ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ದಾವಣಗೆರೆ 08:- ಪ್ರಸಕ್ತ ಸಾಲಿನ ಸನ್ 2024-25 ನೇ ಸಾಲಿನಲ್ಲಿ ಕರ್ನಾಟಕದ ದೈವಜ್ಞ ಬ್ರಾಹ್ಮಣ ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಾವಣಗೆರೆಯ ಪ್ರೇಮಾ ಅರುಣಾಚಲ ಏನ್ ರೇವಣಕರ ಪ್ರತಿಷ್ಠಾನದ ವತಿಯಿಂದ ಮುಂಬರುವ ಜೂನ್ 15 ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
ಸದರ ಕಾರ್ಯಕ್ರಮವು ದೈವಜ್ಞ ಬ್ರಾಹ್ಮಣ ಸಮಾಜದ ವಿದ್ಯಾರ್ಥಿ - ವಿದ್ಯಾರ್ಥಿನಿಯರ ಸೈಕ್ಷಣಿಕ ವಿದ್ಯಾಭ್ಯಾಸದ ಪ್ರೇರಣಾತ್ಮಕವಾಗಿ ಅವರ ಮುಂದಿನ ಸೈಕ್ಷಣಿಕ ವ್ಯಾಸಂಗದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲು ಈ ಒಂದು ವೈವಿಧ್ಯಮಯ ಕಾರ್ಯಕ್ರಮವನ್ನು ವಿಶೇಷವಾಗಿ ದೈವಜ್ಞ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲಾಗಿರುತ್ತದೆ.
ಈ ಒಂದು ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯೇಕ್ಷರಾದ ರವಿ ಶ್ರೀಕಾಂತ್ ಗಾಂವಕರ ರವರನ್ನು ಇಂದು ದಿನಾಂಕ 8 ರಂದು ದಾವಣಗೆರೆಯ ನಲ್ಲೂರು ಅರುಣಾಚಲ ಕುಟುಂಬದ ಸದಸ್ಯರನ್ನೊಳಗೊಂಡ ತಂಡದವರಿಂದ ಧಾರವಾಡ ದೈವಜ್ಞ ಬ್ರಾಹ್ಮಣ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿ,ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂಧರ್ಭದಲ್ಲಿ ದಾವಣಗೆರೆಯ ನಲ್ಲೂರ ಅರುಣಾಚಲ್ ಏನ್ ರೇವಣಕರ, ನಲ್ಲೂರ ಲಕ್ಷ್ಮಣರಾವ್ ಏನ್ ರೇವಣಕರ ಶ್ರೀಮತಿ ಪ್ರೇಮಾ ಅರುಣಾಚಲ್ ಏನ್ ರೇವಣಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.