ಗದಗ 02: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ನುಡಿದರು.
ಅವರಿಂದು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಳಸಾಪುರ ರಸ್ತೆಯಲ್ಲಿ ಮೈಲಾರಪ್ಪ ಮೆಣಸಗಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಕ್ಕಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಾದರೆ ಸರ್ವತೋಮುಖ ಬೆಳವಣೆಯಾದಂತೆ. ಈ ನಿಟ್ಟಿನಲ್ಲಿ ಅವರಲ್ಲಿ ಹುದುಗಿರುವ ಕಲೆ, ಸಾಹಿತ್ಯ, ವಿವಿಧ ಪ್ರತಿಭೆಗಳನ್ನು ಹೊರಹೊಮ್ಮಲು ಇದೊಂದು ಉತ್ತಮ ವೇದಿಕೆಯಾಗಿದೆ. ಗದಗ ಜಿಲ್ಲೆಯು ಸಂಗೀತ ಕ್ಷೇತ್ರ, ಚಿತ್ರಕಲೆ, ಕ್ರೀಡಾ ಕ್ಷೇತ್ರ ಹೀಗೆ ಅನೇಕ ಕ್ಷೇತ್ರಗಳಲ್ಲಿ ಇಡೀ ರಾಷ್ಟ್ರಕ್ಕೆ ಕೀತರ್ಿ ತಂದುಕೊಟ್ಟಿದೆ. ಪಂ. ಭೀಮಸೇನ ಜೋಶಿಯವರು ಸಂಗೀತ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪಡೆದುಕೊಂಡಿದ್ದಾರೆ. ಅದೇ ರೀತಿ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಪಂ. ಪುಟ್ಟರಾಜ ಗವಾಯಿಗಳವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರಕಲಾ ಕ್ಷೇತ್ರದಲ್ಲಿ ಸಿ.ಎನ್. ಪಾಟೀಲ, ಟಿಪಿ ಅಕ್ಕಿಯವರು ವಿಶೇಷ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಕಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಇಂದು ನಾವು ಸ್ಮರಿಸಬೇಕಾಗುತ್ತದೆ. ಗದಗ ಜಿಲ್ಲೆಯಲ್ಲಿನ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಹೆಸರು ತರಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ ಅವರು ಒಬ್ಬೊಬ್ಬ ವಿದ್ಯಾಥರ್ಿಗಳಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ವಿದ್ಯಾಥರ್ಿಗಳು ತಮ್ಮಲ್ಲಿ ಅಡಗಿರುವ ಕಲೆಯನ್ನು ಹೊರಹೊಮ್ಮಲು ಇದೊಂದು ಉತ್ತಮ ಅವಕಾಶವಾಗಿದೆ. ಗದಗ ಜಿಲ್ಲೆಯು ಸಂಗೀತ, ಸಾಹಿತ್ಯ, ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ವಿದ್ಯಾಥರ್ಿಗಳಲ್ಲಿ ಅಡಗಿರುವ ಪ್ರತಿಭಾ ಶಕ್ತಿಯನ್ನು ಗುರುತಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಮೈಲಾರಪ್ಪ ಮೆಣಸಗಿ ಮೆಮೊರೀಯಲ್ ಟ್ರಸ್ಟ್ ನ ಅಧ್ಯಕ್ಷ ಜಯದೇವ ಮೆಣಸಗಿ, ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಪಿ.ಸಿ. ಕಲಹಾಳ, ಕ.ರಾ.ಪ್ರಾ. ಶಾ.ಶಿ. ಸಂಘದ ಜಿಲ್ಲಾ ಅಧ್ಯಕ್ಷರಾದ ವಿ.ಎಂ. ಹಿರೇಮಠ, ಎಸ್.ಸಿ. ಎಸ್.ಟಿ. ವೇದಿಕೆ ಕ.ರಾ.ಶಾ. ಶಿ.ಸಂಘದ ರಾಜ್ಯ ಸಂಚಾಲಕರಾದ ಎಸ್.ಎನ್. ಬಳ್ಳಾರಿ, ಪ್ರೌ.ಶಾ.ದೈ. ಶಿ.ಶಿ. ಸಂಘದ ಜಿಲ್ಲಾಧ್ಯಕ್ಷರಾದ ಎಂ.ಎಸ್. ಕುಚಬಾಳ, ಪ್ರೌಢಶಾಲಾ ಚಿತ್ರಕಲಾ ಸಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ ಕಿರೇಸೂರ, ಪ್ರೌ.ಶಾ.ವೃ. ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ನಿಂಗನಗೌಡ್ರ, ಕ.ರಾ.ಸ.ನೌ. ಸಂಘದ ರಾಜ್ಯ ಪರಿಷತ್ ಸದಸ್ಯರಾದ ವಿ.ಬಿ. ಪೊಲೀಸ ಪಾಟೀಲ, ಕ.ರಾ. ಪ್ರಾ. ಶಾ.ಶಿ. ಸಂಘದ ಪ್ರ. ಕಾರ್ಯದಶರ್ಿ ಎಸ್.ಎಚ್. ನೈನಾಪುರ , ಶಿಕ್ಷಣಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದಶರ್ಿ ವಿ.ವಿ. ನಡುವಿನಮನಿ, ಪ್ರೌ.ಶಾ.ಸ.ಶಿ. ಸಂಘದ ಜಿಲ್ಲಾ ಘಟಕದ ಪ್ರ. ಕಾರ್ಯದಶರ್ಿ ಪಿ.ಎಚ್.ಕಡಿವಾಲ, ಕ.ರಾ.ಎಸ್.ಸಿ/ ಎಸ್ ಟಿ ಪ್ರಾ.ಮಾ.ಶಾ.ಶಿ.ಕ್ಷೇ ಸಂಘದ ಜಿಲ್ಲಾ ಅಧ್ಯಕ್ಷ ಎಂ.ವೈ. ತೇರದಾಳ, ಗದಗ ತಾಲೂಕ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಎಸ್. ಮುಳಗುಂದಮಠ, ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಬಿ.ಎಫ್. ಪೂಜಾರ, ಕ.ರಾ. ಪ್ರಾ. ಶಾ.ಶಿ. ಸಂಘದ ಗದಗ ಶಹರ ತಾಲೂಕಾ ಅಧ್ಯಕ್ಷರಾದ ವಿ.ಜಿ. ಖೋಡೆ, ಗದಗ ಗ್ರಾಮೀಣ ಕ.ರಾ. ಪ್ರಾ. ಶಾ.ಶಿ. ಸಂಘದ ಅಧ್ಯಕ್ಷರಾದ ಡಿ.ಎಸ್. ತಳವಾರ, ಗದಗ ಶಹರ ಕ.ರಾ. ಪ್ರಾ. ಶಾ.ಶಿ. ಸಂಘದ ಪ್ರಧಾನ ಕಾರ್ಯದಶರ್ಿ ಎಚ್.ಆರ್. ಕೋಣಿಮನಿ, ವಿವಿಧ ಶಾಲೆಗಳ ವಿದ್ಯಾಥರ್ಿ ವಿದ್ಯಾಥರ್ಿನಿಯರು, ಶಿಕ್ಷಕರುಗಳು, ನಿಣರ್ಾಯಕರುಗಳು ಉಪಸ್ಥಿತರಿದ್ದರು.
ಎಚ್.ಬಿ. ರಡ್ಡೇರ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಹಿರೇಕೊಳಚಿ ವಾಯಲಿನ್ ಮುಖಾಂತರ ನಾಡಗೀತೆ ಪ್ರಸ್ತುತಿಸಿದರು.