ಕಬ್ಬು ವಾಹನ ತಡೆ, ನೀರಿನ ಪೈಪ್ಲೈನ್ಗೆ ಧಕ್ಕೆ ಖಂಡಿಸಿ ಪ್ರತಿಭಟನೆ


ಲೋಕದರ್ಶನ ವರದಿ

ಕಾಗವಾಡ 20: ಕಬ್ಬು ಬೆಳೆಗಾರ ಹೋರಾಟಗಾರರ ಹೆಸರಿನಲ್ಲಿ ಕೆಲವರು ರಾಜಕೀಯ ಪ್ರೇರಿತವಾಗಿ ಅಥಣಿ ಪೂರ್ವ ಭಾಗದ ಬಹುಗ್ರಾಮ ಯೋಜನೆಗಳಿಂದ ಸುಮಾರು 15 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಪೈಪ್ಲೈನ್ 3 ದಿನಗಳ ಹಿಂದೆ ಒಡೆದುಹಾಕಿದ್ದು, ಇಲ್ಲಿಯ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಸೂಕ್ತ ಬೆಲೆ ಎಲ್ಲರಿಗೂ ಬೇಕು. ಆದರೆ, ಕೆಲವರು ತೆಗೆದುಕೊಂಡ ಈ ಕ್ರಮ ಖಂಡಿಸಿ ಹಿರಿಯ ರೈತ ರಾಮು ಭಗತ, ತಾಪಂ ಸದಸ್ಯ ಸುಧಾಕರ ಭಗತ, ಸಂಭಾಜಿ ಪಾಟೀಲ ಇವರ ನೇತೃತ್ವದಲ್ಲಿ ನೂರಾರು ರೈತರು ಲೋಕುರ ಗ್ರಾಮದಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು.

ಮಂಗಳವಾರ ದಿ. 20ರಂದು ಕಾಗವಾಡ ತಾಲೂಕಿನ ಲೋಕುರ ಗ್ರಾಮದಲ್ಲಿ ಕಾಗವಾಡ ಕ್ಷೇತ್ರದ ಪೂರ್ವ ಭಾಗದ ಕೆಂಪವಾಡ, ಜಂಬಗಿ, ಮದಭಾವಿ, ಮಂಗಸೂಳಿ, ಲೋಕುರ, ಸೇರಿದಂತೆ ಅನೇಕ ಗ್ರಾಮದ ರೈತರು ಒಂದುಗೂಡಿ ತಮ್ಮ ಆಕ್ರೋಶ ಹೊರಹಾಕಿದರು. 

ಕಬ್ಬು ಬೆಳೆಗಾರ ರೈತರಿಗಾಗಿ ರೈತ ಸಂಘಟನೆಯಿಂದ ಹೆಚ್ಚಿನ ದರ ಕೇಳಲು ಪ್ರತಿಭಟಿಸುತ್ತಿದ್ದಾರೆ. ಬೇಡಿಕೆಗಳು ಸರಕಾರದ ಮುಂದೆ ಇಡುತ್ತಿದ್ದಾರೆ. ಇದು ಸರಿಯಿದೆ. ಸಕ್ಕರೆ ಕಾಖರ್ಾನೆಗಳಿಂದ ಸೂಕ್ತ ದರ ದೊರೆತರೆ ಎಲ್ಲ ರೈತರಿಗೆ ಲಾಭವಿದೆ. ಇದಕ್ಕೆ ನಮ್ಮ ಬೆಂಬಲವಿದೆ. ಆದರೆ, ಇದರಲ್ಲಿಯ ಕೆಲವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ನಾಲ್ಕು ಸಕ್ಕರೆ ಕಾಖರ್ಾನೆಗಳು ದರ ನೀಡಿಲ್ಲಾ. ಆದರೆ ಕೆಂಪವಾಡ ಸಕ್ಕರೆ ಕಾಖರ್ಾನೆ ಅಧ್ಯಕ್ಷರ ಶವಯಾತ್ರೆ ತೆಗೆಯುವುದು, ಬೈಯುವುದು ಇದು ರಾಜಕೀಯವಾಗಿದೆ ಎಂದು ಹೇಳಿ, ಕಳೆದ ನಾಲ್ಕು ದಿನಗಳಿಂದ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಬಂದ ವಾಹನಗಳನ್ನು ತಡೆದು ಇಟ್ಟಿದ್ದಾರೆ. ಇದರಿಂದ ಅನೇಕ ವಾಹನಗಳ ಟಾಯರ್ಗಳು ಒಡೆಯುತ್ತಿವೆ. ಕಬ್ಬು ನಾಶವಾಗುತ್ತಿದೆ. ಇದು ಗಮನದಲ್ಲಿ ತೆಗೆದುಕೊಂಡ ಸಕ್ಕರೆ ಕಾಖರ್ಾನೆಗಳಿಗೆ ವಾಹನಗಳನ್ನು ಕಳುಹಿಸಿರಿ ಎಂದು ರೈತ ಮುಖಂಡ ವಿರೇಶ ಖಾನಗೌಡಾ[ಜಂಬಗಿ]ಹೇಳಿದರು.

 ತಡೆದ ವಾಹನಗಳು ಬಿಡದೆ ಹೋದರೆ ರಸ್ತೆತಡೆ:

ಕಬ್ಬಿನ ಬಿಲ್ಲಿಗಾಗಿ ಹೋರಾಟ ಮಾಡುತ್ತಿರುವ ರೈತ ಸಂಘಟನೆಗಳು ವಾಹನಗಳನ್ನು ತಡೆದು 4 ದಿನ ಗತಿಸಿದ್ದು, ವಾಹನಧಾರಕರು, ಕಬ್ಬು ಬೆಳೆಗಾರರು ಸಮಸ್ಯೆಯಲ್ಲಿದ್ದಾರೆ. ತಮ್ಮ ಬೇಡಿಕೆಗಳನ್ನು ಕಾಖರ್ಾನೆ ಪ್ರಾರಂಭಿಸಿ ಕೇಳಬಹುದು. ಆದರೆ, ಈಗಾಗಲೇ ಕಬ್ಬು ಕಠಾವಣಿ ಮಾಡಿ ರಸ್ತೆಗೆ ತಂದಂತ ವಾಹನಗಳನ್ನು ತಡೆದು ರೈತರೇ ರೈತರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ಶೀಘ್ರದಲ್ಲಿ ತಡೆದ ವಾಹನಗಳನ್ನು ಬಿಡಬೇಕು. ಕುಡಿಯುವ ನೀರಿನ ಯೋಜನೆಯ ಒಡೆದ ಪೈಪ್ ಬಳಿಸಿ ವ್ಯವಸ್ಥೆ ಮಾಡಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆಯಲ್ಲಿದ್ದ ನಾವು ರಸ್ತೆತಡೆ ಮಾಡುತ್ತೇವೆ ಎಂದು ತಾಪಂ ಸದಸ್ಯ ಸಂಭಾಜಿ ಪಾಟೀಲ, ಸುಧಾಕರ ಭಗತ ಹೇಳಿದರು.

ಪ್ರತಿಭಟನೆಯಲ್ಲಿ ರೈತರಾದ ವಿಜಯ ವಾಘಮೋಡೆ, ಪುಂಡ್ಲಿಕ್ ಪಾಟೀಲ, ರಾವಸಾಹೇಬ ವಾಘಮೋಡೆ, ಚಂದರ ಕೇದಾರೆ, ಅಮರ್ ಶೇಖ, ಸಾವಂತ ಆದುಕೆ, ಪ್ರಕಾಶ ನಾಯಿಕ, ಪ್ರತೀಕ ಮಾನೆ, ಗಣೇಶ ನಾಯಿಕ, ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.