ ಎಂದು ಅವರು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಒತ್ತಡದಿಂದಾಗಿ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಆರೋಪಿಸಿದ್ದರು.