ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ

ಬೈಲಹೊಂಗಲದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಮಾಯಿಸಿ ಹುತಾತ್ಮ ಯೋಧರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಅಪರ್ಿಸಿದ

ಬೈಲಹೊಂಗಲ 23: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ವೀರ ಯೋಧರ ಜತೆ ಹಾಗೂ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದೆವೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

     ಅವರು ಪಟ್ಟಣದ ಮೊರಬದ ಕಾಂಪ್ಲೆಕ್ಸ ಮುಂಭಾಗದಲ್ಲಿ ಮೊರಬದ ಸಹೋದರರು, ಗೆಳೆಯರ ಬಳಗ, ಕಾರ ಮಾಲಿಕರು, ಚಾಲಕರ ಸಂಘ ಏರ್ಪಡಿಸಿದ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಉಗ್ರರ ಹೇಯ ಕೃತ್ಯ ಖಂಡನೀಯವಾಗಿದ್ದು, ಶಾಂತಿ ಪ್ರೀಯ ರಾಷ್ಟ್ರವನ್ನು ಕೆಣಕುತ್ತಿರುವ ಉಗ್ರರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

   ನಿವೃತ್ತ ಸೈನಿಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಗುರನ್ನವರ ಮಾತನಾಡಿ, ಉಗ್ರಗ್ರಾಮಿಗಳು ಹಾಗೂ ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಮಟ್ಟ ಹಾಕಲು ನಮ್ಮ ಎಲ್ಲ ಮಾಜಿ ಸೈನಿಕರು ಸೇನೆಗೆ ಬರಲು ಸಿದ್ದರಿದ್ದೇವೆ ಎಂದರು.

 ಮಾಜಿ ಜಿಪಂ ಸದಸ್ಯ ಈಶ್ವರ ಉಳ್ಳೆಗಡ್ಡಿ ಮಾತನಾಡಿ, ಪಾಕಿಸ್ತಾನ ದೇಶಕ್ಕೆ ತಕ್ಕ ಪಾಠ ಕಲಿಸಲೆಬೇಕು. ಯೋಧರ ಸಾವಿಗೆ ಕಾರಣವಾದ ಉಗ್ರವಾದವನ್ನು ಸಂಪೂರ್ಣ ಬುಡಸಮೇತ ಕಿತ್ತುಹಾಕಬೇಕು ಎಂದರು. 

   ಮಹಾಂತೇಶ ಮೊರಬದ ಮಾತನಾಡಿ, ಜಗತ್ತಿನ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಉಗ್ರವಾದವನ್ನು ಹಣಿಯಲು ಕಾಯತಂತ್ರ ರೂಪಿಸಬೇಕು ಎಂದರು. ರಾಜು ನರಸನ್ನವರ, ಮಾಜಿ ಯೋಧ ವಿಠಲ ಹಲಗಿ, ರವೀಂದ್ರ ಜೊಂಜಾಳೆ ಮಾತನಾಡಿದರು.

ನೂರಾರು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಮಾಯಿಸಿ ಹುತಾತ್ಮ ಯೋಧರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಅಪರ್ಿಸಿ, ಅಮರ ರಹೇ, ಅಮರ ರಹೇ ಜವಾನ ಅಮರ ರಹೇ, ಪಾಕಿಸ್ತಾನ ಮುರದಾಬಾದ ಎಂದು ಘೋಷಣೆ ಕೂಗಿದರು.

ಮಲ್ಲಿಕಾಜರ್ುನ ಮೊರಬದ, ಶ್ರೀಶೈಲ ಮೊರಬದ, ಈರಣ್ಣ ಬೆಟಗೇರಿ, ಮಹಾಂತೇಶ ಮತ್ತಿಕೊಪ್ಪ, ಈರಣ್ಣ ಜವಳಿ, ಮೃತ್ಯೂಂಜಯ ಪಾಟೀಲ, ಅಶೋಕ ಶೆಟ್ಟಿ, ಚಿನ್ನಪ್ಪ ಕಂಠಿ,ಎಸ್.ಬಿ. ಹುಡೇದ, ಎನ್.ಎಂ. ಗುಂಡಗಂವಿ, ಸಿದ್ದು ಮುರಗೋಡ, ಎಂಜೆಕೆ ಹಿರೇಮಠ, ಕರವೀರ ರುದ್ರಾಪೂರ, ಬಸವರಾಜ ಚನನ್ನವರ, ದೇಸಾಯಿ, ಹೊಸಮನಿ, ಜಯರಾಜ ವಾಲಿ, ಇಲಾಯಿ ಬೆಟಗೇರಿ, ಶಶಿಧರ ಬಂದಕ್ಕನವರ, ಎಸ್.ಎಂ. ಪಾಟೀಲ, ಪ್ರಕಾಶ ಕಾಜಗಾರ, ಅನೀಲ ರಾಜನ್ನವರ, ಫಯಾಜ ಚಾಂದಶಾವಾಲೆ, ಸಿ.ಆಯ್. ಕಾದ್ರೋಳ್ಳಿ, ಗೀಜಾಲಾಲ ಪಟೇಲ, ಶಿವಕುಮಾರ ಹಂಪನ್ನವರ, ದಯಾನಂದ ಚಿಕ್ಕಮಠ, ನವೀನ ತುರಮರಿ, ಅಣ್ಣಾಸಾಹೇಬ ಶೇಖ, ಮಾಜಿ ಯೋಧರಾದ ಕಲಗೌಡ ಪಾಟೀಲ, ಶಿವಾನಂದ ಶೆಟ್ಟೆನ್ನವರ, ವೆಂಕಣ್ಣ ಶಿಂಧೆ ಮಹಿಳೆಯರು ಹಾಗೂ ನೂರಾರು ಸಾರ್ವಜನಿಕರು ಇದ್ದರು.