ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ: ಅಧಿಕಾರಿಗಳಿಗೆ ಮನವಿ
ಧಾರವಾಡ 10: ಜಿಲ್ಲೆಯ ಕಲಘಟಗಿ ತಾಲೂಕಿನ ಬಿ ಗುಡಿಹಾಳ ಸೇರಿದಂತ ವಿವಿಧ ಗ್ರಾಮಗಳಲ್ಲಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕಡಿತ ಮಾಡಿರುವುದನ್ನು ಈ ಕೂಡಲೇ ಸಂಪರ್ಕ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ, ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ ಎಮ್ ದೊಡ್ಡಮನೆ ಅವರಿಗೆ ಮನವಿ ಸಲ್ಲಿಸಲಾಯಿತು. ಕಲಘಟಗಿ ತಾಲೂಕಿನ ಬಿ ಗುಡಿಹಾಳ ಗ್ರಾಮದ ರೈತರಿಗೆ ಆರ್‌ಆರ್ ನಂಬರ್ ಇಲ್ಲ ಎಂಬ ನೆಪವಡ್ಡಿ, ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಮಾಡಿರುವುದರಿಂದ ರೈತರ ಹೊಲದಲ್ಲಿ ಬೆಳೆದಿರುವ ಗೋಂಜಾಳ, ತರಕಾರಿ, ಹೂ, ಸೋಯಾಬೀನ್ ಮುಂತಾದ ಬೆಳೆಗಳು ಬಾಡಿ ಹೋಗುತ್ತಿವೆ. ರೈತರ ಈಗಾಗಲೇ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದಾರೆ, ಏಕಾಏಕಿ ಸಾವಿರಾರು ರೂಪಾಯಿ ಕಟ್ಟಬೇಕೆಂದರೆ ರೈತರ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದಕಾರಣ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ, ಆರ್‌ಆರ್ ನಂಬರ್ ಪಡೆಯುವುದಕ್ಕೆ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಬಸ್ಸಪ್ಪ ಕಲಘಟಗಿ ತಾಲೂಕ ಸಮಿತಿ ಸದಸ್ಯರಾದ ಸಂತೋಷ ಗೋರೆ್ಡ, ಶಿವಾಜಿ ಕಾಳೋಜಿ, ಶಿವಲಿಂಗಪ್ಪ ಉಣಕಲ್ ಇದ್ದರು.