ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗೂ ಹೈನುಗಾರಿಕೆ ಉದ್ಯಮ ಅಭಿವೃದ್ಧಿ ಕಾಯರ್ಾಗಾರ


ಗದಗ27: ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗೂ ಹೈನುಗಾರಿಕೆ ಉದ್ಯಮ ವಿಷಯವಾಗಿ ಜಿಲ್ಲಾ ಅಗ್ರಿಣಿಯ ಬ್ಯಾಂಕಿನ ಸಭಾಂಗಣದಲ್ಲಿ ನಬಾರ್ಡ, ಲೀಡ್ ಬ್ಯಾಂಕ್ ಮತ್ತು ಗದಗ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಸಂಬಂಧ ಪಟ್ಟ ಇಲಾಖೆಯವರಿಗೆ ಒಂದು ದಿನದ ಕಾಯರ್ಾಗಾರವನ್ನು  ಆಯೋಜಿಸಲಾಯಿತು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಮಕುಮಾರ್, ಪ್ರಾಂತೀಯ ವ್ಯವಸ್ಥಾಪಕ ರಾಷ್ಟೀಯ ವಸತಿ ಬ್ಯಾಂಕ್ ಬೆಂಗಳೂರು ಮಾತನಾಡಿ ಪ್ರಧಾನ ಮಂತ್ರಿ ಆವಾಸ ಯೋಜನೆಯ ಅರ್ಹತೆ ಮತ್ತು ಸೌಲಭ್ಯದಬಗ್ಗೆ ವಿವರಿಸಿದರು. ಜಗದೀಶ್ ರಾವ್ ಮುಖ್ಯ ವ್ಯವಸ್ಥಾಪಕರು ಲೀಡ್ ಬ್ಯಾಂಕ್ ಇವರು, ವಸತಿ ರಹಿತರಿಗೆ ಈ ಯೋಜನೆಯಿಂದ ಬಡ್ಡಿ ರಿಯಾಯತಿ ರೂಪದಲ್ಲಿ ಸಾಲ ಸಿಗುತ್ತದೆ, 18 ಲಕ್ಷ ವಾಷರ್ಿಕ ವರಮಾನ ಉಳ್ಳವರಿಗೆ ಈ ಸೌಲಭ್ಯ ಸಿಗುತ್ತದೆ. ಇದನ್ನು ಉಪಯೋಗಿಸಿಕೊಳ್ಳಲು ಕರೆಯಿತ್ತರು. ಗದಗ ಪುರಸಭೆಯ ಆಯುಕ್ತರು  ರುದ್ರೇಶವರು ಮಾತನಾಡಿ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆ ಹಾಗು ಬ್ಯಾಂಕಿನವರು ಸಹಕರಿಸಬೇಕೆಂದರು ಅಲ್ಲದೆ ಈ ಯೋಜನೆಯ ಸವಲತ್ತುಗಳ ದುರುಪಯೇಗ ತಡೆಯಲು ಸಹಕರಿಸಬೇಕೆಂದರು.  

ನಬಾಡರ್್ ಡಿ.ಡಿ.ಮ್,  ರಾಮನ್ ಜಗದೀಶನ ಹೈನುಗಾರಿಕಾ ಅಭಿವೃದ್ಧಿ ಯೋಜನೆ(ಡಿ.ಈ.ಡಿ.ಸ್) ಬಗ್ಗೆ ವಿವರ ನೀಡಿದರು. ಇದರ ಅನುಷ್ಠಾನಕ್ಕೆ ಬ್ಯಾಂಕಿನವರು ಸಹಕರಿಸಬೇಕೆಂದು ಹೇಳಿದರು. 

ಕಾರ್ಯಕ್ರಮಕ್ಕೆ ಮನ್ಸೂರ್ ಅಲಿ,  ಸಹಾಯಕ ಆಯುಕ್ತರು ಪುಆಸಭೆ ಗದಗ, ಹಂಸಾನಂದ, ಮುಖ್ಯ ವ್ಯವಸ್ಥಾಪಕರು, ಬಸವರಾಜ್ಭಾ,ವ್ಯವಸ್ಥಾಪಕರು ಭಾರತೀಯ  ಸ್ಟೇಟ್ ಬ್ಯಾಂಕ್, ಗದಗ ವಿ ವಿ ಕುಲ್ಕಣರ್ಿ, ಮುಖ್ಯ ವ್ಯವಸ್ಥಾಪಕರು, ಪ್ರಾಂತೀಯ ಕಚೇರಿ, ಭಾರತೀಯ  ಸ್ಟೇಟ್ ಬ್ಯಾಂಕ್, ಹುಬ್ಬಳ್ಳಿ, ಮ್ ಸ್ ಕಲ್ಮನಿ,ನಿದರ್ೆಶಕರು, ಭಾರತೀಯ  ಸ್ಟೇಟ್ ಬ್ಯಾಂಕ್ ತಬರ್ೆತಿಕೇಂದ್ರ,  ಹುಲಕೋಟಿ, ಆನಂದ್ ಮ್ಯಾಳಿ, ಲೀಡ್ ಬ್ಯಾಂಕ್ ಗದಗ, ಮಲ್ಲಿಕಾಜರ್ುನ್ ಜಿಲ್ಲಾ ವಸತಿ ಯೋಜನಾ ಅಧಿಕಾರಿ ಹಾಗು ವಿವಿಧ ಬ್ಯಾಂಕಿನ ಅಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.