ಪುಟ್ಟರಂಗಶೆಟ್ಟಿ ವಜಾಗೊಳಿಸುವಂತೆ ಆಗ್ರಹ

ಲೋಕದರ್ಶನ ವರದಿ

ಬ್ಯಾಡಗಿ07: ರಾಜ್ಯ ಸಕರ್ಾರ ಪೆಟ್ರೋಲ್ ಮೇಲೆ ಹೇರಿರುವ ಅಬಕಾರಿ ಸುಂಕ (ಎಕ್ಸೈಸ್ ಡ್ಯೂಟಿ) ವನ್ನು ಕಡಿತಗೊಳಿಸುವುದೂ ಸೇರಿದಂತೆ ಸಚಿವ ಪುಟ್ಟರಂಗಶೆಟ್ಟಿ ವಜಾಕ್ಕೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ತಾಲೂಕ ಘಟಕದ ಕಾರ್ಯಕರ್ತರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಪಟ್ಟಣದ ಹಳೇ ಪುರಸಭೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

   ಹಳೇ ಪುರಸಭೆ ಎದುರು ಜಮಾಯಿಸಿದ ಪಕ್ಷದ ನೂರಾರು ಕಾರ್ಯಕರ್ತರು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸಕರ್ಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

       ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ಕೇಂದ್ರ ಸಕರ್ಾರ ಪೆಟ್ರೋಲ್ ದರವನ್ನು ಕಡಿತಗೊಳಿಸಿದ್ದು ದೇಶದ್ಯಾಂತ ಕೇವಲ 42 ರೂ.ಗಳಿಗೆ 1 ಲೀ. ಪೆಟ್ರೋಲ್ ನೀಡುತ್ತಿದೆ.

   ಆದರೆ ಶೇ.32 ರಷ್ಟು ಅಬಕಾರಿ ಸುಂಕವನ್ನು ಹೇರಿರುವ ರಾಜ್ಯ ಸಕರ್ಾರ ತನ್ನ ಪಾಲಿನ ದರವನ್ನು ಕಡಿಮೆ ಮಾಡಲು ಸಿದ್ಧವಿಲ್ಲ, ಬದಲಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಪೆಟ್ರೋಲ್ ದರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

     ಕಾಂಗ್ರೆಸ್ ಬುದ್ಧಿ ಹೇಳಲಿ: ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಜೆಡಿಎಸ್ನೊಂದಿಗೆ ಅಪವಿತ್ರವಾದ ಮೈತ್ರಿ ಮಾಡಿಕೊಂಡ ಸಕರ್ಾರ ರಚನೆ ಮಾಡಿದೆ. ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಂಡ ಕಾಂಗ್ರೆಸ್ ಜೆಡಿಎಸ್ ವಿರುದ್ಧ ವಿಕ್ರಮ್ ಔರ್ ಬೇತಾಳ್ ಕಥೆಯನ್ನು ಹೇಳುತ್ತಿದೆ, ಕಾಂಗ್ರೆಸ್ಗೆ ಜನಪರ ಕಾಳಜಿಯಿದ್ದರೇ ಪೆಟ್ರೋಲ್ ದರ ವಿಷಯವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಪ್ರತಿಭಟನೆ ನಿಲ್ಲಿಸಿ ತನ್ನ ಮಿತ್ರಪಕ್ಷವಾದ ಜೆಡಿಎಸ್ಗೆ ಬುದ್ಧಿ ಹೇಳುವ ಮೂಲಕ ಪೆಟ್ರೋಲ್ ಮೇಲೆ ರಾಜ್ಯ ಸಕರ್ಾರ ಹೇರಿರುವ ಅಬಕಾರಿ ಸುಂಕವನ್ನು ಕಡತಗೊಳಿಸುವಂತೆ ಆಗ್ರಹಿಸಿದರು.

ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಿಎಸ್ಟಿ ಕೈಬಿಡಲಿ: ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪೆಟ್ರೋಲ್ ದರ ಸೇರಿದಂತೆ ಜಿಎಸ್ಟಿ ವಿಷಯವನ್ನು ಮುಂದಿಟ್ಟುಕೊಂಡು ದೇಶದೆಲ್ಲೆಡೆ ತಿರುಗಾಡುತ್ತಿದ್ದಾರೆ, ಒಂದು ದೇಶ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ರಾಹುಲ್ ಗಾಂಧಿಯವರಿಗೆ, ಜನಪರ ಕಾಳಜಿ ಇದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಿಎಸ್ಟಿಯನ್ನು ಹಿಂಪಡೆಯಲು ಸೂಚಿಸುವಂತೆ ಸವಾಲೆಸೆದರು.

    ಲೂಟಿಕೋರರೆಲ್ಲಾ ಇಲ್ಲಿ ಮಿಶ್ರ: ಸುರೇಶ ಅಸಾದಿ ಮಾತನಾಡಿ, ಸಮ್ಮಿಶ್ರ ಸಕರ್ಾರಕ್ಕೆ ಬೇರೆ ಅರ್ಥ ಕೊಡುವ ಅಗತ್ಯವಿಲ್ಲ, ಇದೊಂದು ಲೂಟಿಕೋರರೆಲ್ಲಾ ಸೇರಿ ರಚಿಸಿರುವ ಸಕರ್ಾರ, ಸಚಿವರ ಮನೆಗಳಲ್ಲಿ ಕಂತೆ ಕಂತೆ ನೋಟುಗಳ ಸಿಗುತ್ತಿವೆ, ಸಕರ್ಾರದ ಬೊಕ್ಕಸ ಖಾಲಿ ಮಾಡಲು ಯಾರ ಅವಶ್ಯಕತೆಯಿಲ್ಲ, ಸಚಿವ ಸಂಪುಟದ ಸದಸ್ಯರಷ್ಟೇ ಸಾಕು, ರೈತರ ಸಾಲಮನ್ನಾ ಮಾಡಲು ಹಣವಿಲ್ಲವೆನ್ನುವ ರಾಜ್ಯ ಸಕರ್ಾರ ಇದೀಗ ಸ್ಟೀಲ್ ಬ್ರಿಡ್ಜ್ಗೆ ನಿಮರ್ಾಣಕ್ಕೆ ಅನುದಾನ ಕೊಡುವುದಾಗಿ ಹೇಳುತ್ತಿದೆ, ಇದರಿಂದ ಎಚ್ಡಿಕೆ ಅವರ ಜನಪರ ಕಾಳಜಿ ಗೊತ್ತಾಗುತ್ತದೆ, ಕೂಡಲೇ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

  ಪಕ್ಷದ ಮುಖಂಡರಾದ ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ, ಬಸವರಾಜ ಹಲಗೇರಿ, ರವೀಂದ್ರ ಪಟ್ಟಣಶೆಟ್ಟಿ, ವೈ.ಎನ್.ಕರೇಗೌಡ್ರ, ನಾಗರಾಜ ಹಾವನೂರ, ಉಮೇಶ ರಟ್ಟಿಹಳ್ಳೀ, ಚಂದ್ರಪ್ಪ ಬಾಕರ್ಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.