ಆರ್ಎಲ್ಎಸ್ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ

ಬೆಳಗಾವಿ 28: ವಿದ್ಯಾಥರ್ಿಗಳು ತಮ್ಮ ಕನಸುಗಳನ್ನು ನನಸು ಮಾಡುವ ಗುರಿಯೇ ಸಾಧನೆ ಆಗಬೇಕು.  ಯುವಕರು ವಿದ್ಯಾರ್ಜನೆ ಮಾಡುವದನ್ನು ಸವಾಲಾಗಿ ಸ್ವೀಕರಿಸಬೇಕು.  ಯುವಶಕ್ತಿಯಿಂದ ದಿಕ್ಕು ಬದಲಾವಣೆಯಾಗಬೇಕು.  ಯುವಕರು ದೇಶದ ಸಂಪತ್ತಾಗಿರಬೇಕು.  ವಿದ್ಯಾಥರ್ಿಗಳಿಗೆ ಪಾಲಕರು ಸಹಕಾರ ಮತ್ತು ಎಚ್ಚರಿಕೆ ನೀಡುತ್ತಾ ಹೋದರೆ ಸನ್ಮಾರ್ಗದಲ್ಲಿ ಹೋಗಲಿಕ್ಕೆ ಸಾಧ್ಯವಾಗುತ್ತದೆ ಎಂದು ಬೆಳಗಾವಿಯ ಮಾಜಿ ಜಿಲ್ಲಾ ರೋಟರಿ ಗವರ್ನರ್ (3170) ರೋ. ಆನಂದ ಕುಲಕಣರ್ಿ ಅವರು ಹೇಳಿದರು.

ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. 28ರಂದು ಸರ್. ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. 

ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ನಿರಂತರ ಅಧ್ಯಯನದ ಕಡೆಗೆ ಗಮನಹರಿಸಿದರೆ ಸಾಧನೆ ಸಾಧ್ಯ. ಮಾನವನು ಭೂಮಿ ಮೇಲೆ ಪ್ರೀತಿಯಿಂದ ಬದುಕಬೇಕು. ತಿಳುವಳಿಕೆ, ಬುದ್ಧಿ ಇರುವ ಮನುಷ್ಯ ಇಂದು ಸ್ವಾರ್ಥದಿಂದ ಪ್ರಾಣಿಗಳಿಗಿಂತ ಕಡೆಯಾಗಿ ವತರ್ಿಸುತ್ತಿದ್ದಾನೆ. ಮಾನವೀಯತೇ ಮರೆಯುತ್ತಿದ್ದಾನೆ. ಆದ್ದರಿಂದ ವಿದ್ಯಾಥರ್ಿಗಳು ಈಗಿನಿಂದಲೇ ನೈತಿಕ ಮೌಲ್ಯಗಳಿಂದ ಜೀವನ ರೂಪಿಸಿಕೊಳ್ಳಬೇಕು.  ಮಾನವೀಯತೆ ಹೃದಯದಿಂದ ಸಮಾಜದಲ್ಲಿ ಸಮನ್ವಯತೆ ಹೊಂದಿರಬೇಕು. ವಿದ್ಯಾಥರ್ಿಗಳಲ್ಲಿ ಜ್ಞಾನ ಮತ್ತು ವಿವೇಕ ಯಾವಾಗಲೂ ರತ್ನದಂತೆ ಹೊಳೆಯಬೇಕು. ಸಮಾಜದಲ್ಲಿ ತಂದೆ-ತಾಯಿ ಮತ್ತು ಗುರುವಿನ ಬಗೆಗೆ ಯಾವಾಗಲು ನಮ್ರತಾಭಾವನೆ ಹೊಂದಿರಬೇಕೆಂದು ಕುಲಕಣರ್ಿ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಆರ್.ಎಲ್.ಎಸ್. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಎಲ್.ವ್ಹಿ. ದೇಸಾಯಿ ಅವರು ಮಾತನಾಡುತ್ತ, ವಿದ್ಯಾಥರ್ಿಗಳು ನಿರಂತರ ಅಧ್ಯಯನಶೀಲರಾಗಬೇಕು.  ವಿವಿಧ ಕ್ಷೇತ್ರದ ಅನುಭವ ಪಡೆದುಕೊಂಡು ನಾಯಕರಾಗಿ ಹೊರಹೊಮ್ಮಬೇಕು.  ಪ್ರಜಾಪ್ರಭುತ್ವದಲ್ಲಿ ಯುವಕರು ಮತದಾನದ ಅರಿವು ಮತ್ತು ಜಾಗೃತಿ ಸಮಾಜದಲ್ಲಿ ಮೂಡಿಸುವ ಕಾರ್ಯ ಮಾಡಬೇಕೆಂದು ಹೇಳಿದರು. 

2018-19 ಸಾಲೀನ ಆದರ್ಶ ವಿದ್ಯಾಥರ್ಿಯಾಗಿ ಓಂಕಾರ ಕಾಮತ ಹಾಗೂ ಆದರ್ಶ ವಿದ್ಯಾಥರ್ಿನಿಯಾಗಿ ರಶ್ಮಿ ಸಾಲೋಟಗಿ ಅವರು ಆಯ್ಕೆಯಾಗಿದ್ದಾರೆಂದು ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ ಅವರು ಘೋಷಿಸಿದರು.  

ನಮ್ರತಾ ಹಾಗೂ ಸಂಗಡಿಗರು ಪ್ರಾಥರ್ಿಸಿದರು.  ಡಾ.ವ್ಹಿ.ಡಿ. ಯಳಮಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಪ್ರೊ. ಯು.ಆರ್. ರಜಪೂತ ಅತಿಥಿಗಳನ್ನು ಪರಿಚಯಿಸಿದರು.  ಪ್ರೊ. ಆರ್.ಆರ್. ವಡಗಾವಿ ಅವರು ಕ್ರೀಡಾ ವರದಿಯನ್ನು ವಾಚಿಸಿದರು.  ಡಾ.ಆರ್.ಎಸ್. ಹಿರೇಮಠ ಅವರು ವಿದ್ಯಾಥರ್ಿ ಚಟುವಟಿಕೆ ಮತ್ತು ವಿವಿಧ ಸಂಘಗಳ ವರದಿಯನ್ನು ಓದಿದರು. ಪ್ರೊ. ಎಸ್.ಆರ್. ಮಾನೆ ಅವರು ಮಹಿಳಾ ಸಬಲಿಕರಣ ಘಟಕ ಹಾಗೂ ವಿವಿಧ ಘಟಕಗಳ ವರದಿಯನ್ನು ಸಾದರ ಪಡಿಸಿದರು.  ಡಾ. ಜೆ.ಎಸ್. ಕವಳೇಕರ ಹಾಗೂ ಪ್ರೊ. ಎಮ್.ಎಮ್. ಪುರಾಣಿಕ ಅವರು ಪಾರಿತೋಷಕ ಬಹುಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜುನೇದ ಅವರು ವಂದಿಸಿದರು.  ಮಿಸ್. ನಯನಾ ಮತ್ತು ಅಧಿತಿ ಕಾರ್ಯಕ್ರಮವನ್ನು ನಿರೂಪಿಸಿದರು.