ಮೈತ್ರಿ ಧರ್ಮದ ಪ್ರಕಾರ ಆನಂದ ಅಸ್ನೋಟಿಕರ್ ಪರ ಪ್ರಚಾರ: ಘೋಟ್ನೇಕರ

ಲೋಕದರ್ಶನ ವರದಿ

ಹಳಿಯಾಳ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಧರ್ಮದ ಪ್ರಕಾರ ತಾವು ಆನಂದ ಅಸ್ನೋಟಿಕರ್ ಅವರ ಪರ ಪ್ರಚಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ತಿಳಿಸಿದ್ದಾರೆ.

ಮರಾಠಾ ಭವನದ ಮಹಡಿಯ ಮೇಲೆ ರವಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. 

ಸಚಿವ ಹಾಗೂ ನಮ್ಮ ನಾಯಕರಾದ  ದೇಶಪಾಂಡೆಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ಅಭ್ಯಥರ್ಿ ಪರ ಪ್ರಚಾರ ಕೆಲಸ ಮಾಡುತ್ತೇವೆ. ಜೆಡಿಎಸ್ ಪಕ್ಷವು ಈ ಭಾಗದಲ್ಲಿ ಬಹಳ ದುರ್ಬಲವಿದೆ. ಅವರು ಜಂಟಿ ಪ್ರಚಾರಕ್ಕಾಗಿ ನಮ್ಮನ್ನು ಕರೆದಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಸ್ನೋಟಿಕರ್ ಪರ ಪ್ರಚಾರ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾಜಪ ಅಭ್ಯಥರ್ಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಟೀಕೆಗಳ ಸುರಿಮಳೆಗೈದರು ಘೋಟ್ನೇಕರ. ಕೇಂದ್ರ ಸಕರ್ಾರದ ಕೌಶಲ್ಯಾಭಿವೃದ್ಧಿ ಸಚಿವರಾಗಿ ತಮ್ಮ ಮಹತ್ವಪೂರ್ಣ ಹೊಣೆಗಾರಿಕೆ ಮಾಡದೇ ಕೇವಲ ಭಾಷಣದಲ್ಲಿಯೇ ಕಾಲ ಕಳೆದರು. ಈಗ ಚುನಾವಣೆ ಬಂದಾಗ ತಮಗಾಗಿ ಮತ ಕೇಳುತ್ತಿಲ್ಲ ಬದಲಿಗೆ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಏಕೆಂದರೆ ಇವರಿಗೆ ಮತ ಕೇಳುವ ಹಕ್ಕು ಇಲ್ಲ.

ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಸಜರ್ಿಕಲ್ ಸ್ಟ್ರೈಕ್ ಮಾಡಿದ್ದು ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಪಾಕಿಸ್ತಾನವನ್ನು ವಿಭಜಿಸುವಂತೆ ಮಾಡಿದರು ಅವರು. ಆಗ ಕಾಂಗ್ರೆಸ್ ಪಕ್ಷ ಆ ವಿದ್ಯಮಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ, ಪಕ್ಷದ ಪ್ರಮುಖರಾದ ಗುಲಾಬಶ್ಯಾ ಲತೀಫನವರ, ಶ್ರೀನಿವಾಸ ಘೋಟ್ನೇಕರ, ಎಲ್.ಎಸ್. ಅರಸಿನಗೇರಿ, ಶೋಭಾ ರಾವಳ, ಶಿವಪುತ್ರ ನುಚ್ಚಂಬ್ಲಿ, ವಾಮನ ಮಿರಾಶಿ, ಟಿ.ಕೆ. ಗೌಡಾ, ಮಂಜುಳಾ ಪಾಟೀಲ, ಗಣಪತಿ ಭೇಕಣಿ, ಸಂಜು ಮಿಶ್ಯಾಳಿ, ಯಶ್ವಂತ ಪಟ್ಟೇಕರ, ಅಬ್ದುಲ ರಹೀಂ ದಲಾಲ, ರೋಹನ ಬೃಗಾಂಜಾ, ಪುರಸಭೆ ಸದಸ್ಯರಾದ ಅಝರ ಬಸರಿಕಟ್ಟಿ, ಸುವಣರ್ಾ ಮಾದರ, ಬಸಾಪುರ ಮೊದಲಾದವರು ಪಾಲ್ಗೊಂಡಿದ್ದರು.

ಅನುಪಸ್ಥಿತಿ:- 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋವರ್ೆಕರ, ಜಿಲ್ಲಾ ಪಂಚಾಯತ ಸದಸ್ಯರಾದ ಮಹೇಶ್ರೀ ಮಿಶ್ಯಾಳಿ, ಲಕ್ಷ್ಮೀ ಕೋವರ್ೆಕರ, ತಾಲೂಕ ಪಂಚಾಯತಿಯ ಅಧ್ಯಕ್ಷೆ ರೀಟಾ ಸಿದ್ಧಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ. ಚೌಗುಲೆ ಮೊದಲಾದ ಅನೇಕ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರಲಿಲ್ಲ.