ಮುಧೋಳ 21: ದಿ.ಕೆ.ಆರ್.ಲಕ್ಕಂರವರ ಪುಣ್ಯತಿಥಿಯ ಅಂಗವಾಗಿ ನಗರದ ಕೆ.ಆರ್.ಲಕ್ಕಂ ಶಾಲೆಯಲ್ಲಿ ನಡೆದ ಅಂತರ್ ಶಾಲಾ ಮಟ್ಟದ ರಸಪ್ರಶ್ನೆ ಸ್ಪಧರ್ೆಯಲ್ಲಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಸಿಬಿಎಸ್ಇ ಶಾಲೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದೆ.
ಮುಧೋಳದ ಎಲ್ಲ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದ ಶಾಲೆಗಳು ಈ ಸ್ಪಧರ್ೆಯಲ್ಲಿ ಭಾಗವಹಿಸಿದ್ದವು. ಈ ಸ್ಪಧರ್ೆಯಲ್ಲಿ ಪ್ರಾಥಮಿಕ ವಿಭಾಗ ಹಾಗೂ ಪ್ರೌಢ ವಿಭಾಗದ ವಿದ್ಯಾಥರ್ಿಗಳಿಗೆ ಕ್ವಿಜ್ ಕಾಂಪಿಟೇಷನ್ ಏರ್ಪಡಿಸಲಾಗಿತ್ತು. ಪ್ರೌಢಶಾಲಾ ವಿಭಾಗದಲ್ಲಿ ಸಿಬಿಎಸ್ಇಯ ವಿದ್ಯಾಥರ್ಿಗಳಾದ ಅನುರಾಗ.ಮ.ಕರೆಹೊನ್ನ ಹಾಗೂ ವೈಶಾಕ ಕೋಲ್ಹಾರ ದ್ವಿತೀಯ ಸ್ಥಾನ ಪಡೆದರು. ಪ್ರಾಥಮಿಕ ವಿಭಾಗದಲ್ಲಿ ಶ್ರೇಯಸ್ ಮಲಘಾಣ ಹಾಗೂ ಅಥರ್ವ ಮಾದಿಕ್ ತೃತೀಯ ಸ್ಥಾನ ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ಈ ವಿದ್ಯಾಥರ್ಿಗಳಿಗೆ ಸಂಸ್ಥೆಯ ಅಧ್ಯಕ್ಷ ಶಿವಕುಮಾರ.ಎಸ್.ಮಲಘಾಣ, ಪ್ರಾಚಾರ್ಯ ಡಾ. ಎಸ್.ಖಾನ್, ಶಿಕ್ಷಕ ಮಲ್ಲೂ ಕಳ್ಳೆನ್ನವರ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.