ಬೆಳಗಾವಿ 23: ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೇಂಗಡೆ ಭರತೇಶ ಪಾಲಿಟೆಕ್ನಿಕ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ ಅವರ ಪ್ರಾಯೋಜಕತ್ವದಲ್ಲಿ ಹಾಗೂ ರೋಟರಿ ಕ್ಲಬ ಆಫ್ ಬೆಳಗಾವಿ ಇವರ ಸಹಯೋಗದಲ್ಲಿ ಫೆ.18 ರಿಂದ 22 ರವರೆಗೆ ವಿದ್ಯಾಥರ್ಿಗಳಿಗಾಗಿ ಪ್ರೇರಣಾ ಉಪನ್ಯಾಸ ಮಾಲೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಉಪನ್ಯಾಸ ಮಾಲೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ಕ್ಲಬ್ ಆಪ್ ಬೆಳಗಾವಿಯ ಅಧ್ಯಕ್ಷ ಡಾ. ಮುಕುಂದ ಉಡಚಣಕರ ಅವರು ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿ, ವಿಶೇಷ ಉಪನ್ಯಾಸಗಳಿಂದ ವಿದ್ಯಾಥರ್ಿಗಳಿಗೆ ಪ್ರೇರಿಪಿಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕೆಂದು ಅವರು ತಿಳಿಸಿದರು.
ಈ ಐದು ದಿನಗಳ ಉಪನ್ಯಾಸದಲ್ಲಿ ಹೇಡ್ರೋಪ್ಯಾಕ ಇಂಡಿಯಾ ಪ್ರೈ.ಲಿ. ಸಂಸ್ಥೆಯ ತಾಂತ್ರಿಕ ನಿದರ್ೇಶಕ ಶ್ರೀನಿವಾಸ ಹುದ್ದಾರ, ಸ್ಯಾಂಡವಿಕ ಇಂಡಿಯಾ ಸಂಸ್ಥೆಯ ಪಂಕಜ ಪರಮಾಜ, ಆದಿತ್ಯ ಕನ್ಸಲ್ಟಂನ್ಸಿ ಸಂಸ್ಥೆಯ ಜೈದೀಪ ಲೆಂಗಡೆ, ಅಡೋರ ವೇಲ್ಡಿಂಗ ಸಂಸ್ಥೆಯ ವಾಯ, ಎನ್, ವೆಂಕಟಗಿರಿ, ಅನೆಕ್ಸ್ ಗೇಟ ನಿದರ್ೇಶಕ ಹಿತೇಶ ಧರ್ಮದಾಸಾನಿ, ಅಟಲ ಲ್ಯಾಬ ಸಂಸ್ಥೆಯ ಅನುಜಾ ಪ್ರಕಾಶ, ಪ್ರಗತಿ ಇಂಡಸ್ಟ್ರೀಜ್ ಸಂಸ್ಥೆಯ ಮಹೇಶ ಸೇರಿದಂತೆ ಮೊದಲಾದವರು ವಿಶೇಷ ಉಪನ್ಯಾಸಗಳ ಮೂಲಕ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದರು.
ಸಮಾರಂಭದಲ್ಲಿ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಮಾರಂಭದಲ್ಲಿ ರೋಟರಿ ಕಾರ್ಯದಶರ್ಿ ಪ್ರದೀಪ ಕುಲಕಣರ್ಿ, ಮಹೇಶ ಭಿರಂಗಿ, ಪ್ರಮೋದ ಅಗರವಾಲ, ಮೊದಲಾದವರು ಉಪಸ್ಥಿತರಿದ್ದರು. ಮೋತಿಚಂದ ಲೇಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎನ್. ತುಳಸಿಗೆರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಪರ್ವತಿಕರ ವರದಿ ವಾಚನ ಮಾಡಿದರು. ಅರುಣಾ ಕೃಷ್ಣಪುರೆ ವಂದಿಸಿದರು. ರಾಜೇಶ್ವರಿ ಮತ್ತು ಮುದಸ್ಸರ ಕಾರ್ಯಕ್ರಮ ನಿರೂಪಿಸಿದರು.