ಬೆಳ್ಳಿ ತಟ್ಟೆಯಾಗ ಮುತ್ತು ಸುರಿದು ತುಂಬಿ ತುಳುಕಿತಲೆ ಪರಾಕ್ : ಗೊರವಪ್ಪ ಮಾಕಪ್ಪನವರ

Pouring pearls on a silver platter and filling it with Tulukitale Paraak: Goravappa Makappa's

ಬೆಳ್ಳಿ ತಟ್ಟೆಯಾಗ ಮುತ್ತು ಸುರಿದು ತುಂಬಿ ತುಳುಕಿತಲೆ ಪರಾಕ್ : ಗೊರವಪ್ಪ ಮಾಕಪ್ಪನವರ 

ಶಿಗ್ಗಾವಿ  06: ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿ ದಿನ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯ ನಿಮಿತ್ತ ನುಡಿದ ಕಾರ್ಣಿಕ ಬೆಳ್ಳಿ ತಟ್ಯಾಗ್ ಮುತ್ತು ಸುರಿದು ತುಂಬಿ ತುಳುಕಿತ್ತಲೆ ಪರಾಕ್‌. ಇತಿಹಾಸ ಪ್ರಸಿದ್ಧವಾದ ಈ ಗ್ರಾಮದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ನಾಲ್ಕು ರವಿವಾರ ಶ್ರೀ ಮೈಲಾರಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪಲ್ಲಕಿ ಉತ್ಸವ ಜವಳ ದೀಡ ನಮಸ್ಕಾರ ಹಾಕುವ ಕಾರ್ಯಕ್ರಮವು ರಾಮನವಮಿ ದಿನದಂದು ಮೈಲಾರಲಿಂಗೇಶ್ವರ ಹಾಗೂ ವೀರಭದ್ರೇಶ್ವರ ಜಾತ್ರೆ ನಡೆಯಿತು.   

 ಮುಂಜಾನೆ 9 ಘಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಡೋಣಿ ತುಂಬಿಸುವ ಕಾರ್ಯಕ್ರಮ ನಂತರ ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಮದ್ಯಾಹ್ನ 1 ಘಂಟೆಗೆ ಗ್ರಾಮದ ವೀರಭದ್ರಗೌಡ ಪಾಟೀಲ ಅವರ ಮನೆಯ ಮುಂದೆ ಕಾರ್ಣಿಕದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು ಬಿಲ್ಲನ್ನು ಏರಿ ಬೆಳ್ಳಿ ತಟ್ಟೆಲಿ ಮುತ್ತು ಸುರಿದು ತುಂಬಿ ತುಳುಕಿತ್ತಲೆ ಪರಾಕ್ ಎಂದು ಕಾರ್ಣಿಕ ನುಡಿದಾಗ ನೆರೆದ ಭಕ್ತರು ಏಳುಕೋಟಿ ಏಳುಕೋಟಿ ಚಾಗಬೋಲೋ ಎಂದು ಜಯಘೋಷ ಮಾಡಿದರು.ನೆರೆದ ಭಕ್ತರು ಕಾರ್ಣಿಕದ ಕುರಿತು ನಾನಾರ್ಥದಲ್ಲಿ ವಿಶ್ಲೇಷಣೆ ಮಾಡಿದರು ಮಳೆ ಬೆಳೆ ಚನ್ನಾಗಿ ಆಗುವದು ಎಂಬ ವಿಶ್ಲೇಷಣೆ ನಡೆದವು. ಮಧ್ಯಾಹ್ನ ಸರಪಳಿ ಪವಾಡ ಹಾಗೂ ವಿವಿಧ ಪವಾಡಗಳು ನಡೆದವು.   

 ಈ ಸಂದರ್ಭದಲ್ಲಿ ಪೂಜ್ಯರಾದ ರಮೇಶ ಗೋನಾಳ ಮೈಲಾರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಧರ್ಮಣ್ಣ ಕಿವಡನವರ,ಹೇಮಂತ್ ಮೋದಿ, ಶರೀಫ ಮಾಕಪ್ಪನವರ, ಹಣಮಂತಪ್ಪ ಸುಣಗಾರ, ಬಸನಗೌಡ ಪಾಟೀಲ, ಮಾಲತೇಶ್ ಕುಲಕರ್ಣಿ, ಸುರೇಶ ಭೀಮನವರ, ವೀರಭದ್ರಯ್ಯ ಪೂಜಾರ, ಶಿವಪುತ್ರಯಾ ಪೂಜಾರ, ಮುದಕಪ್ಪ ಸುಣಗಾರ, ಮಾಲತೇಶ್ ಓಲೇಕಾರ, ಮಂಜುನಾಥ ಭೀಮನವರ ಹಾಗೂ ಮೈಲಾರಲಿಂಗೇಶ್ವರ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಗ್ರಾಮಸ್ಥರು ಹಾಜರಿದ್ದರು.