ಬೈಲಹೊಂಗಲ 03: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಆಕ್ಸಫರ್ಡ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿ ಪ್ರೀತಮ ಚಿಕ್ಕೊಪ್ಪ ಅವರನ್ನು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ವಿದ್ಯಾಥರ್ಿ ಪ್ರೀತಮನನ್ನು ಸನ್ಮಾನಿಸಿ ಮಾತನಾಡಿ. ಈತನ ಸಾಧನೆಯನ್ನು ಶ್ಲಾಘಿಸಿ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲೆಂದು ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಬಿರಾದಾರ ಮಾತನಾಡಿ ಎಲ್ಲರ ಸಹಕಾರದಿಂದ ಹಾಗೂ ಶಿಕ್ಷಕರ ಪರಿಶ್ರಮದಿಂದ ನಮ್ಮ ಶಾಲೆಯ ವಿದ್ಯಾಥರ್ಿ ಈ ಸಾಧನೆಯನ್ನು ಮಾಡಿದ್ದಾನೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕೋಶಾಧ್ಯಕ್ಷ ಎಸ್.ಡಿ.ಗಂಗನ್ನವರ, ತಾಲೂಕಾ ಅಧ್ಯಕ್ಷ ಶಿವಾನಂದ ಕುಡಸೋಮನ್ನವರ ಮಾತನಾಡಿ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಬಿರಾದಾರ ಅವರ ಹಾಗೂ ಆ ಶಾಲೆಯ ಶಿಕ್ಷಕರ ಪರಿಶ್ರಮ ವಿದ್ಯಾಥರ್ಿ ಪ್ರೀತಮ್ನ ಪರಿಶ್ರಮದಿಂದ ಆತ ಈ ಸಾಧನೆ ಮಾಡಿದ್ದಾನೆ. ಎಲ್ಲ ವಿದ್ಯಾಥರ್ಿಗಳಿಗೂ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪ್ರತಿಯೊಬ್ಬ ಮಕ್ಕಳ ಕಾಳಜಿ ವಹಿಸಿ ಅವರಿಗೆ ಬೇಕಾಗುವ ಸಲಕರಣೆಗಳನ್ನು ನೀಡುವ ಕಳಕಳಿಯನ್ನು ಬಿರಾದಾರ ಹೊಂದಿದ್ದಾರೆ ಎಂದರು.
ವಿದ್ಯಾಥರ್ಿ ಪ್ರೀತಮ ಚಿಕ್ಕೊಪ್ಪ ಮಾತನಾಡಿ ನನ್ನ ಈ ಸಾಧನೆಗೆ ನಮ್ಮ ಸಂಸ್ಥೆಯ ಅಧ್ಯಕ್ಷರ, ಶಿಕ್ಷಕರ ಹಾಗೂ ಪಾಲಕರ ಸಹಕಾರವೇ ಕಾರಣ ಎಂದರು.
ಮಹಾಂತೇಶ ಚಿಕ್ಕೊಪ್ಪ, ಸವಿತಾ ಚಿಕ್ಕೊಪ್ಪ, ಅಕ್ಷರ ದಾಸೋಹದ ಶ್ರೀದೇವಿ ನಾಗನೂರ, ಯೋಗೀಶ ಬಿರಾದಾರ, ವಿ.ಎಸ್.ಕುದರಿ, ಪ್ರಕಾಶ ಮಾಸ್ತಿಹೊಳಿ, ಸಿ.ವಾಯ್.ತುಬಾಕಿ ಸೇರಿದಂತೆ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರಾಜು ಹಕ್ಕಿ ಸ್ವಾಗತಿಸಿದರು. ಎ.ಬಿ.ಅಂಗಡಿ ವಂದಿಸಿದರು.