ಜಾನಪದ ಕಲಾವಿದರಿಗೆ ಮೀಶಲಾತಿ ಸೌಲಭ್ಯ ಕಲ್ಪಿಸಿ: ಡಾ.ಮನಗೂಳಿ

ಲೋಕದರ್ಶನ ವರದಿ

ಸಿಂದಗಿ 26: ಸರಕಾರದ ಯೋಜನೆಗಳಲ್ಲಿ ಜಾನಪದ ಕಲಾವಿದರಿಗೆ ಮಿಶಲಾತಿ ಸೌಲಭ್ಯ ನೀಡಬೇಕು ಎಂದು ಸ್ಥಳಿ ಸಿ.ಎಂ.ಮನಗೂಳಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.

ಶನಿವಾರ ಪಟ್ಟಣದ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಕನರ್ಾಟಕ ಜಾನಪದ ಪರಿಷತ್ತು ತಾಲೂಕಾ ಘಟಕ ಹಾಗೂ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ಸಂಭ್ರಮ ಹಾಗೂ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಜಾನಪದ ಕಲೆಗಳು ಮುಂದಿನ ಪಿಳಿಗಳಿಗೆ ಉಳಿಯಬೇಕಾದರೆ ಸರಕಾರದ ಪಾತ್ರ ಪ್ರಮುಖವಾಗಿದೆ. ಮರೆಯಾಗುತ್ತಿರುವ ಜಾನಪದ ಕಲಾವಿದರಿಗೆ ಪ್ರೋತ್ಸಾಹದ ಜೊತೆಗೆ ಆಥರ್ಿಕ ನೆರವು ಅಗತ್ಯ. ಯುವ ಜಾನಪದ ಕಲಾವಿದರಿಗೆ ಹಾಗೂ ಜಾನಪದ ಕಲಾವಿದರ ಕುಟುಂಬದ ಮಕ್ಕಳಿಗೆ ಸರಕಾರಿ ಉದ್ಯೋಗ ಹಾಗೂ ಸರಕಾರಿ ಸೌಲಭ್ಯಗಳಲ್ಲಿ ಮೀಸಲಾತಿ ನೀಡುವುದು ಅಗತ್ಯ. ಜೊತೆಗೆ ಸಂಘ-ಸಂಸ್ಥೆಗಳ ಸಹಕಾರವು ಅಗತ್ಯವಿದೆ. ಜಾನಪದ ಸಾಹಿತ್ಯ ಉಳಿಸುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಾನಪದ ಕಲಾವಿದರಿಗೆ ಸೂಕ್ತ ವೇದಿಕೆ ಸಿಗದೆ ಅವರು ಎಲೆ ಮರೆ ಕಾಯಿಯಂತಾಗಿದ್ದಾರೆ. ಅಂಥ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡುವುದರ ಜೊತೆಗೆ ಅವರ ಜಾನಪದ ಕಲೆ ಪ್ರೋತ್ಸಾಹಿಸುತ್ತಿರು ಕನರ್ಾಟಕ ಜಾನಪದ ಪರಿಷತ್ತು ವಿಜಯಪುರ ಜಿಲೆ ಮತ್ತು ಸಿಂದಗಿ ತಾಲೂಕಾ ಘಟಕಗಳ ಕಾರ್ಯ ಶ್ಲಾಘನೀಯ ಎಂದರು. ಸರಕಾರದ ಯೋಜನೆಗಳಲ್ಲಿ ಜಾನಪದ ಕಲಾವಿದರಿಗೆ ಮಿಶಲಾತಿ ಸೌಲಭ್ಯ ನೀಡಬೇಕು. 

ಕಾರ್ಯಕ್ರಮ ಉದ್ಘಾಟಿಸಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ, ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿದರ್ೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆ ಹೆಚ್ಚು ಜಾನಪದ ಕಲಾವಿದರನ್ನು ಹೊಂದಿರುವುದು ಹೆಮ್ಮೆಯ ವಿಷಯ. ಆದರೆ ಇತ್ತೀಚೆಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಗೀತ ಮರೆಯಾಗುತ್ತಿರುವುದು ವಿಷಾದಕರ. ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳುವ ಜೊತೆಗೆ ಜನಪದರಿಂದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯ ಕನರ್ಾಟಕ ಜಾನಪದ ಪರಿಷತ್ತು ಮಾಡಬೇಕು. ಜಾನಪದ ಉಳಿಸಿ ಬೆಳೆಸುವಲ್ಲಿ ನಮ್ಮ ಸಹಕಾರ ಇದೆ ಎಂದರು.

ಸಾನಿಧ್ಯ ವಹಿಸಿದ ರಾಂಪೂರ ಪಿ.ಎ. ಗ್ರಾಮದ ಸಮರ್ಥ ಸದ್ಗುರು ವಿರೇಶ್ವರ ಶಿವಯೋಗಿಗಳು ಆಶೀರ್ವಚನ ನೀಡಿ, ವಿಜಯಪುರ ಜಿಲ್ಲೆಯಲ್ಲಿ ಜಾನಪದದ ತವರೂರು. ಜಾನಪದ ಸಂರಕ್ಷಣೆಗೆ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಹಾಗೂ ರಮೇಶ ಪೂಜಾರ ನೇತೃತ್ವದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಪಾದಕ ಟಿ.ಕೆ., ಚಿತ್ರಕಲಾ ಶಿಕ್ಷಕ ಎಂ.ಬಿ.ಅಲ್ದಿ, ಕಲಕೇರಿಯ ಬಸವೇಶ್ವರ ಕಾಲೇಜಿನ ದೈಹಿಕ ನಿದರ್ೇಶಕ ಶಾಂತೇಶ ದುಗರ್ಿ, ಶಿಲ್ಪ ಕಲಾವಿದ ರಮೇಶ ರೇಬಿನಾಳ, ನೃತ್ಯ ಕಲಾವಿದೆ ಪ್ರೀಯಾಂಕಾ ಸರಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸನ್ಮಾನಿತರು ಸನ್ಮಾನೋತ್ತರವಾಗಿ ಮಾತನಾಡಿದರು.

ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾಥರ್ಿಗಳಾದ ಅಶ್ವಿನಿ ಬೂದಿಹಾಳ, ಪಲ್ಲವಿ ಮಾಳೇಗಾರ, ವಿಜಯಲಕ್ಷ್ಮಿ ಕುಂಬಾರ, ಭಾಗ್ಯಶ್ರೀ ಕೆಂಭಾವಿ, ಲಕ್ಷ್ಮಿ ದೇವೂರ, ಸೋನಾಲಿ ರೋಡಗಿ, ಶರಣಬಸು ನಂದ್ಯಾಳ, ಸೋಮಲಿಂಗ ಪೂಜಾರಿ ಅವರು ಕಿರುನಾಟಕ ಪ್ರದಶರ್ಿಸಿದಿರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ಮಾಡಿದರು. ಜಿಲ್ಲಾಧ್ಯಕ್ಷ ಪ್ರೊ.ಬಿ.ಎನ್.ಪಾಟೀಲ ಇಬ್ರಾಹಿಂಪೂರ, ತಾಲೂಕಾ ಅಧ್ಯಕ್ಷ ರಮೇಶ ಪೂಜಾರ, ಜಿಲ್ಲಾ ಪ್ರಧಾನಕಾರ್ಯದಶರ್ಿ ಈರಣ್ಣಗೌಡ ಪಾಟೀಲ ಹಂದಿಗನೂರ, ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ ಅವರು ಮಾತನಾಡಿದರು. ಸದಸ್ಯ ಭಾಗಣ್ಣ ಶಾಬಾದಿ, ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾಥರ್ಿಗಳು ಮತ್ತು ಜಾನಪದ ಕಲಾವಿದರು ಭಾಗವಹಿಸಿದ್ದರು. ಸಿದ್ದಬಸವ ಕುಂಬಾರ ಸ್ವಾಗತಿಸಿದರು. ಯಲ್ಲಾಲಿಂಗ ಪೂಜಾರಿ ನಿರೂಪಿಸಿದರು. ಅಶ್ವಿನಿ ಬೂದಿಹಾಳ ವಂದಿಸಿದರು.