ಹಾಲಿವುಡ್ ನಲ್ಲಿಯೂ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮದುವೆ ನವೆಂಬರ್ 30 ರಂದು ಜೋಧ್ ಪುರದ ಅರಮನೆಯಲ್ಲಿ ನಡೆಯಲಿದೆ. ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮದುವೆಗೆ ಇನ್ನೂ ಒಂದು ತಿಂಗಳು ಸಮಯಾವಕಾಶ ಇದೆ. ಹೀಗಿರುವಾಗಲೇ, ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಛೋಪ್ರಾ ಬಿಜಿಯಾಗಿದ್ದಾರೆ. ಮೊನ್ನೆಯಷ್ಟೇ ನ್ಯೂಯಾಕರ್್ ನಲ್ಲಿ ಪ್ರಿಯಾಂಕಾ ಛೋಪ್ರಾ ಬ್ರೈಡಲ್ ಶವರ್ ನಡೆಯಿತು.
'ಬ್ರೈಡಲ್ ಶವರ್ ನಲ್ಲಿ ಆತ್ಮೀಯ ಗೆಳತಿಯರೊಂದಿಗೆ ಪ್ರಿಯಾಂಕಾ ಛೋಪ್ರಾ ಕುಣಿದು ಕುಪ್ಪಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾವಿ ಅತ್ತೆ (ನಿಕ್ ಜೊನಾಸ್ ತಾಯಿ) ಪ್ರಿಯಾಂಕಾ ತಾಯಿ ಕೂಡ ಪಾಲ್ಗೊಂಡಿದ್ದರು. ಎಲ್ಲರೊಂದಿಗೆ ಹಾಡು, ಕುಣಿತ ಹಾಕಿ ಪ್ರಿಯಾಂಕಾ ಸಂತಸ ಪಟ್ಟರು. 'ಬ್ರೈಡಲ್ ಶವರ್ನಲ್ಲಿ ಬೃಹತ್ ಕೇಕ್ ಕತ್ತರಿಸಿ ಖುಷಿ ಪಟ್ಟರು ನಟಿ ಪ್ರಿಯಾಂಕಾ ಛೋಪ್ರಾ. ಅಂದ್ಹಾಗೆ, ಪ್ರಿಯಾಂಕಾ ಛೋಪ್ರಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ತಮಗಿಂತ ಹತ್ತು ವರ್ಷ ಕಿರಿಯ ನಿಕ್ ಜೊನಾಸ್ ರನ್ನ ಪ್ರಿಯಾಂಕಾ ಪ್ರೀತಿಸಿ ಮದುವೆ ಆಗುತ್ತಿದ್ದಾರೆ.
ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು ಒಜಣ ಉಚಿಟಚಿ 2017 ರಲ್ಲಿ. ರೆಡ್ ಕಾಪರ್ೆಟ್ ಮೇಲೆ ಇಬ್ಬರು ಒಟ್ಟಿಗೆ ಕ್ಯಾಟ್ ವಾಕ್ ಮಾಡಿದರು. ಇಲ್ಲಿಂದಲೇ, ಇಬ್ಬರ ಪ್ರೀತಿ ಮೊಳಕೆಯೊಡೆದಿದ್ದು ಎನ್ನಲಾಗಿದೆ.
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್, 'ಮಿಸ್ಟರ್ ಸನ್ ಶೈನ್, 'ಸ್ಮ್ಯಾಶ್ ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೊನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.