ಲೋಕದರ್ಶನ ವರದಿ
ರಾಯಬಾಗ 09: ಪಟ್ಟಣದಲ್ಲಿ ಅಂಗನವಾಡಿ, ಗ್ರಾಮ ಪಂಚಾಯತ, ಅಕ್ಷರ ದಾಸೋಹ, ಆಶಾ ಕಾರ್ಯಕತರ್ೆಯರು, ಕೂಲಿ ಕಾಮರ್ಿಕರು ಹಾಗೂ ವಿವಿಧ ಕಾಮರ್ಿಕ ಸಂಘಟನೆಗಳು ತಾಲೂಕಾ ಪಂಚಾಯತ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಝೇಂಡಾ ಕಟ್ಟೆ ಬಳಿ ರಸ್ತೆ ತೆಡ ನಡೆಸಿ, ಬಹಿರಂಗ ಸಭೆ ಏರ್ಪಡಿಸಿ ಕೇಂದ್ರ ಸಕರ್ಾರದ ವಿರುದ್ಧ ಉಗ್ರವಾಗಿ ಪ್ರತಿಭಟಿಸಿ ತಹಶೀಲದಾರ ಡಿ.ಎಸ್.ಜಮಾದಾರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ದುಡಿಯುವ ವರ್ಗದವರ ಪ್ರಮುಖ ಬೇಡಿಕೆಗಳಾದ ಐಸಿಡಿಎಸ್, ಬಿಸಿಯೂಟ ಯೋಜನೆಗೆ ಅನುದಾನ ಕಡಿತಗೊಳಿಸಬಾರದು, 18 ಸಾವಿರ ರೂ. ಕನಿಷ್ಟ ವೇತನ ಜಾರಿ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು, ಸಾಮಾಜಿಕ ಸೇವಾ ಭದ್ರತೆಗಾಗಿ ರೂ.6000 ಮಾಸಿಕ ಪಿಂಚಣಿ ನೀಡಬೇಕು. ಅಕ್ಷರ ದಾಸೋಹ ಹಾಗೂ ಐಸಿಡಿಎಸ್ ಯೋಜನೆಗಳನ್ನು ಖಾಸಗೀಕರಣ ಮಾಡಬಾರದು. ಇದರಿಂದ ಲಕ್ಷಾಂತರ ಮಹಿಳೆಯರು ಬೀದಿ ಪಾಲಾಗುತ್ತಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ, ಯುಕೆಜಿ ರೀತಿಯ ಶಿಕ್ಷಣಕ್ಕೆ ಕಾನೂನು ತರಬೇಕು. ಗುತ್ತಿಗೆ ಕಾಮರ್ಿಕ ಪದ್ಧತಿ ನಿಷೇಧವಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗಾಗಿ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳು ಜಾರಿಯಾಗಬೇಕೆಂಬ ಬೇಡಿಕೆಗಳು ಸೇರಿದಂತೆ ಹಲವಾರು ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಡಿಸಿದರು.
ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ ಪ್ರಯುಕ್ತ ಸಾರಿಗೆ ಬಸ್ಸುಗಳು ಚಲಿಸದೇ, ಬಸ್ ನಿಲ್ದಾಣದಲ್ಲಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಬಸ್ಗಳು ಇಲ್ಲದೇ ಪರದಾಡುವಂತಾಯಿತು. ಯುನಿಯನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಹಾಗೂ ಪ್ರಧಾನ ಅಂಚೆ ಕಚೇರಿ ನೌಕರರು ಬಂದ್ಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಈ ಕಚೇರಿಗಳು ಕಾರ್ಯ ನಿರ್ವಹಿಸಲಿಲ್ಲ.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಕಕ್ಷೆ ಚನ್ನಮ್ಮ ಗಡಕರಿ, ಉಪಾಧ್ಯಕ್ಷೆ ಆಯೇಶಾ ದೇಸಾಯಿ, ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಬಾಗಪ್ಪ ಚೌಗುಲಾ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಭಾರತಿ ಜೋಗನ್ನವರ, ರಾಜು ಚವ್ಹಾನ, ರಮೇಶ ಪಾಟೀಲ, ಬಾಬು ಗೇನಾನಿ ಆನಂದ ಅಸೋದೆ, ಪ್ರಕಾಶ ಕಾಂಬಳೆ, ಅನ್ನಪೂರ್ಣ ಸಂಕ್ರಾವತ, ಜಯಶ್ರೀ ಪೋಳ, ಭಾರತಿ ಹಿರೇಮಠ, ಜಯಶ್ರೀ ಖಾನಟ್ಟಿ, ಟಿ.ಪಿ.ನಾಯಿಕ, ಎ.ಎಸ್.ಯರಗಟ್ಟಿ ಅಂಗನವಾಡಿ, ಗ್ರಾಮ ಪಂಚಾಯತ ಹಾಗೂ ಅಕ್ಷರ ದಾಸೋಹ ನೌಕರರು ಸೇರಿದಂತೆ ಅಸಂಘಟಿತ ಕಾಮರ್ಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.