ಬೆಳಕು ಸಂಸ್ಥೆಯಿಂದ ವೀರ ಯೋಧರಿಗೆ ಶ್ರದ್ಧಾಂಜಲಿ

ಲೋಕದರ್ಶನ ವರದಿ

ಶಿಗ್ಗಾವಿ 20ಃ ಪಟ್ಟಣದ ನೌಕರರ ಭವನದಲ್ಲಿ ಬೆಳಕು ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಖಂಡಿಸಿ, ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಆಚರಿಸುವ ಮೂಲಕ ಹುತಾತ್ಮರಾದ ವೀರಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಶ್ರದ್ದಾಂಜಲಿ ಸಭೆಯಲ್ಲಿ ಜನತಾ ಬಜಾರ್ ಅದ್ಯಕ್ಷ ಕರೆಪ್ಪ ಕಟ್ಟಿಮನಿ, ಸಂಸ್ಥೆಯ ಗೌರವ ಸಲಹೆಗಾರರಾದ ಕೆ ಕೊಟ್ರೇಶ ಮಾಸ್ತರ್ ಬೆಳಗಲಿ, ಶಂಕರ್ ಅರ್ಕಸಾಲಿ, ಶಶಿಕಾಂತ ರಾಥೊಡ್, ಬಸಲಿಂಗಪ್ಪ ನರಗುಂದ, ಜಿಲ್ಲಾದ್ಯಕ್ಷ ನಾಗಪ್ಪ ಬೆಂತೂರ, ತಾಲೂಕಾದ್ಯಕ್ಷ ಬಸವರಾಜ ವಿ ಎಚ್, ಉಪಾದ್ಯಕ್ಷ ವಿಶ್ವನಾಥ ಬಂಡಿವಡ್ಡರ, ಕಾರ್ಯದಶರ್ಿ ಶಂಬು ಕೇರಿ, ಶಿಕ್ಷಕ ಹಾರೋಗೆರಿ, ಎಮ್ ಎಲ್ ನಾಯ್ಕೋಡಿ, ಶರಣ ಬಡ್ಡಿ ಸೇರಿದಂತೆ ಬೆಳಕು ಸಂಸ್ಥೆಯ ಇತರ ಸದಸ್ಯರು ಇದ್ದರು.