ಗೋಕಾಕ 02: ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತಿದೆ ಎಂದು ಕನರ್ಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ. ನಾಗನಗೌಡ ಹೇಳಿದರು.
ರವಿವಾರದಂದು ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಮಹಾತ್ಮ ಗಾಂಧೀ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕನರ್ಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಜಗದ್ಗುರು ಪೀಠ ಹರಿಹರದ ಗೋಕಾಕ ತಾಲೂಕಾ ಆತಿಥ್ಯದಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉನ್ನತ ಹುದ್ದೆ ಅಲಂಕರಿಸುವಂತೆ ಮಾಡಬೇಕು. ಉನ್ನತ ಹುದ್ದೆ ಅಲಂಕರಿಸುವ ವಿದ್ಯಾಥರ್ಿಗಳಿಗೆ ಸಂಘದಿಂದ ಉಚಿತ ತರಬೇತಿ ನೀಡಲಾಗುವುದು. ಎಲ್ಲರೂ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.
ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಮಾತನಾಡಿ, 30 ಕೋಟಿ ರೂ, ವೆಚ್ಚದಲ್ಲಿ ಹರಿಹರದಲ್ಲಿ ಗುರುಪೀಠ ಸ್ಥಾಪನೆಯಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿವಿಧ ಸ್ಥಳಗಳಲ್ಲಿ ಸಮುದಾಯ ಭವನ ನಿಮರ್ಾಣಕ್ಕಾಗಿ ದಾನಿಗಳು ಭೂಮಿಯನ್ನು ನೀಡುತ್ತಿದ್ದಾರೆ. ಸಮಾಜ ಬಾಂಧವರು ತನು-ಮನ-ಧನದಿಂದ ಸಹಕಾರ ನೀಡಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.
ರಾಜ್ಯದ ವೀರಶೈವ ಲಿಂಗಾಯತ ಸಮುದಾಯದವರಿಗೆ ಶೇ. 20 ರಷ್ಟು ಮೀಸಲಾತಿ ನೀಡಬೇಕು ಹಾಗೂ ಮಹಾದಾಯಿ ತೀಪರ್ು ಗೆಜೆಟ್ನಲ್ಲಿ ಪ್ರಕಟನೆಯಾಗಬೇಕು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಸಕರ್ಾರಕ್ಕೆ ಆಗ್ರಹಿಸಿದರು.
ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾಥರ್ಿಗಳನ್ನು ಪ್ರಶಸ್ತಿ ಪತ್ರ ಹಾಗೂ ಇಷ್ಠಲಿಂಗವನ್ನು ನೀಡಿ ಸನ್ಮಾನಿಸಲಾಯಿತು.
ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಹಾಗೂ ಮನುಗುಳಿಯ ಹಿರೇಮಠದ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ಕನರ್ಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಎಲ್.ಬಿ.ಹುಳ್ಳೇರ, ಪ್ರಧಾನ ಕಾರ್ಯದಶರ್ಿ ಬಿ.ಎಸ್.ಗೋಲಬಾಂವಿ, ರಾಜ್ಯ ಸಂಘದ ಪದಾಧಿಕಾರಿಗಳಾದ ಜಿ.ಪಿ.ಪಾಟೀಲ, ಆಯ್.ಆರ್.ಬೆಳಕೂಡ, ನಾಗರತ್ನಾ ಬಾಂವಿಕಟ್ಟಿ, ಸಿದ್ದೇಶ ಹನಶಿ, ಮಲ್ಲಣ್ಣ ಬೊಮ್ಮಸಾಗರ, ಪ್ರೇಮಲತಾ ಕಡಗದ, ವಾಯ್.ಎಚ್.ಪಾಟೀಲ, ಜಗದೀಶಗೌಡ ಪಾಟೀಲ, ಮಹೇಶ ಚನ್ನಂಗೆ, ಎಮ್.ಎಮ್.ಹನಶಿ, ಡಿ.ಆರ್.ಪಾಟೀಲ, ಬಿ.ಎಮ್.ಚಿಕ್ಕನಗೌಡರ, ಮಾರುತಿ ಕೊಪ್ಪದ, ಗಣ್ಯರಾದ ಅಡಿವೆಪ್ಪ ಮರಲಿಂಗನವರ, ಮಹಾಂತೇಶ ತಾಂವಶಿ ಇದ್ದರು.
ಶಿವಾನಂದ ಜನ್ಮಟ್ಟಿ ಸ್ವಾಗತಿಸಿದರು. ಶೈಲಾ ಕೊಕ್ಕರಿ ವಂದಿಸಿದರು.