ಲೋಕದರ್ಶನ ವರದಿ
ಗದಗ 22: ನಾಡಿನ ಅಪರೂಪದ ಕಾಯಕಯೋಗಿ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಾಲುಮತ ಮಹಾಸಭಾ ಹಾಗೂ ವಿದ್ಯಾನಿಧಿ ಪ್ರಕಾಶನ ವತಿಯಿಂದ ಕೇಂದ್ರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ನಾಗರಾಜ ಮೆಣಸಗಿ, ಪ್ರಲ್ಹಾದ ಹೊಸಳ್ಳಿ, ರಾಮಣ್ಣ ಹೂವಣ್ಣವರ, ಸೋಮನಗೌಡ ಪಾಟೀಲ, ವಸಂತ ಅಗಸಿಮನಿ, ಪ್ರವೀಣ ಕನ್ಯಾಳ, ಮಲ್ಲಪ್ಪ ಅಸುಂಡಿ, ಮಾದೇಗೌಡ ಕಣಗಿನಹಾಳ, ಭೀಮಪ್ಪ ಕಣಗಿನಹಾಳ, ಕುರಿಯವರ, ಶಾರದಾ ಲಕ್ಕುಂಡಿ, ಅಶ್ವಿನಿ ಹರಿಹರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.