ರಸಪ್ರಶ್ನೆ: ಸಾಂಗಲಿ ನಗರದ ಎಸ್.ಆರ್.ಮಾಲು ಪ್ರೌಢಶಾಲೆ ಪ್ರಥಮ

ಕಾಗವಾಡ 08: ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಿದ ಡಾ. ಶಿರಗಾಂವಕರ ಶಿಕ್ಷಣ ಸಂಸ್ಥೆಯ ರಾಷ್ಟ್ರಪತಿ ಪ್ರಶಸ್ತಿ ಪಡೆದ ದಿ. ರಾಮತೀರ್ಥಕರ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಅಂತರ-ರಾಜ್ಯ ಶಾಲೆಯ ರಸಪ್ರಶ್ನೆ ಕಾರ್ಯಕ್ರಮ ಜರುಗಿತು.

ಶುಕ್ರವಾರ ದಿ. 7ರಂದು ಉಗಾರದ ಶ್ರೀಹರಿ ವಿದ್ಯಾಲಯದಲ್ಲಿ ಅಂತರ-ರಾಜ್ಯ ರಸಪ್ರಶ್ನೆ ಕಾರ್ಯಕ್ರಮ ನೆರವೇರಿತು. ಇದರಲ್ಲಿ ಸುಮಾರು 20 ಶಾಲೆಗಳಿಂದ ತಲಾ ಎರಡು ವಿದ್ಯಾಥರ್ಿಗಳು ಸ್ಪಧರ್ಿಸಿದರು. 

ಸ್ಪಧರ್ೆಯಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗಲಿ ನಗರದ ಎಸ್.ಆರ್.ಮಾಲು ಪ್ರೌಢಶಾಲೆಯ ನಿಕಾಶ ವ್ಹಿ. ಲಾಡಗೆ ಮತ್ತು ಮೇಹರ ಮಹೇಶ ಮಹಾಜನ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದುಕೊಂಡರು. 

ದ್ವೀತಿಯ ಸ್ಥಾನ ವಿಭಾಗಿಸಿ ರಾಯಬಾಗ ಪಟ್ಟಣದ ಪ್ರೌಢಶಾಲೆಯ ಶ್ರೇಯಸ್ ಶಂಕರ ಬಡಿಗೇರ, ಪ್ರಜ್ವಲ ಸದಾಶಿವ ಬಡಿಗೇರ, ಮತ್ತು ಉಗಾರ ಬುದ್ರುಕ ಗ್ರಾಮದ ಜೈ ಜೀನೇಂದ್ರ ಶಿಕ್ಷಣ ಸಂಸ್ಥೆಯ ಆದಿತ್ಯ ಸಾಜನೆ, ಅಮೃತಾ ಸದಲಗೆ ಪಡೆದುಕೊಂಡರು.

ತೃತೀಯ ಸ್ಥಾನ ಶ್ರೀಹರಿ ವಿದ್ಯಾಲಯದ ವಿದ್ಯಾಥರ್ಿಗಳಾದ ಸಾಗರ ಬನಟ್ಟಿ, ಶಂಭುಲಿಂಗ ಅಂಬಿ ಪಡೆದುಕೊಂಡರು.

ಸಮಾರಂಭದ ಅತಿಥಿಗಳಾಗಿ ಜರ್ಮನ್ ದೇಶದ ಬಾಶ್ ಕಂಪನಿಯ ನಾಸಿಕ ವಿಭಾಗದ ಜನರಲ್ ಮ್ಯಾನೆಂಜರ್ರಾದ ಅತುಲ ಖಾನಾಪುರಕರ ಆಗಮಿಸಿದರು. ಶಿಕ್ಷಣ ಸಂಸ್ಥೆ ಆಧ್ಯಕ್ಷ ಪ್ರಫೂಲ ಶಿರಗಾಂವಕರ, ಕಾರ್ಯದಶರ್ಿ ಅನಂತ ಬೇಡೆಕರ, ನಿದರ್ೇಶಕ ದೀಪಚಂದ ಶಹಾ, ವೈಶಾಲಿ ಖಾನಾಪುರಕರ, ಉಗಾರ ಮಹಿಳಾ ಮಂಡಳ ಅಧ್ಯಕ್ಷೆ ಸ್ಮೀತಾತಾಯಿ ಶಿರಗಾಂವಕರ, ಮಾಜಿ ವಿದ್ಯಾಥರ್ಿ ಸಂಘದ ಆಧ್ಯಕ್ಷ ಅಭಿಯಂತರಾದ ಹರಿಭಾವು ಆಠವಲೆ, ಅಣ್ಣಾಸಾಹೇಬ ದೇಶಪಾಂಡೆ, ಉದಯ ರಾಮತಿರ್ಥಕರ, ಜಿ.ಎನ್.ಬಳ್ಳಾರಿ, ಸೇರಿದಂತೆ ಅನೇಕರು ಇದ್ದರು. ಮುಖ್ಯಾಧ್ಯಾಪಿಕೆ ಡಿ.ಡಿ.ಭೋಸಲೆ ಇತರ ಶಿಕ್ಷಕರು ಪಾಲ್ಗೊಂಡಿದ್ದರು.