ಲೋಕದರ್ಶನ ವರದಿ
ಮೂಡಲಗಿ 15: ತಾಲೂಕಿನ ಶಿವಪೂರ ಗ್ರಾಮದ ತೋಟದ ಮನೆಯಲ್ಲಿ ಕಲಬೆರಕೆ ಹಾಲು ತಯಾರಿಕೆಯ ಘಟಕದ ಮೇಲೆ ಮಂಗಳವಾರ ಗೋಕಾಕ್ ಡಿವಾಯ್ಎಸ್ಪಿ ಡಿ.ಟಿ. ಪ್ರಭು ನೇತೃತ್ವದ ಪೋಲಿಸ್ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಶಿವಪೂರ ಗ್ರಾಮದ ತೋಟದ ಮನೆಯಲ್ಲಿ ಬಂಧಿತ ಆರೋಪಿಗಳಾದ ಕಮಲದಿನ್ನಿ ಗ್ರಾಮದ ನಿಂಗಪ್ಪ ಯಲ್ಲಪ್ಪ ಸಂಕನ್ನವರ ಮತ್ತು ಮುನ್ಯಾಳ ಗ್ರಾಮದ ನಿಂಗಪ್ಪ ಹನುಮಂತ ದಡ್ಡಗೋಳ ಎಂಬುವವರು ರಾಸಾಯನಿಕ ಪೌಡರ್, ಯೂರಿಯಾ ಗೊಬ್ಬರ, ಪಾಮೋಲಿನ್ ಎಣ್ಣೆಯೊಂದಿಗೆ ಶಾಲಾ ಮಕ್ಕಳಿಗೆ ಸಕರ್ಾರ ನೀಡುತ್ತಿರುವ ಕೆನೆಭರಿತ ನಂದಿನಿ ಹಾಲಿನ ಪೌಡರ್ ಬಳಸಿಕೊಂಡು ಪ್ರತಿದಿನ 600 ಲೀ. ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡುತ್ತಿರುವುದು ದಾಳಿಯ ಸಂದರ್ಭದಲ್ಲಿ ಕಂಡು ಬಂದಿದೆ. ಬಂಧಿತರಿಂದ ಒಂದು ಬೈಕ್, 6 ಹಾಲಿನ ಕ್ಯಾನ್, ರಾಸಾಯನಿಕ ಪೌಡರ್, ಯೂರಿಯ ಗೊಬ್ಬರ, ಪಾಮೋಲಿನ್ ಎಣ್ಣೆ ಹಾಗೂ ಶಾಲಾ ಮಕ್ಕಳಿಗೆ ಸಕರ್ಾರ ನೀಡುತ್ತಿರುವ ನಂದಿನಿ ಕೆನೆಭರಿತ ಹಾಲಿನ ಪೌಡರ್ ಪಾಕೇಟ್, 2 ಮಿಕ್ಸರ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಗೋಕಾಕ್ ಡಿವಾಯ್ಎಸ್ಪಿ ಡಿ.ಟಿ. ಪ್ರಭು, ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ, ಆಹಾರ ಸುರಕ್ಷಿತ ಅಧಿಕಾರಿ ಲೋಕೇಶ ಗಾನೂರು, ಎಎಸ್ಐಗಳಾದ ಡಿ.ಸಿ.ಪಾಟೀಲ, ಎಮ್.ಎಸ್ ಬಡಿಗೇರ, ಹವಾಲ್ದಾರ ಎಲ್.ಎಸ್ ಹಂಪಿಹೊಳಿ, ಬಸವರಾಜ ಕೊಟೂರು, ವಿಠ್ಠಲ ಕೊಳವಿ, ಪೋಲಿಸ್ ಸಿಬ್ಬಂದಿಗಳಾದ ಡಿ.ಜಿ. ಕೊಣ್ಣೂರ, ಎಸ್.ಬಿ ಪೂಜೇರಿ ಮತ್ತಿತರರು ಇದ್ದರು