ರಾಯಬಾಗ 09: ಕ್ರೀಡೆಗಳಿಂದ ದೇಹದ ನರ ನಾಡಿಗಳು ಬಲಿಷ್ಠವಾಗಿ ದೇಹಕ್ಕೆ ಶಕ್ತಿ, ಮನಸಿಗೆ ಉಲ್ಲಾಸವುಂಟಾಗಿ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುವದರಿಂದಲೇ ಕ್ರೀಡೆಗಳು ಮನುಷ್ಯನ ಅವಿಭಾಜ್ಯ ಅಂಗಗಳೆಂದು ಹೇಳಲಾಗುತ್ತದೆ ಎಂದು ಜಿ.ಪಂ.ಸದಸ್ಯ ಹಾಗೂ ಅಭಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಹೇಳಿದರು.
ರವಿವಾರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಾಜಿ ಸಚಿವ, ಸ್ವಾತಂತ್ರ್ಯ ಹೋರಾಟಗಾರ ದಿ. ವ್ಹಿ.ಎಲ್.ಪಾಟೀಲ (ಅಭಾಜಿ) ಅವರ 6ನೇ ಪುಣ್ಯ ಸ್ಮರಣೆ ನಿಮಿತ್ಯವಾಗಿ (ಅಭಾಜಿ) ಫೌಂಢೇಶನ್ದವರು ಏರ್ಪಡಿಸಿದ್ದ ಅಂತರಾರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಬ್ಯಾಟಿಂಗ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಮಕ್ಕಳ ಚಿತ್ತ ಕ್ರೀಡೆಗಳತ್ತ ವಾಲುವದರಿಂದ ಕೆಟ್ಟ ಹವ್ಯಾಸಗಳು ಸಮೀಪ ಸುಳಿಯುವದಿಲ್ಲ. ಇಂದಿನ ಮಕ್ಕಳು ಟಿ.ವಿ. ವೀಕ್ಷಣೆಯಿಂದ ದೂರಾಗಿ ಆಟೋಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರೆ ಮರೆಯಾಗುತ್ತಿರುವ ಕ್ರೀಡೆಗಳಿಗೆ ಮರು ಜೀವ ಬಂದಂತಾಗುತ್ತದೆ ಎಂದರು.
ಪಂದ್ಯಾವಳಿಯಲ್ಲಿ ತಮಿಳನಾಡು, ಗೋವಾ, ಗುಜರಾಥ, ಮಹಾರಾಷ್ಟ್ರ ಮತ್ತು ಕನರ್ಾಟಕದ ಹಲವಾರು ತಂಡಗಳು ಸೇರಿದಂತೆ 24 ತಂಡಗಳು ಭಾಗವಹಿಸಿವೆ.
ಕಾರ್ಯಕ್ರಮದಲ್ಲಿ ನಂದು ಮಾನೆ, ಜುಬೇರ ಮುಲ್ಲಾ, ಪ್ರಸಾದ ಕಾತರಕಿ, ಬಿ.ಎಸ್.ಗಡ್ಡೆ, ಗಣೇಶ ಕಾಂಬಳೆ, ಎಸ್.ಬಿ.ಹೋಳ್ಕರ, ಉತ್ತಮಕುಮಾರ ಶಿಂಧೆ, ಹಣಮಂತ ಸಾನೆ, ಭರಮು ಡೋಣಿ, ಅಪ್ಪಾಜಿ ಪೂಜೇರಿ, ರಾಜು ಅಳಾಜ, ಡಾ.ವಿಜಯ ಬೋರೆ, ವಾಸು ಮಣ್ಣಿಕೇರಿ, ಮಹಾದೇವ ಕೊಕಾಟೆ ಇದ್ದರು.
ಜ್ಯೋತಿ ರೂಪಾಳೆ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಣಾಧಿಕಾರಿ ಡಿ.ಎಸ್.ಡಿಗ್ರಜ ವಂದಿಸಿದರು.