ರಾಮತೀರ್ಥ ನಗರದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ತುತರ್ು ಕ್ರಮ : ಶಾಸಕ ಬೆನಕೆ

ಲೋಕದರ್ಶನ ವರದಿ

ಬೆಳಗಾವಿ 26: ದಿ.26ರಂದು ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ 10 ವರ್ಷಗಳಿಂದ ಸರಿಯಾಗಿ ತ್ಯಾಜ್ಯ ವಸ್ತುಗಳ ವಿಲೇವಾರಿಯಾಗದ ಕೆಲಸವನ್ನು ಪೂರ್ಣಗೊಳಿಸಲು ಬುಡಾ ಅಧಿಕಾರಿಗಳ ಜೊತೆ ಸಮನ್ವಯ ಚಚರ್ೆ ನಡೆಸಿ ತ್ಯಾಜ್ಯ ವಿಲೇವಾರಿ ಮಾಡುವ ಸಮಸ್ಯೆಯನ್ನು ಬಗೆಹರಿಸಿದರು. 

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ಮಾತನಾಡಿ ರಾಮತೀರ್ಥ ನಗರದ 10 ವರ್ಷಗಳ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಯನ್ನು ಬುಡಾ ಅಧಿಕಾರಿಗಳು 2 ದಿನಕೊಮ್ಮೆ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ರಾಮತೀರ್ಥ ನಗರದ ರಹವಾಸಿಗಳು ಸಹ ಕಸವನ್ನು ಗಟಾರು ಹಾಗೂ ಇನ್ನಿತರೆ ಸ್ಥಳದಲ್ಲಿ ಎಸೆಯದೆ 2 ದಿನಕೊಮ್ಮೆ ಕಸವನ್ನು ಸಂಗ್ರಹಿಸಿ ಕಸವನ್ನು ಎತ್ತಲು ಮನೆ ಮನೆಗೆ ಬರುವ ವಾಹನದಲ್ಲಿ ಹಾಕಬೆಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬುಡಾ ಅಭಿಯಂತರರಾದ ಹಿರೆಮಠರವರು ರಾಮತೀರ್ಥ ನಗರದ ತ್ಯಾಜ್ಯ ವಿಲೇವಾರಿಯನ್ನು ಕೈಗೊಳ್ಳಲು 2 ದಿನಕೊಮ್ಮೆ ಮನೆ ಮನೆಗೆ ಕಸವನ್ನು ಸಂಗ್ರಹಿಸಿ ರಾಮತೀರ್ಥ ನಗರವನ್ನು ಸುಂದರವಾಗಿಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ವಿಲಾಸ ಕೆರೂರ, ಎಸ್.ಎಸ್.ಕಿವಡಸನ್ನವರ, ಎಮ್.ಬಿ. ನಿರವಾನಿ, ರಾಜು ಪಾಟೀಲ, ವಿಜಯಕುಮಾರ ಹೊಸಟ್ಟಿ , ಬುಡಾ ಅಭಿಯಂತರರಾದ ಹಿರೇಮಠ ಹಾಗೂ ರಾಮತೀರ್ಥ ನಗರದ ರಹವಾಸಿಗಳು ಉಪಸ್ಥಿತರಿದ್ದರು.