ಹಿಂಡಲಗಾ ಕೇಂದ್ರ ಕಾರಾಗ್ರಹದಲ್ಲಿ ಕಾರ್ಯಕ್ರಮ: ಮನಪರಿವರ್ತನೆಗೆ ವಿಚಾರಧಾರೆಗಳನ್ನು ಬದಲಿಸಿ: ರಾಜಯೋಗಿನಿ ಬಿ.ಕೆ. ಅಂಬಿಕಾ

ಹಿಂಡಲಗಾ 29: ಮನಸ್ಸನ್ನು ಪರಿವರ್ತನೆ ಮಾಡುವದಕ್ಕಾಗಿ ಆಗಿಹೋದದ್ದನ್ನು ನೆನೆಪಿಸಿಕೊಂಡು, ಅಥವಾ ಭವಿಷ್ಯದ ಬಗ್ಗೆ ನೆನೆದುಕೊಂಡು ದುಖಿ:ಯಾಗುವದಕ್ಕಿಂತ ವರ್ತಮಾನ ಸಮಯವನ್ನು ಅರಿತು ಜೀವನವನ್ನು ಶ್ರೇಷ್ಠ ಮಾಡಿಕೊಳ್ಳಬೇಕು. ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಲು ಮೊದಲು ಮನಸ್ಸಿನ ವಿಚಾರಧಾರೆಗಳನ್ನು ಬದಲಿಸಬೇಕು ಎಂದು ಬೆಳಗಾವಿ ಉಪವಲಯ ಸಂಚಾಲಕರು ರಾಜಯೋಗಿನಿ ಬಿ.ಕೆ. ಅಂಬಿಕಾ ಹೇಳಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಂತೇಶ ನಗರ, ಬೆಳಗಾವಿ ವತಿಯಿಂದ ದಿ.28ರಂದು ಹಿಂಡಲಗಾ ಕೇಂದ್ರ ಕಾರಾಗ್ರಹದ ನಿವಾಸಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಮನಪರಿವರ್ತನೆಗಾಗಿ ಸಕಾರಾತ್ಮಕ ಚಿಂತನೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಅವರು ಆಶೀರ್ವಚನ ನೀಡಿದರು. 

 ನಕಾರಾತ್ಮಕ ವಿಚಾರಗಳ ಬದಲಾಗಿ ಸಕಾರಾತ್ಮಕ ವಿಚಾರಗಳ ಚಿಂತನೆ ಮಾಡಬೇಕು. ನಾನು ಒಬ್ಬ ಕೀಳ ಮನುಷ್ಯನಲ್ಲ, ನಾನು ಒಬ್ಬ ಶ್ರೇಷ್ಠ ಆತ್ಮ ಎಂದು ಸ್ಮೃತಿಯಲ್ಲಿ ತಂದುಕೊಳ್ಳಬೇಕು. ನಮ್ಮ ಕರ್ಮದ ಫಲದ ಅನುಸಾರ ನಮಗೆ ಸುಖ ದು:ಖ ಸಿಗುತ್ತದೆ. ಆದ್ದರಿಂದ ನಮ್ಮ ಕರ್ಮ ಶ್ರೇಷ್ಠ ಹಾಗೂ ಸ್ವಚ್ಛ ಮಾಡಿಕೊಳ್ಳುವದಕ್ಕಾಗಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸಿಕೊಡುವ ಸಹಜ ರಾಜಯೋಗ ಜ್ಞಾನದಿಂದ ಸಾಧ್ಯವಾಗುತ್ತದೆ. ಆದ್ದರಿಂದ ತಮ್ಮ ದೈನಂದಿನ ಜೀವನದಲ್ಲಿ ಸಹಜ ರಾಜಯೋಗದ ಅಭ್ಯಾಸ ಅಳವಡಿಸಿಕೊಳ್ಳಲು ಕರೆ ನೀಡಿದರು. 

ಮನಸ್ಸು ಮತ್ತು ಬುದ್ಧಿಯ ಪರಿವರ್ತನೆಗಾಗಿ ದೇಹದ ಅಭಿಮಾನವನ್ನು ಬಿಡಬೇಕು. ಕಾಮ ಕ್ರೋಧ ಲೋಭ ಮೋಹ ಅಹಂಕಾರ ಈಷರ್ೆ ದ್ವೇಷ ಇವು ಸ್ಥೂಲವಾದ ಕಟ್ಟಿಗೆಗಳಿಂದ ಸುಡುವದಿಲ್ಲ. ವಿಕಾರಿಗುಣಗಳನ್ನು ಸುಡಬೇಕಾದರೆ ಪರಮಪಿತ ಶಿವಪರಮಾತ್ಮನ ಯೋಗದ ಅಗ್ನಿಯಲ್ಲಿ ಮಾತ್ರ ಇವುಗಳನ್ನು ಸುಡಬಹುದು. ಆತ್ಮನ ಸ್ವಧರ್ಮವೇ ಶಾಂತಿ, ಆತ್ಮನ ಪರಧರ್ಮವೇ ಅಶಾಂತಿ. ಸುಖ ಮತ್ತು ದುಃಖ ಅಶಾಂತಿಗೆ ಕರ್ಮವೇ ಕಾರಣವಾಗಿದೆ. ಆದ್ದರಿಂದ ಮನಸ್ಸು ಬುದ್ಧಿ ಸಂಸ್ಕಾರಗಳ ಮೇಲೆ ನಿಯಂತ್ರಣ ಇಟ್ಟು ಕರ್ಮ ಮಾಡುವುದನ್ನು ಕಲಿಯಬೇಕು. ಶರೀರಕ್ಕೆ ಹೇಗೆ ನೀರು ಆಹಾರ ಮುಖ್ಯವೋ ಹಾಗೆಯೇ ಆತ್ಮಕ್ಕೆ ಸಕಾರಾತ್ಮಕ ವಿಚಾರ ಎಂಬ ಆಹಾರ, ಶುದ್ಧ ಸಂಕಲ್ಪಗಳ ಎಂಬ ನೀರು ಅತಿ ಅವಶ್ಯವಾಗಿದೆ. ಮನಸ್ಸು ಬುದ್ಧಿ ಸಂಸ್ಕಾರಗಳಿಗೆ ವಶರಾಗಿ ಕರ್ಮ ಮಾಡಿದ್ದಾದರೆ ದುಃಖ ಅನುಭವಿಸಬೇಕಾಗುತ್ತದೆ. ಮನಸ್ಸು ಬುದ್ಧಿ ಸಂಸ್ಕಾರಗಳ ಮೇಲೆ ನಿಯಂತ್ರಣ ಇಟ್ಟು ಕರ್ಮ ಮಾಡಿದ್ದಾದರೆ ಸುಖಮಯ ಜೀವನ ಹಾಗೂ ಕರ್ಮವು ಕೂಡ ಶ್ರೇಷ್ಠವಾಗುವುದು. ಜೀವನ ಸುಖ ಶಾಂತಿಯಿಂದ ಕೂಡಿರಬೇಕೆಂದರೆ ಪ್ರತಿದಿನ ಶ್ರೇಷ್ಠ ವಿಚಾರಗಳು ಶ್ರೇಷ್ಠ ಸಂಕಲ್ಪಗಳು, ಪರಸ್ಪರ ನಿಸ್ವಾರ್ಥ ಸ್ನೇಹ, ಪ್ರೀತಿ, ವಿಶ್ವಾಸ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನವು ಸುಖಮಯ, ಶಾಂತಿಮಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಹಿಂಡಲಗಾ ಕೇಂದ್ರ ಕಾರಾಗ್ರಹ ಸಹಾಯಕ ಅಧೀಕ್ಷಕ ಬಸವರಾಜ ಮೂಲಿಮನಿ ಮಾತನಾಡುತ್ತ ನಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಒಳ್ಳೆಯ ಗುಣಗಳಿದ್ದಾಗ ಬೇರೆಯುವರಿಗೆ ನಾವು ತಿಳಿಸಬಹುದು. ಹೇಗೆ ನಾವು ಬೇರೆಯವರಿಗೆ ಬಣ್ಣ ಹಚ್ಚುತ್ತೇವೆ ಹಾಗೆಯೇ ಆ ಬಣ್ಣ ಮೊದಲು ನಮಗೆ ತಾಗುತ್ತದೆ. ಹಾಗೆಯೇ ಒಳ್ಳೆಯ ಗುಣಗಳ ಬಗ್ಗೆ ಎಲ್ಲರಿಗೆ ಪ್ರೇರಣೆ ನೀಡಬೇಕು. ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹೋದರಿಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿ ಹೇಳಿದ ಹಾಗೆ ಇವರ ಸೇವೆಯು ಹೇಗೆ ಇದೆ ಎಂದರೆ "ಜಗವೆಲ್ಲವು  ನಗುತಿರಲಿ ಜಗದ ಅಳು ನನಗಿರಲಿ ಎಂಬಂತೆ. ಇವರ ಸೇವೆ ನಿಜವಾಗಿ ಶ್ಲಾಘನೀಯ ಎಂದರು.

ರಾಜಯೋಗಿನಿ ಬಿಕೆ ಸುಲೋಚನಾ ವಿದ್ಯಾಲಯದ ಪರಿಚಯ ನೀಡಿದರು. ಸುನೀತಾ ಮೂಲಿಮನಿ. ಬಿಕೆ ವಿಶ್ವನಾಥ, ಬಿಕೆ ನಾರಾಯಣ, ಬಿಕೆ ಯೋಗೇಶ  ಹಾಗೂ ಇತರರು ಉಪಸ್ಥಿತರಿದ್ದರು.

ಕೇಂದ್ರ ಕಾರಾಗ್ರಹ ಶಾಲೆ ಉಪನ್ಯಾಸಕ  ಶಶಿಕಾಂತ ಯಾದಗುಡೆ ಸ್ವಾಗತಿಸಿ ನಿರೂಪಿಸಿದರು. ಬಿಕೆ ಶ್ರೀಕಾಂತ ವಂದಿಸಿದರು.