ಮೂಡಲಗಿಯಲ್ಲಿ ವರ್ತಮಾನದ ವಚನ ಚಿಂತನಗೋಷ್ಠಿ ಕಾರ್ಯಕ್ರಮ

ಮೂಡಲಗಿ 27: 12ನೇ ಶತಮಾನವು ಮತ್ತೆ ಪುನಃ ಸೃಷ್ಟಿಯಾಗಿ ವಚನ ಸಾಹಿತ್ಯದ ಇತಿಹಾಸ ಬೆಳೆಯಬೇಕಾದರೆ ಶರಣರು ಮಾಡಿದ ತ್ಯಾಗ ಮತ್ತು ಅವರ ಹೋರಾಟಗಳ ಬಗ್ಗೆ ಗಮನ ಹರಿಸುವ ಅವಶ್ಯವಿದೆ. 12ನೇ ಶತಮಾನದ ಸತ್ಯಕ್ಕನ ಚಿಂತನೆ ಮೆಲುಕು ಹಾಕಿಕೊಳ್ಳುತ್ತಾ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಬದಲಾಗುತ್ತದೆ ಎಂದು ಬೆಳಗಾವಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ವ್ಹಿ. ಎಸ್. ಮಾಳಿ ಹೇಳಿದರು.

ಅವರು ಸೋಮವಾರ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದಜರ್ೆ ಕಾಲೇಜು ಹಾಗು ಬೆಳಗಾವಿ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವರ್ತಮಾನದ ವಚನ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ವಚನಗಳನ್ನು ಅಥರ್ೈಯಿಸಿಕೊಳ್ಳುವದು ತುಂಬಾ ಅವಶ್ಯಕವಾಗಿದೆ. ಶರಣರ ವಚನಗಳ ಚಿಂತನೆಗಳನ್ನು ಜನರಿಗೆ ತಿಳಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಮುಖ್ಯ ಅತಿಥಿ ಸಾಹಿತಿ, ಪ್ರೊ. ಚಂದ್ರಶೇಖರ ಅಕ್ಕಿ 'ವಚನಕ್ರಾಂತಿಯ ಪ್ರತಿಭಟನೆಯ ನೆಲೆಗಳು' ಎಂಬ ವಿಷಯದ ಕುರಿತು ಚಿಂತನೆ ಮಂಡಿಸಿ, ಪ್ರತಿಭಟನೆಯ ಮೊದಲ ನೆಲೆ ದೊರೆತಿರುವದು ವಚನದಲ್ಲಿ ಅಸಮಾನತೆಯು ವಚನಗಳಲ್ಲಿ ಪ್ರತಿಭಟನೆಯ ಮುಖ್ಯ ನೆಲೆಯಾಗಿ ಜಾತಿ ಮತ್ತು ಪಂಥಗಳು ಹೋರಾಟದ ನೆಲೆಗಳಾಗಿ ಬಂದಿರುವದು ಅಪೂರ್ವವಾಗಿದೆ ಎಂದರು.

 ಡಾ. ವಾಯ್. ಬಿ. ಹಿಮ್ಮಡಿ 'ವಚನಕ್ರಾಂತಿ ತರಬಯಸಿದ ಪಯರ್ಾಯ ವ್ಯವಸ್ಥೆ' ವಿಷಯದ ಕುರಿತು ಚಿಂತನೆ ಮಂಡಿಸುತ್ತಾ, ಮನುಕುಲವು ಮೂಢ ನಂಬಿಕೆಗಳಿಂದ ದೂರ ಸರಿಯಬೇಕು. ಬಸವಾದಿ ಪ್ರಮುಖರು 12ನೇ ಶತಮಾನದಲ್ಲಿ ಇಂಥ ಮೂಢನಂಬಿಕೆ, ಡಂಭಾಚಾರ, ಜಾತಿ ವ್ಯವಸ್ಥೆಯನ್ನು ಖಂಡಿಸಿದ್ದಾರೆ ಎಂದು ಹೇಳಿದರು.

   ಪರವೀನ ಅತ್ತಾರ ಬಸವಣ್ಣನವರ ಮತ್ತು ಅಲ್ಲಮರ ವಚನಗಳನ್ನು ಪ್ರಸ್ತುತಪಡಿಸಿ ಪ್ರಾಥರ್ಿಸಿದರು. ಟಿ.ಎಸ್.ವಂಟಗೂಡಿ, ಸುರೇಶ ಲಂಕೆಪ್ಪನ್ನವರ ವಚನಗಳನ್ನು ವಿಶ್ಲೇಷಿಸಿದರು.

 ಅಧ್ಯಕ್ಷತಯನ್ನು ಮೂಡಲಗಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುರೇಶ ಹನಗಂಡಿ ವಹಿಸಿ ಶರಣರ ದಾಸೋಹ, ಕಾಯಕ, ಪ್ರಸಾದ ಮತ್ತು ಜ್ಞಾನ ಪ್ರಸಾರದ ಕುರಿತು ಮಾತನಾಡಿದರು.