ಮದಭಾವಿ-ಹಣಮಾಪೂರ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ರಾಜು ಕಾಗೆ

Madabhavi-Hanamapura road work to be launched: MLA Raju Kage

ಮದಭಾವಿ-ಹಣಮಾಪೂರ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ರಾಜು ಕಾಗೆ  

ಸಂಬರಗಿ, 07 : ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಡಾಂಬರಿಕರಣ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಕ್ಷೇತ್ರದಲ್ಲಿ ಇನ್ನುಳಿದ ರಸ್ತೆಗಳು ಡಾಂಬರಿಕರಣ ಮಾಡಲಾಗುವುದು, ನನ್ನ ಅವಧಿಯಲ್ಲಿ ಕಾಗವಾಡ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಮಾಡಲಾಗುವುದೆಂದು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹೇಳಿದರು.  

ಮದಬಾವಿ ಗ್ರಾಮದಲ್ಲಿ ಮದಭಾವಿ-ಹಣಮಾಪೂರ ಸಂಪರ್ಕ ರಸ್ತೆ ಡಾಂಬರಿಕರಣ ಚಾಲನೆ ನೀಡಿ ಮಾತನಾಡಿ ಅವರು ಗಡಿ ಭಾಗದ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಡಾಂಬರಿಕರಣ ಮಾಡಲಾಗಿದೆ. ಈ ರಸ್ತೆ ಕಾಮಗಾರಿ ಸುಮಾರು 2ಕೋಟಿ ರೂಪಾಯಿ ಇದ್ದು, ರಸ್ತೆಯನ್ನು ನಿಗದಿತ ಅವಧಿಯಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕೆಂದು ಅವರು ಗುತ್ತಿಗೆದಾರರಿಗೆ ಸಲಹೆ ನೀಡಿದರು. 

ಈ ವೇಳೆ ಪಿ.ಕೆ.ಪಿ.ಎಸ್ ಸಂಘದ ಅಧ್ಯಕ್ಷರಾದ ನಿಜಗುನಿ ಮಗದುಮ್, ವಿನಾಯಕ ಬಾಗಡಿ, ಅಶೋಕ ಪೂಜಾರಿ, ಖಂಡೆರಾವ ಘೋರೆ​‍್ಡ, ಕೃಷ್ಣಾ ಶಿಂಧೆ, ಅರ್ಜುನ ನಾಯಿಕ, ಚನ್ನಪ್ಪ ಜಗದಾಳೆ, ಶಿವಪುತ್ರ ನಾಯಿಕ, ರಾವಸಾಬ ನಾಯಿಕ, ಬಸವರಾಜ ನಾಯಿಕ, ಮಾಪು ಪೂಜಾರಿ, ಈಶ್ವರ ಕುಂಬಾರ, ಸೇರಿದಂತಹ ಅನೇಕ ಕಾರ್ಯಕರ್ತರು, ಗಣ್ಯರು ಉಪಸ್ಥಿತ ಇದ್ದರು.