ಲೋಕದರ್ಶನ ವರದಿ
ಮುಧೋಳ 04: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾನ್ಯತೆ ಮಾಡಿರುವ ಉತ್ಪಾದಿತ ಮರಳು (ಎಮ್ ಸ್ಯಾಂಡ್) ಬಳಸುವದರಿಂದ ನದಿ ಮತ್ತು ಪರಿಸರ ಉಳಿಸಬಹುದೆಂದು ಉದ್ಯಮಿ ಸುಭಾಷ ರಾ.ಪಾಟೀಲ ತಿಳಿಸಿದರು.
ಶನಿವಾರ ಸ್ಥಳೀಯ ಕಾನಿಪ ಸಂಘದ ಕಾಯರ್ಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಮರಳು ಗಣಿಗಾರಿಕೆ ಮಾಫಿಯಾ ಭೀಕರ ರೂಪ ತಾಳಿದೆ, ಮರಳು ಗಣಿಗಾರಿಕೆ ತಡೆಯಲು ಸಕರ್ಾರ ಎಷ್ಟೇ ಹೊಸ ಹೊಸ ನಿಯಮಗಳು ಜಾರಿ ಮಾಡಿದರೂ ಕೂಡಾ ಹಳ್ಳ, ನದಿ ತಟಾಕಗಳಲ್ಲಿ ಮತ್ತು ಪಟ್ಟಾ ಜಮೀನುಗಳಲ್ಲಿ ಅನಧೀಕೃತವಾಗಿ ಮರಳು ಸಾಗಾಣಿಕೆ ಅವ್ಯಾಹಿತವಾಗಿ ನಡೆದಿದೆ, ಆಕ್ರಮ ಮರಳು ಮಾಫಿಯಾ ನಿಯಂತ್ರಿಸಲು ಸಕರ್ಾರ ಪ್ರತಿ ಜಿಲ್ಲೆಯಲ್ಲಿ ಟಾಸ್ಕಪೋರ್ಸ ಕಮಿಟಿ ರಚಿಸಿದೆ.
ಬಾಗಲಕೋಟ ಜಿಲ್ಲೆಯ ಟಾಸ್ಕಪೋರ್ಸ ಕಮಿಟಿಯು ಎರಡು-ಮೂರು ಸಲ ಸಭೆ ಸೇರಿ ಚಚರ್ಿಸಿದೆ, ಅದು ಅಲ್ಲದೆ ಹಲವು ಬಾರಿ ಕೆಡಿಪಿ ಸಭೆಯಲ್ಲಿಯೂ ಚಚರ್ೆಯಾಗಿದೆ ಆದರೂ ಇದಕ್ಕೆ ಯಾವುದೆ ಪರಿಹಾರ ದೊರೆತಿಲ್ಲ ಕಾರಣ ಅಧಿಕಾರಿಗಳ ನಿರ್ಲಕ್ಷತನ, ಮರಳು ಆಕ್ರಮ ದಂಧೆಗೆ ತೋರಿಸುತ್ತಿರುವ ಸಹಕಾರ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗಿದೆ, ಇದರ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿರುವದಿಲ್ಲ ಎಂದು ಆರೋಪಿಸಿದರು. ತಾವು ಸಾಲವನ್ನು ಮಾಡಿ ಅಂದಾಜು 15 ಕೋಟಿ ವೆಚ್ಚದಲ್ಲಿ ಉತ್ಪಾದಿತ (ಎಮ್ ಸ್ಯಾಂಡ್)ಮರಳು ಘಟಕ ಸ್ಥಾಪಿಸಲಾಗಿದೆ, ಸಕರ್ಾರದ ನಿಯಮಾನುಸಾರವಾಗಿ ಉತ್ತಮ ಗುಣಮಟ್ಟದ ಎಮ್ ಸ್ಯಾಂಡ್ ಉತ್ಪಾದಿಸಲಾಗುತ್ತದೆ,ಉತ್ಪಾದಿಸಿದ ಪ್ರಮಾಣಕ್ಕೆ ತಕ್ಕಂತೆ ಮಾರಾಟವಾಗುತ್ತಿಲ್ಲ ಇದಕ್ಕೆ ಮೂಲ ಕಾರಣ ಅನಧಿಕೃತ ಮರಳು ಗಣಿಗಾರಿಕೆಯಾಗಿದೆ, ಜಿಲ್ಲೆಯ 40ಕ್ಕೂ ಹೆಚ್ಚು ಇರುವ ಕ್ರಷರ್ ಘಟಕಗಳು ಸಕರ್ಾರದ ನಿಯಮವನ್ನು ಸರಿಯಾಗಿ ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸುತ್ತಿಲ್ಲವೆಂದು ದೂರಿದರು.
ಕಡಿ ಘಟಕಗಳಲ್ಲಿ ಬೂದಿ ಮರಳನ್ನು ತಯಾರಿಸಿ ಜನತೆಗೆ ಇದೆ ಮರಳು ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಿಗೆ ಎಮ್ ಸ್ಯಾಂಡ್ ಅತ್ಯಂತ ಸೂಕ್ತವಾಗಿದೆ ಬಿಐಎಸ್ ಗುಣಲಕ್ಷಣಗಳಿಗೆ ಬದ್ದವಾಗಲು ವೈಜ್ಞಾನಿಕವಾಗಿ ಗ್ರೇಡ್ ಮಾಡಿರುವ ಕಾರಣ ಹೆಚ್ಎಸ್ಸಿ ಸಂಶೋಧನೆ ವರದಿಯಂತೆ ನದಿ ಮರಳುಗಿಂತ ಎಮ್ ಸ್ಯಾಂಡ್ ಹೆಚ್ಚು ಗುಣಮಟ್ಟದ್ದಾಗಿರುತ್ತದೆ, ನದಿ ಮರುಳುಗಿಂತ ಎಮ್ ಸ್ಯಾಂಡ್ ಬೆಲೆ ಕಡಿಮೆ, ಉತ್ಪಾದನೆ ಶೀಘ್ರ,ಪರಿಸರ ಸ್ನೇಹಿಯಾಗಿದೆ, ಇದು ನೈಸಗರ್ಿಕ ಮರಳಿಗೆ ಉತ್ತಮ ಪಯರ್ಾಯವಾಗಿದ್ದು ಜೇಡಿಮಣ್ಣು ಮತ್ತು ಸಾವಯುವ ಮಿಶ್ರಣಗಳಿರುವದಿಲ್ಲ, ಸಕರ್ಾರದಿಂದ ಎಮ್ ಸ್ಯಾಂಡ್ ತಯಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರಿವಾನಿಗೆ ಇರುವುದು ಎಂದರು.
ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಗೋಡೆ, ಮೇಲ್ಚಾವಣಿ, ಗಿಲಾವು ಮಾಡಲು ಬೇಕಾಗುವಂತಹ ಉತ್ತಮ ಗುಣಮಟ್ಟದ ಎಮ್ ಸ್ಯಾಂಡ್ದಲ್ಲಿ ದೊರೆಯುತ್ತಿದೆ, ಎಮ್ ಸ್ಯಾಂಡ್ವು ದೀಘರ್ಾವಧಿ ಬಾಳಕೆ ಬರುತ್ತಿದೆ ಕಾರಣ ಸಾರ್ವಜನಿಕರು ಎಮ್ ಸ್ಯಾಂಡ್ವನ್ನು ಬಳಿಸಿ ಪರಿಸರ ಉಳಿಸಿ ಎಂದರು, ಪತ್ರಿಕಾಗೋಷ್ಠಿಯಲ್ಲಿ ಕಲ್ಮೇಶ ಪೂಜಾರಿ ಉಪಸ್ಥಿತರಿದ್ದರು.