ಸ್ಥಳೀಯರಿಗೆ ಆದ್ಯತೆ ನೀಡಿ: ಬಿ.ಕನಕಪ್ಪ

ಕನಕಗಿರಿ : ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾಮರ್ಿಕರ ಕೆಲಸಗಳಿಗೆ ಗ್ರಾ.ಪಂ. ಇದ್ದಾಗಿನಿಂದ ಕೆಲಸ ಮಾಡುತ್ತಾ ಬಂದಿರುವ ಕಾಮರ್ಿಕಕರಿಗೆ ಆದ್ಯತೆ ನೀಡಿ ಎಂದು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಕನಕಪ್ಪ ಪ.ಪಂ.ಮುಖ್ಯಾಧಿಕಾರಿ ಮಹೇಶ ನೀಡಶೀಸಿ ಅವರಿಗೆ ಶುಕ್ರವಾರ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಅವರು ಮಾತನಾಡಿ, 700 ಜನ ಸಂಖ್ಯೆಗೆ ಒಬ್ಬರಂತೆ ಪೌರ ಕಾಮರ್ಿಕರನ್ನು ನೇಮಿಸಬೇಕೆಂಬ ನಿಯಮವಿದೆ. 20 ಸಾವಿರ ಅಧಿಕ ಜನ ಸಂಖ್ಯೆವಿರುವ ಪಟ್ಟಣದಲ್ಲಿ ಕೆವಲ 11 ಜನ ಪೌರ ಕಾಮರ್ಿಕರಿದ್ದು, ಈಗ ಏಕಾಏಕಿ ಖಾಲಿ ಇರುವ ಹುದ್ದೆಗಳಿಗೆ ಗಂಗಾವತಿ ನಗರಸಭೆಯಿಂದ 7 ಜನ ಪೌರ ಕಾಮರ್ಿಕರನ್ನು ಕನಕಗಿರಿ ಪ.ಪಂ.ಗೆ ವಗರ್ಾವಣೆ ಮಾಡಿದ್ದಾರೆ. ಇದರಿಂದ ಸುಮಾರ ವರ್ಷಗಳಿಂದ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿದವರು ಉದ್ಯೋಗದಿಂದ ವಂಚಿತರಾಗುತ್ತಾರೆ. ಗಂಗಾವತಿ ಪೌರ ಕಾಮರ್ಿಕರು ಪ್ರತಿನಿತ್ಯ ಕನಕಗಿರಿ ಬಂದು ಕೆಲಸ ಮಾಡುವದರಿಂದ ಅವರಿಗೆ ತೊಂದರೆ ಉಂಟಾಗುತ್ತದೆ ಮತ್ತು ಸಮಯದ ಅಭಾವವಾಗುತ್ತದೆ. ಶೀಘ್ರವೇ ಮುಖ್ಯಾಧಿಕಾರಿಗಳು ಹಾಗೂ ಪ.ಪಂ. ಚುನಾಯಿತ ಪ್ರತಿನಿಧಿಗಳು ತೊಂದರೆಗೆ ಸಿಲುಕಿರುವ ಪೌರ ಕಾಮರ್ಿಕರ ಸಮಸ್ಯೆಯನ್ನು ಪರಿಹರಿಸಿ. ಸ್ಥಳೀಯರಿಗೆ ನ್ಯಾಯವನ್ನು ಕೊಡಿಸಬೇಕೆಂದರು.

ನಂತರ ಪ.ಪಂ.ಮುಖ್ಯಾಧಿಕಾರಿ ಮಹೇಶ ನಿಡಶೀಸಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಗಂಗಾವತಿ ನಗರಸಭೆಯಿಂದ 7 ಜನ ಪೌರ ಕಾಮರ್ಿಕರು ಬಂದಿದ್ದಾರೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚಚರ್ಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡ ಭಾರಧ್ವಾಜ್ ಸೇರಿದಂತೆ ಪೌರ ಕಾಮರ್ಿಕರು ಇದ್ದರು.