ಅಥಣಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರಿಂದ ರಾಷ್ಟೀಯ ಸೇವಾ ಯೋಜನೆ ಶಿಬಿರ
ಸಂಬರಗಿ, 07 : ಸರಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿ ಸುಮಾರು 50 ವಿದ್ಯಾರ್ಥಿಗಳು ನಮ್ಮ ಗ್ರಾಮಕ್ಕೆ ಬಂದಿರುವುದು ನಮಗೆ ತುಂಬಾ ಸಂತೋಷವೆನಿಸುತ್ತದೆ. 7 ದಿವಸಗಳವರೆಗೆ ನಮ್ಮ ಗ್ರಾಮದಲ್ಲಿದ್ದುಕೊಂಡು ಸ್ವಯಂ ಪ್ರೇರಣೆಯಿಂದ ದೇವಸ್ಥನ, ಗ್ರಾಮದ ಬೀದಿಗಳನ್ನು ಸ್ವಚ್ಚ ಮಾಡುವ ಮೂಲಕ ಬಸವೇಶ್ವರರ ಪ್ರೀತಿಗೆ ಪಾತ್ರರಾಗಬೇಕೆಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಧರೇಪ್ಪ ಹೊನ್ನಾಗೋಳ ಹೇಳಿದರು.
ಖಿಳೇಗಾಂವ ಗ್ರಾಮದ ಬಸವೇಶ್ವರ ದೇವಸ್ಥನದ ಆರವಣದಲ್ಲಿ ಸರಕಾರಿ ಮಹಾವಿದ್ಯಾಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಸಿಬಿರ ಉದ್ಘಾಟಿಸಿ ಮಾತನಾಡಿ ಅವರು ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಪ್ರಥಮವಾಗಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಚತೆ, ಜನಜಾಗೃತಿ, ಸಾಕ್ಷಿರತೆಯ ಕುರಿತು ತಿಳುವಳಿಕೆ ಇಂತಹ ವಿವಿದ ಕಾರ್ಯಕ್ರಮಗಳಿಂದ ಗ್ರಾಮದ ಜನರಿಗೆ ಮಾಹಿರಿ ತಲುಪಿಸುವ ಕಾರ್ಯ ನಡೆಯುತ್ತಿದೆ. ಗ್ರಾಮಸ್ಥರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯರು ವಿಲಾಸ್ ಕಾಂಬಳೆ ಮಾತನಾಡಿ ಅವರು ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಸಂತೋಷವೆನಿಸುತ್ತದೆ. ಎಲ್ಲರೂ ಬಸವೇಶ್ವರರ ಪ್ರೀತಿಗೆ ಪಾತ್ರರಾದಂತೆ. ಇಲ್ಲಿನ ಕಮಿಟಿಯವರು ಕಾಲೇಜಿಗೆ ಬಂದು ನಮ್ಮ ಗ್ರಾಮವನ್ನು ನೀವು ದತ್ತು ತೆಗೆದುಕೊಂಡು 7 ದಿವಸ ವಿಶೇಷ ವಾರ್ಷಿಕ ಶಿಬಿರವನ್ನು ಮಾಡುವಂತೆ ಕೇಳಿಕೊಂಡರು. ಅದು ನಮಗೆ ವಲಿದುಬಂದ ಭಾಗ್ಯ ಏನ್ನಬಹುದು. ಯಾಕೆಂದರೆ, ನಮ್ಮ ಮಕ್ಕಳಿಗೆ ಇಂಥಹ ಒಂದು ಸೌಭಾಗ್ಯ ದೊರೆತಿರುವುದಕ್ಕೆ ಎಷ್ಟೋ ದೂರಿನಿಂದ ದೇವರ ದರ್ಶನಕ್ಕಾಗಿ ಭಕ್ತಾಧಿಗಳು ಬರುತ್ತಾರೆ. ನಮ್ಮ ಶಿಬಿರಾರ್ಥಿಗಳು ಇಲ್ಲಿಯೆ ಇದ್ದುಕೊಂಡು ಗ್ರಾಮವನ್ನು ಮತ್ತು ದೇವಸ್ಥಾನವನ್ನು ಸ್ವಚ್ಚ ಮಾಡುವಂತಾಯಿತು.
ಶಿಬಿರಾರ್ಥಿಗಳೇ ನೀವು ಮಾಡುವ ಕೆಲಸದಿಂದಾಗಿ ಗ್ರಾಮಸ್ಥರು ನಮ್ಮನ್ನು ಅನುಸರಿಸಿ ತಮ್ಮ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಆಗಬೇಕು. ಪ್ರತಿ ದಿನ ಯೋಗ, ಧ್ಯಾನ ಮತ್ತು ಶ್ರಮದಾನ ಮಾಡಬೇಕು. ನಿಮ್ಮ ಜೊತೆ ಗ್ರಾಮಸ್ಥರು ಸೇರಿ ಭಾಗವಹಿಸುವಂತಾಗಬೇಕು. ಅಂದಾಗ ಮಾತ್ರ ನಮ್ಮ ವಾರ್ಷಿಕ ವಿಶೇಷ ಶಿಬಿರ ಯಶಸ್ವಿಯಾಗಲು ಸಾಧ್ಯ ಎಂದರು.
ಈ ವೇಳೆ ದೇವಸ್ಥಾನ ಕಮೀಟಿಯ ಅಧ್ಯಕ್ಷರಾದ ಸತೀಶ ಹೊನ್ನಾಗೋಳ, ಸುರೇಖಾ ದೇವರಡ್ಡಿ, ಡಾ. ಶಾಂತಿನಾಥ ಬಳೋಜ, ಮುರಗೇಶ ಬಾನೆ ಡಾ. ಹರೀಶ. ಬಿ ಸೇರಿದಂತಹ ಗಣ್ಯರು ಪಾಲ್ಗೊಂಡಿದ್ದರು,