ಲೋಕದರ್ಶನ ವರದಿ
ಮುಂಡಗೋಡ,21 : ತಾಲೂಕಿನ ಮೈನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಹಾಗೂ ಶಾಲಾಭಿವೃದ್ದಿ ಸಮಿತಿಯವರು ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆದಿದೆ.
ಶಿಕ್ಷಕರ ಕೊರತೆ ಹಾಗೂ ಇರುವ ಶಿಕ್ಷಕರು ಸರಿಯಾಗಿ ಪಾಠ ಮಾಡದೇ ಇರುವುದರಿಂದ ಈ ಘಟನೆ ನಡೆಯಲು ಕಾರಣವೆನ್ನಲಾಗಿದೆ
ಮೈನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಒಟ್ಟು 303ವಿದ್ಯಾಥರ್ಿಗಳು ಓದುತ್ತಿದ್ದು ಕೇವಲ 7ಜನ ಶಿಕ್ಷಕರಿದ್ದು ವಿದ್ಯಾಥರ್ಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲದೇ ಇರುವುದು ವಿದ್ಯಾಥರ್ಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗಿದೆ. ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಹಾಗೂ ದೈಹಿಕ ಶಿಕ್ಷಕರು ಇರುವುದಿಲ್ಲ. ಇಲ್ಲಿದ್ದ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ. ಅಲ್ಲದೇ ಈ ಶಾಲೆಯ 2 ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿದೆ. ಅವರನ್ನು ಇಲ್ಲಿಂದ ವಗರ್ಾಯಿಸಿ ಬೇರೆ ಮೂರು ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಂತೋಷ ಮಹಾಲಿಂಗಣ್ಣ ಮತ್ತು ಸಿ.ಆರ್.ಪಿ. ಕಾಂತೇಶ ಮಾತನಾಡಿ ಶನಿವಾರದೊಳಗಾಗಿ ಸದರಿ ಇಬ್ಬರು ಶಿಕ್ಷಕರನ್ನು ಬದಲಾಯಿಸಿ ಮೂವರು ಅತಿಥಿ ಶಿಕ್ಷಕರನ್ನು ನಿಯೋಜಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಶನಿವಾರದೊಳಗೆ ಶಿಕ್ಷಕರನ್ನು ನಿಯೋಜಿಸದಿದ್ದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಈ ವೇಳೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ ಆರ್.ವಿ., ಗ್ರಾ.ಪಂ. ಸದಸ್ಯರಾದ ಉದಯಕುಮಾರ ನಾಯ್ಕ ಮತ್ತು ರೂಪಾ ಸಿದ್ದಿ, ವಿಜಯಕುಮಾರ ಕುರುಣಾಕರನ್, ಬಮ್ಮು ಪಟಕಾರೆ, ಬಾಳು ಗಾವಡೆ, ಉತ್ತಮ ಇಂಗೋಳೆ, ರಾಮು ಅವಣೆ, ದಾವು ಜೋರೆ, ಮಂಜುನಾಥ ಮುಚ್ಚಟ್ಟಿ, ಅಶೋಕ ಶೇಟ ಹಾಗೂ ಇತರರಿದ್ದರು.