ರೈತರಿಗೆ ಶೀಘ್ರವಾಗಿ ಬರ ಪರಿಹಾರ ಒದಗಿಸಿ: ದ್ಯಾಮನಗೌಡ್ರ

ಲೋಕದರ್ಶನ ವರದಿ

ಯಲಬುಗರ್ಾ 05: ತಾಲೂಕಿನಲ್ಲಿ ಹಿಂಗಾರು ಮತ್ತು ಮುಂಗಾರು ಬಿತ್ತನೆಯಲ್ಲಿ ಶೇ 46% ಮಳೆ ಕೊರತೆಯಿಂದಾಗಿ ಬೆಳೆಹಾನಿಯಾಗಿದೆ ಹಾನಿಯಾದ ಜಮೀನುಗಳಿಗೆ ಬೇಟಿ ನೀಡಿ ಜಿಪಿಎಸ್ ಮುಖಾಂತರ ಹಾನಿಯಾದ ಮಾಹಿತಿ ಸಂಗ್ರಹಿಸಿದೆ ಕೆಲವು ಕಡೆ ಬಿತ್ತನೆ ಮಾಡಿದ ಕಡಲೆ, ಜೊಳ ಮಳೆ ಅಭಾವದಿಂದ ರೈತರ ಬೆಳೆದ ಬೆಳೆಗಳು ಹಾಳಾಗುತ್ತಿದ್ದು ಸರಕಾರಕ್ಕೆ ಎಲ್ಲ ವರದಿಯನ್ನು ನೀಡಲಾಗಿದ್ದು ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂದು ತಾಪಂ ಅದ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ ಹೇಳಿದರು. 

ಸರಕಾರದಿಂದಲೆ ಬೆಳೆ ಹಾನಿಯಾದ ಹಣವನ್ನು ನೀಡಲಾಗುವುದು ಎಂದರು.  ಇಲ್ಲಿಯ ತಾಲೂಕ ಪಂಚಾಯತ ಸಭಾ ಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಮಾಸಿಕ ಸಭೆಯಲ್ಲಿ ಭಾಗವಸಿ ಮಾತನಾಡಿದರು. 

ಇದಕ್ಕೆ ಪ್ರತಿಕ್ರೀಯಿಸಿದ ಕೃಷಿ ಅಧಿಕಾರಿ ನಮ್ಮ ಇಲಾಖೆಯಿಂದ ಸರಕಾರಕ್ಕೆ ವರದಿ ಸಲ್ಲಿಸಿದ್ದು ಪರಿಹಾರ ಹಣ ಬಿಡುಗಡೆಯಾದ ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಲಾಗುವದು ಎಂದರು.

ತಾ.ಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ ತಾಲೂಕಿನಾದ್ಯಾಂತ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ದಂತಹ ಭಯಾನಕ ಖಾಯಿಲೆ ಹರಡುತಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೇ ಜಾಗೃತಿ ಸಭೆ, ಜನಸ್ನೇಹ ಸಭೆ ಕೇಂದ್ರ ತೇರಯಲು ಸಂಪೂರ್ಣ ವಿಫಲಾರಿಗಿದ್ದಿರಿ ಮಂಗಳೂರು, ವಂಕಲಕುಂಟಾ ಬೇವೂರ, ಮುಧೋಳ, ಬಂಡಿಹಾಳ ಇತರೆ ಆರೋಗ್ಯ ಕೇಂದ್ರಗಳನ್ನು ರೋಗಿಗಳು ವೈಧ್ಯರು ಹಾಗೂ ಸಿಬ್ಬಂದಿ ಇಲ್ಲದೆ ಸರಿಯಾದ ಚಿಕಿತ್ಸೆ ಸಿಗದೆ ನಾಗರಿಕರು ಪರದಾಡುತ್ತಿದ್ದು ಇಲ್ಲಿಯವರೆಗೂ ಯಾವುದೇ ರೀತಿಯ ಮುಂಜಾಗೃತ ಕ್ರಮಗೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ವೈದ್ಯಾಧಿಕಾರಿ ಮಂಜುನಾಥ ಭ್ಯಾಲಹುಣಸಿ ಪ್ರತಿಕ್ರಿಯಿಸಿ ಕೆಲ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಗಳಲ್ಲಿ ಜಾಗೃತಿ ಸಭೆ ಹಾಗೂ ಜನರಿಗೆ ನಾಗರಿಕರಿಗೆ ರೋಗ ಹರಡದಂತೆ ಮುಂಜಾಗ್ರತ ವಹಿಸುವಂತೆ ಸಿಬ್ಬಂದಿಗೆ ಸೂಚಿಸಿಲಾಗಿದೆ. ತುತರ್ು ಸೇವೆ ನೀಡಲು ಸಿಬ್ಬಂದಿಗಳು ಸೂಚಿಸಲಾಗಿದೆ ಎಂದರು.

  ಸ್ಥಾಯಿ ಸಮೀತಿ ಅಧ್ಯಕ್ಷ ರುದ್ರಪ್ಪ ಮರಕಟ್ ಮಾತನಾಡಿ 2017-18 ನೇ ಸಾಲಿನಲ್ಲಿ ತಾಲೂಕಿನಲ್ಲಿ ಸರಕಾರಿ ಒಡೆತನದ ಯಾವ ಕಟ್ಟಡಗಳು ಪೂರ್ಣಗೊಂಡಿವೆ ಹಾಗೂ ಪ್ರಗತಿ ಹಂತದಲ್ಲಿದೆ ಇಲ್ಲಿಯವರೆಗೆ ಸಂಬಂಧ ಪಟ್ಟ ಅಧಿಕಾಗಿಳಿಗೆ ಮಾಹಿತಿಯಿಲ್ಲ ತಾಲೂಕಿನಲ್ಲಿ ಶಾಲಾ ಕಟ್ಟಡಗಳು ಸಂಪೂರ್ಣ ಸಿಥಿಲಗೊಂಡಿದ್ದು ಅವುಗಳನ್ನು ತೆರವುಗೊಳಿಸಿ ಸುಸಜ್ಜಿತ ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡಗಳ ನಿಮರ್ಿಸಿಕೊಡಬೇಕೆಂದು ಪಂಚಾಯತ ರಾಜ್ ಹಾಗೂ ಲೋಕಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು. 

ಈಗಾಗಲೇ ತಾಲೂಕನ್ನು ಭರಗಾಲ ಪ್ರದೇಶವೆಂದು ಘೋಷಣೆಯಾಗಿದ್ದು ರೈತರು, ಕೂಲಿಕಾಮರ್ಿಕರು ಗುಳೆ ಹೋಗುವದನ್ನು ತಪ್ಪಿಸಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಿರಿ ಎಂದು ಅಧಿಕಾರಿಗಳಗೆ ಸೂಚಿಸಿದರು.

  ಸಭೆಯಲ್ಲಿ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ.ತಿಮಪ್ಪ, ಲೋಕಪಯೋಗಿ ಅಧಿಕಾರಿ ಉಮಾಪತಿ ಶೆಟ್ಟರ, ಪಂಚಾಯತ ರಾಜ್ ಇಂಜನಿಯರ ಉಮೇಶ ಮಂಡಸೊಪ್ಪಿ, ಸಿಡಿಪಿಓ ಶರಣಮ್ಮ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.