ಗೋಕಾಕ 05: ವ್ಯಕ್ತಿತ್ವದಿಂದ ವ್ಯಕ್ತಿಯ ಮೌಲ್ಯ ಹೆಚ್ಚಿಸುತ್ತದೆ, ನಾಡಿಗೆ ಘನತೆ ನೀಡಿದ ಸಾಧಕನ ಅಭಿನಂದನ ಗ್ರಂಥ, ನ್ಯಾಯ ಸಿಗುವಂತ ಕೃತಿಯಾಗಿ ಹೊರಬರಲಿ ಎಂದು ಸೃಜನಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಕಾರ್ಯದಶರ್ಿ ಭಾರತಿ ಮದಬಾವಿ ಹೇಳಿದರು.
ಸ್ಥಳೀಯ ಬಸವ ನಗರದ ಜಾನಪದ ವಿದ್ವಾಂಸ ಡಾ, ನಿಂಗಣ್ಣ ಸಣ್ಣಕ್ಕಿ ಸಭಾ ಭವನದಲ್ಲಿ ಗ್ರೇಟ್ ಕಲಾಕಾರ ವಿಶ್ವದ ವಿವಿಧ ದಾಖಲೆಗೆ ಕಾರಣನಾದ ಬಹುಮುಖ ಕಲಾವಿದ ಜಿ.ಕೆ.ಕಾಡೇಶಕುಮಾರ, ಕುರಿತು ಅಭಿನಂದನ ಗ್ರಂಥ ಸಮಿತಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,
ಗುರುವಾರ ದಿ,04 ರಂದು ಗ್ರಂಥ ಸಮಿತಿಯ ಪೂರ್ವಭಾವಿ ಸಭೆಯು ಹಿರಿಯ ಚಿಂತಕ ವಿ,ಎ,ಕುಲಕಣರ್ಿ ಅಧ್ಯಕ್ಷತೆಯಲ್ಲಿ ಜರುಗಿತು.
ಡಾ. ಸುರೇಶ ಹನಗಂಡಿ ಮಾತನಾಡಿ ಜಿ ಕೆ ಕಾಡೇಶಕುಮಾರರ ವಯಕ್ತಿಕ ಬದುಕಿನ ಸಿಹಿ-ಕಹಿ ಘಟನೆಗಳೊಂದಿಗೆ ಗೋಕಾವಿ ನಾಡಿನ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಮಜಲುಗಳನ್ನು ಅಭಿನಂದನ ಗ್ರಂಥ ಹೊತ್ತು ತರಲೆಂದು ಆಶಯ ವ್ಯಕ್ತಪಡಿಸಿದರು.
ಪ್ರಧಾನ ಸಂಪಾದಕ ಪ್ರಾ, ಜಯಾನಂದ ಮಾದರ ಅಭಿನಂದನ ಗ್ರಂಥದ ಸ್ವರೂಪ ಹಾಗೂ ಶಿಷರ್ೀಕೆಯ ಬಗ್ಗೆ ವಿಚಾರಮಂಡಿಸಿದರು, ಗೌರವ ಸಲಹೆಗಾರರಾಗಿ, ವಸಂತರಾವ ಕುಲಕಣರ್ಿ ಪುಷ್ಪಾ ಮುರಗೋಡ, ಗೌರವ ಸಂಪಾದಕರಾಗಿ ಈಶ್ವರಚಂದ್ರ ಬೆಟಗೇರಿ, ಕಪರಟ್ಟಿ ಬಸವರಾಜ ಹಿರೇಮಠ, ಭಾರತಿ ಮದಬಾವಿ, ಸಹ ಸಂಪಾದಕರಾಗಿ ಲಕ್ಷ್ಮಣ ಚೌರಿ, ಡಾ, ಸುರೇಶ ಹನಗಂಡಿ ಪ್ರೊ, ಸುರೇಶ ಮುದ್ದಾರ ಗೌರವ ಸದಸ್ಯರಾಗಿ ಪ್ರೊ,ಮಹಾನಂದ ಪಾಟೀಲ ರಾಯಪ್ಪಾ ಗುದಗನವರ, ಸುಗಂಧಾ ಡಂಬಳ ಬಲದೇವ ಸಣ್ಣಕ್ಕಿ, ಬಿ ಬಿ ಪಟಗುಂದಿ ಬಸವರಾಜ ಹಣಮಂತಗೊಳ, ಎಂ ಬಿ ಬಿರಾದಾರಪಾಟೀಲ, ಜಿ ಕೆ ಕಾಡೇಶಕುಮಾರ ಅಭಿನಂದನಾ ಗ್ರಂಥ ಸಮಿತಿಯ ಪದಾಧಿಕಾರಿಯಾಗಿ ಆಯ್ಕೆಯಾದರು.