ಶೇಡಬಾಳ : ಕಾಗವಾಡ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ (ಬಿಎಲ್ಓ) ಕಾರ್ಯದಿಂದ ಬಿಡುಗಡೆಗೊಳಿಸುವಂತೆ ಸಂಘದ ಪದಾಧಿಕಾರಿಗಳು ಕಾಗವಾಡ ಉಪ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಕಾಗವಾಡ ತಾಲೂಕಾ ಘಟಕದ ಅಧ್ಯಕ್ಷರಾದ ಜಿ.ಎಂ.ಸಡ್ಡಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮಂಗಳವಾರ ದಿ. 18 ರಂದು ತಹಶೀಲ್ದಾರ ಕಛೇರಿಗೆ ತೆರಳಿ ಉಪ ತಹಶೀಲ್ದಾರ ವ್ಹಿ.ಬಿ.ಚೌಗಲಾ ಅವರಿಗೆ ಮನವಿ ಪತ್ರ ಅಪರ್ಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ಜಿ.ಎಂ.ಸಡ್ಡಿ ಮಾತನಾಡಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ (ಬಿಎಲ್ಓ) ಕಾರ್ಯಕ್ಕೆ ನಿಯೋಜನೆ ಮಾಡಿರುತ್ತಾರೆ. ಇದರಿಂದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಇತ್ಯಾದಿ ಭೋದಕೇತರ ಕೆಲಸಕ್ಕೆ ಶಿಕ್ಷಕರು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಶಾಲಾ ಮಕ್ಕಳಿಗೆ ಬೋಧನೆ, ಶೈಕ್ಷಣಿಕ ಚಟುವಟಿಕೆಗಳಿಗೆ, ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಗಮನ ಕೊಡಲು ಅವಕಾಶವಿಲ್ಲದ ಕಾರಣ ಸಕರ್ಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಕಾರಣ ಸದರಿ ವಿಷಯವನ್ನು ಸಕರ್ಾರಿ ಶಾಲೆಗಳ ಮತ್ತು ಶಾಲೆಯ ಮಕ್ಕಳ ಭವಿಷ್ಯವನ್ನು ಪರಿಗಣಿಸಿ ಸಕರ್ಾರ ತಕ್ಷಣ ಸದರಿ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ (ಬಿಎಲ್ಓ) ಕಾರ್ಯದಿಂದ ಬಿಡುಗಡೆಗೊಳಿಸಿ ಪಾಠ ಭೋಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿ ಕೊಡಬೇಕಾಗಿ ವಿನಂತಿಕೊಂಡರು.
ಕಾಗವಾಡ ಉಪತಹಶೀಲ್ದಾರ ಮನವಿ ಪತ್ರ ಸ್ವೀಕರಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಯ ಮನವಿ ಪತ್ರಯನ್ನು ಈ ಕೂಡಲೇ ಫ್ಯಾಕ್ಸ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸಕರ್ಾರಕ್ಕೆ ರವಾನಿಸಲಾಗುವುದೆಂದು ಹೇಳಿದರು.
ಕ.ರಾ.ಸ.ನೌ. ಸಂಘದ ಅಧ್ಯಕ್ಷ ಜಿ.ಎಂ.ಸಡ್ಡಿ, ಪ್ರಧಾನ ಕಾರ್ಯದಶರ್ಿ ಕೆ.ಎನ್.ಗಾಣಿಗೇರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಟಿ.ತಳವಾರ, ಎಂ.ಜಿ.ಸಂಕಪಾಳ, ಎಸ್.ಸಿ.,ಎಸ್.ಟಿ. ಶಿಕ್ಷಕರ ಸಂಘದ ಅಧ್ಯಕ್ಷ ಎ.ಡಿ.ಖಾತೆದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅಧ್ಯಕ್ಷ ಕೆ.ವ್ಹಿ.ಕಾಂಬಳೆ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಎಸ್.ಕೋಳಿ, ಎನ್.ಪಿ.ಎಸ್. ಸಂಘದ ಅಧ್ಯಕ್ಷ ಎಂ.ಎನ್.ಕಲ್ಲೂರ, ಎಸ್.ಎಸ್.ಭಾವಿ, ಡಿ.ಎಲ್.ಕೊರಬು, ಬಿ.ಎಸ್.ಯರಂಡೋಲಿ, ಆರ್.ಎ.ನಾಂದಣಿ, ಎಂ.ಪಿ.ಎಲಿಗೌಡರ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.