ಸಿಎಲ್ಎಸ್ಎಸ್ ನ ಅನುಕೂಲಗಳು.
ಸಿಎಲ್ಎಸ್ಎಸ್ ಅಡಿಯಲ್ಲಿ ರೂ
6-12 ಲಕ್ಷದೊಳಗಿನ ಆದಾಯ ಅಥವಾ ಎಂಐಜಿ
-I ವರ್ಗದ ಜನರಿಗೆ
9 ಲಕ್ಷ ರೂ ವರೆಗಿನ ಶಾಲಕ್ಕೆ ನೀಡಲಾಗುವ ಬಡ್ಡಿಯ ಮೇಲೆ
4 ಶೇಕಡಾ ಸಬ್ಸಿಡಿ ನೀಡಲಾಗುತ್ತದೆ.
ಅದೇ ರೀತಿಯಲ್ಲಿ
12-18 ಲಕ್ಷದವರೆಗಿನವಾರ್ಷಿಕ ಆದಾಯ ಹೊಂದಿರುವ ಅಥವಾ ಎಂಐಜಿ
- II ವರ್ಗದವರಿಗೆ 12 ಲಕ್ಷದವರೆವಿಗಿನ ಸಾಲಕ್ಕೆ ಬಡ್ಡಿಯ ಮೇಲೆ
3% ಸಬ್ಸಿಡಿ ಒದಗಿಸಲಾಗುತ್ತದೆ.
ಆದಾಗ್ಯೂ ಇದುವರೆವಿಗೆ ಎಂಐಜಿ
-I ವರ್ಗದವರಿಗೆ
120 ಚದರ ಮೀಟರ್ (1,291 ಚದರ ಅಡಿ)
ಹಾಗೂ ಎಂಐಜಿ II ಗಾಗಿ
150 ಚದರ ಮೀಟರ್ (1,614 ಚದರ ಅಡಿ) ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತಿತ್ತು. ಈಗ ಎಂಐಜಿ
-I ವರ್ಗದಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ
160 ಚದರ ಮೀಟರುಗಳು
(1,722 ಚದರ ಅಡಿ) ಮತ್ತು ಎಂಐಜಿ
II ಅವರಿಗೆ 200 ಚದರ ಮೀಟರ್
(2,152 ಚದರ ಅಡಿ) ವರೆಗೆ ಹೆಚ್ಚಳ ಮಾಡಲಾಗುತ್ತದೆ.
ಮಾರ್ಚ್
31, 2019ರ ಒಲಗೆ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈ ಯೋಜನೆಯಡಿಯಲ್ಲಿ ಗರಿಷ್ಠ
2.35 ಲಕ್ಷ ರೂ. ಸಬ್ಸಿಡಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಒಮ್ಮೆ ಬಿಡುಗಡೆಯಾದ ಸಬ್ಸಿಡಿಯು ಸಾಲಗಾರನ ಖಾತೆಗೆ ನೇರವಾಗಿ ಜಮೆಯಾಗುತ್ತದೆ.ಇದು ಮುಖ್ಯ ಸಾಲದ ಮೊತ್ತಕ್ಕೆ ಸಮಾನವಾಗಿ ಸರಿಹೊಂದಾಣಿಕೆ ಮಾಡಲಾಗುತ್ತದೆ.ಇದರಿಂದ ವಾಸ್ತವದಲ್ಲಿ ಸಾಲದ ಪ್ರಮಾಣ ಕಡಿಮೆಯಾಗಿ ಮಾಸಿಕ ಕಂತು ಕಟ್ಟುವಿಕೆಯ ಪ್ರಮಾಣ ಇಳಿಯುತ್ತದೆ.
ಮನೆಯ ವಿಸ್ತೀರ್ಣದಲ್ಲಿನ ಅಧಿಕ್ಯವು ಮೊದಲ ಬಾರಿ ಮನೆ ಖರೀದಿಸುವವರಿಗೆ ವಿಶೇಷವಾಗಿ ಮೆಟ್ರೋ ನಗರಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.ಎಂದು ಪರಿಣಿತರು ಹೇಳಿದ್ದಾರೆ,ಯೋಜನೆಯ ಈ ವೈಶಿಷ್ಟ್ಯತೆಯು ನಗರಗಳಲ್ಲಿ ನಿರ್ಮಿಸಲಾದ ಫ್ಲ್ಯಾಟ್ ಗಳನ್ನು ಸಹ ಒಳಗೊಂಡಿರುತ್ತದೆ.
"ಯೋಜನೆಯಲ್ಲಿ ಇತ್ತೀಚೆಗೆ ಮಾಡಲಾದ ಮಾರ್ಪಾಟು ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು,
ಖರೀದಿಸುವವರಿಗೆ ಅದರಲ್ಲಿಯೂ ಒಂದನೇ ಶ್ರೇಣಿಯ ನಗರವಾಸಿಗಳಿಗೆ ಸಾಕಷ್ಟು ಅನುಕೂಲವಾಗಿದೆ.ಇದು ಮನೆ ಖರೀದಿದಾರರಿಗಷ್ಟೇ ಅನುಕೂಲವಲ್ಲ ಬದಲಾಗಿ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಹೆಚ್ಚಿಸಲು ಸಹ ಸಹಕಾರಿಯಾಗಿದೆ.ಸಿಬಿಆರ್ ಇ ಅಧ್ಯಕ್ಷರು
(ಭಾರತ ಮತ್ತು ಆಗ್ನೇಯ ಏಷ್ಯಾ)
ಅನ್ಸುಮನ್ ಮ್ಯಾಗಜಿನ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರು?