ಲೋಕದರ್ಶನ ವರದಿ
ತಾಳಿಕೋಟೆ 23: ಪ್ರವಾದಿ ಮಹ್ಮದ ಅವರ ನೈಜೀಕ ಬಧುಕನ್ನು ಎಲ್ಲರಿಗೂ ಪರಿಚಯಿಸುವ ಕಾರ್ಯ ಜಮಾತೆ ಇಸ್ಲಾಮಿ ಹಿಂದ್ ಘಟಕ ಕಳೆದ 70 ವರ್ಷಗಳಿಂದ ಮಾಡುತ್ತಾ ಸಾಗಿದೆ ಎಂದು ಇಲಕಲ್ಲದ ಪ್ರೋ.ಲಾಲಹುಸೇನ ಕಂದಗಲ್ಲ ಅವರು ನುಡಿದರು. ದಿ.22ರಂದು ಸ್ಥಳೀಯ ಜಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ಎಸ್.ಕೆ.ಪ.ಪೂ. ಮಹಾ ವಿದ್ಯಾಲಯದಲ್ಲಿ ಪ್ರವಾದಿ ಮಹ್ಮದ ಪೈಗಂಬರವರ ಜನ್ಮ ದಿನಾಚರಣೆ ಕುರಿತು ಏರ್ಪಡಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು 15 ದಿನಗಳ ಕಾಲ ಪ್ರವಾದಿ ಮಹ್ಮದ ಪೈಗಂಬರ ಅವರ ಜನ್ಮ ದಿನದ ಕುರಿತು ಅಭಿಯಾನವನ್ನು ಕಳೆದ ದಿ. 16 ರಿಂದ 30 ರ ವರೆಗೆ ರಾಜ್ಯ ಜಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಕಷ್ಟು ಪ್ರವಾದಿಗಳು ದೇಶ ವಿದೇಶಗಳಲ್ಲಿಯೂ ಬಂದಿದ್ದಾರೆ ಅವರ ಭಾಷೆ ವಿಚಾರಗಳು ಸಂದೇಶಗಳು ಒಂದೇ ಆಗಿತ್ತು ಅದುವೇ ಎಲ್ಲರೂ ಒಂದೇ ದೇವನು ಒಬ್ಬನೇ ಎಂಬ ಸಂದೇಶ ಎಲ್ಲರೂ ಸಾರಿದ್ದಾರೆಂದರು. ಪ್ರವಾದಿಗಳು ಸತ್ಯವನ್ನು ಬಚ್ಚಿಡುವವರಲ್ಲಾ ಸತ್ಯವನ್ನು ಬಿಚ್ಚಿಡುವವರಾಗಿದ್ದಾರೆಂದು ಹೇಳಿದ ಪ್ರೋ.ಕಂದಗಲ್ಲ ಅವರು ನಿಭರ್ಿತವಾಗಿ ದೇವನ ಸಂದೇಶವನ್ನು 12 ನೇ ಶತಮಾನದಲ್ಲಿ ಬಸವಣ್ಣನವರೂ ಸಹ ಇಟ್ಟಿದ್ದಾರೆಂದರು. ಧಾಮರ್ಿಕ ಚಿಂತನೆಯೊಂದಿಗೆ ವಿದ್ಯಾಥರ್ಿಗಳು ಶಾಲೆ ಕಾಲೇಜುಗಳಲ್ಲಿ ಕಲಿಯಬೇಕು ಶಿಕ್ಷಣದಲ್ಲಿ ನೈತಿಕತೆ ಮನುಷ್ಯಾತ್ಮ ಎಂಬುದಲ್ಲಾ ಮಾನವೀಯತೆ ಎಂಬುದು ಬೇಕು ಎಂದರು.
ಕುಟುಂಬದ ಅಭದ್ರತೆ ಕುರಿತು ವಿದೇಶಗಳಲ್ಲಿ ಕೇಳುತ್ತಿದ್ದೇವು ಆದರೆ ಈಗ ನಮ್ಮ ದೇಶಗಳಲ್ಲಿ ಇಂದಿನ ದಿನಮಾನದಲ್ಲಿ ಕೇಳುತ್ತಿದ್ದೇವೆ ಇದನ್ನು ಯೋಚಿಸುವ ಕಾರ್ಯ ಯುವ ಜನತೆ ಮಾಡಬೇಕೆಂದರು. ಮಾನವೀಯತೆ ಮನುಷ್ಯತ್ವ, ನನ್ನ ಸಮಾಜ ನನ್ನ ರಾಷ್ಟ್ರ ಎನ್ನುವದು ಯುವ ಜನತೆಯ ಭಾವನೆಯಲ್ಲಿ ಕಡಿಮೆಯಾಗಬಾರದೆಂದರು. ಮರಣ ಎನ್ನುವದಕ್ಕೆ ವಯಸ್ಸು ರೋಗ ಎಂಬುದು ಬೇಕಾಗಿಲ್ಲಾ ಅದು ಎಂದು ಯಾವಾಗ ಬರಬೇಕೆಂಬುದು ಭಗವಂತ ನಿರ್ದರಿಸುತ್ತಾನೆ ಅದು ಆವಾಗ ಬರುತ್ತದೆ ಎಂದು ಪ್ರವಾದಿಗಳು ಹೇಳಿದ್ದಾರೆಂದರು. ಇಂದಿನ ದಿನಮಾನದಲ್ಲಿ ವಿಜ್ಞಾನಕ್ಕಿಂತ ಜ್ಯಾತಿಯತೆ ಎಂಬುದು ಬೆಳೆಯುತ್ತಾ ಸಾಗಿದೆ ಇದು ಅಭಿವೃದ್ದಿಗೆ ಪೂರಕವಾದಂತಹದ್ದಲ್ಲಾ ಅಭಿವೃದ್ದಿಗಾಗಿ ಮನುಷ್ಯ ಮನುಷ್ಯನಾಗಬೇಕೆಂದ ಅವರು ತಾಯಿಯ ಪಾದಗಳಲ್ಲಿ ಸ್ವರ್ಗವೆಂಬುದಿದೆ ಎಂದು ಪ್ರವಾದಿಗಳು ಹೇಳಿದ್ದಾರೆ ಪ್ರತಿಯೊಂದು ಕೆಡುಕನ್ನು ಒಳಿತು ಮಾಡುವ ಮೂಲಕ ದೂರ ಮಾಡಬೇಕೆಂದು ಪ್ರವಾದಿಗಳು ಹೇಳಿದ್ದಾರೆಂದರು.
ಇನ್ನೋರ್ವ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಕಳೆದ 20 ವರ್ಷಗಳಿಂದಲೂ ಜ್ಯಾತಿಯತೆ ಎಂಬುದನ್ನು ದೂರಿಕರಿಸುತ್ತ ಸಾಗಿದ್ದಲ್ಲದೇ ಆದ್ಯಾತ್ಮಿಕ ಪ್ರವಚನವನ್ನು ನೀಡುವದರೊಂದಿಗೆ ಎಲ್ಲ ಜನಾಂಗವನ್ನು ಸನ್ಮಾರ್ಗಕ್ಕೆ ಕೊಂಡೋಯುತ್ತಿರುವ ಪ್ರೋ.ಲಾಲಹುಸೇನ ಕಂದಗಲ್ಲ ಅವರ ಸೇವಾ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ನಾವು ದಿನನಿತ್ಯ ಕಾಯಕದಲ್ಲಿ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಏನೇ ಮಾಡಿದರೂ ಸಹ ಅದು ಭಗವಂತನಲ್ಲಿ ಠಿಪ್ಪಣಿಯಾಗುತ್ತದೆ ಒಂದು ವೇಳೆ ಇಲ್ಲಿ ಕೆಡುಕನ್ನು ಮಾಡಿ ಪಾರಾದರೆ ಭಗವಂತನ ಸ್ಥಾನಮಾನದಲ್ಲಿ ಅಲ್ಲಿ ಪಾರಾಗುವದು ಸಾದ್ಯವಿಲ್ಲಾವೆಂದು ಕುರಾನ್ ತನ್ನ ಸಂದೇಶದಲ್ಲಿ ಹೇಳಿದೆ ಎಂದರು. ಈಗಾಗಲೇ ಅನ್ಯರಿಗೆ ಓದಲು ಬರಲಿ ಎಂಬ ಉದ್ದೇಶದಿಂದ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಘಟಕದ ವತಿಯಿಂದ ಸುಮಾರು ಸಾವಿರಾರು ಕುರಾನ್ ಗ್ರಂಥಗಳನ್ನು ಕನ್ನಡದಲ್ಲಿ ಪ್ರಕಟಿಸಿ ವಿತರಿಸಲಾಗಿದೆ ಬಸವಣ್ಣನವರ ಹಾಗೂ ಮಹ್ಮದ ಪೈಗಂಬರವರ ಸಂದೇಶಗಳಲ್ಲಿ ಯಾವದೂ ಬೇರೆಯಾಗಿ ಕಾಣುತ್ತಿಲ್ಲಾ ಎಲ್ಲ ಸಂದೇಶಗಳು ಒಂದೇ ಎಂಬುದು ಎದ್ದು ಕಾಣುತ್ತಲಿದೆ ಎಂದರು. ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಶಾಖೆಯ ಅಬ್ದುಲ್ಗನಿ ಮಕಾಂದಾರ ಪ್ರಾಸ್ಥಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತ ಅಥಿತಿ ಉಪನ್ಯಾಸಕರಿಗೆ ಜಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ಗ್ರಂಥಗಳನ್ನು ಅರ್ಪಣೆ ಮಾಡಲಾಯಿತು.
ವೇದಿಕೆಯ ಮೇಲೆ ವೀ.ವಿ.ಸಂಘದ ಕಾರ್ಯದಶರ್ಿ ಬಿ.ಎಸ್.ಗಬಸಾವಳಗಿ, ಎಸ್.ಕೆ.ಪ.ಪೂ.ಕಾಲೇಜ್ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ, ಉಚಿತ ಪ್ರಸಾದ ನಿಲಯದ ಅಧ್ಯಕ್ಷರು ಹಾಗೂ ಕೃಷಿ ಉತ್ಪನ್ನ ಮಾಡುಕಟ್ಟೆ ಸಮಿತಿಯ ನಿದರ್ೇಶಕರಾದ ಮಹಾದೇವಪ್ಪಣ್ಣ ಕುಂಭಾರ, ಶಿರತ್ ಅಭಿಯಾನದ ಸಂಚಾಲಕ ಹುಸೇನಪಟೇಲ, ಮೈಹಿಬೂಬಸಾಬ ಭಾಗವಾನ, ದಾಹುದ ತಹಶಿಲ್ದಾರ, ಅಜೀಜ ಜಮಾದಾರ, ಮೊದಲಾದವರು ಉಪಸ್ಥಿತರಿದ್ದರು. ಸವಿತಾ ಪಾಲ್ಕಿ ಪ್ರಾಥರ್ಿಸಿದರು. ಜಮಾತೆ ಇಸ್ಲಾಮಿ ಹಿಂದ್ ಮೇರು ಬ್ಯಾಗವಾಟ್ ನಿರೂಪಿಸಿದರು. ಉಪನ್ಯಾಸಕ ಎಸ್.ಆಯ್.ಗಾಣಿಗೇರ ವಂದಿಸಿದರು.