ನವಮಿಯ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವ
ಬ್ಯಾಡಗಿ 07 ; ತಾಲೂಕಿನ ಶೀಡೆನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣಬಸವೆಸ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು, ಗ್ರಾಮದ ಭಕ್ತರೆಲ್ಲರೂ ಸೇರಿ ಮಣ್ಣ ಬಸವೇಶ್ವರ ದೇವರ ರಥೋತ್ಸವವು ಗ್ರಾಮದ ತುಂಬೆಲ್ಲ ವಿವಿಧ ವಾದ್ಯ ವೈಭವಗಳೊಂದಿಗೆ ರಥವು ಸಾಗಿ ದೇವಸ್ಥಾನ ತಲುಪಿತು ಗ್ರಾಮದ ಭಕ್ತರೆಲ್ಲರೂ ಮಣ್ಣ ಬಸವೇಶ್ವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗ್ರಾಮದ ಹಾವೇರಿ ಜಿಲ್ಲೆಯ ಮಾಜಿ, ಶಾಸಕ ನೆಹರು ಓಲೇಕಾರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಫಕ್ಕೀರಗೌಡ ದೊಡ್ಡಬಸಪ್ಪ ನವರ ಮುಕ್ತೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಮಂಜುನಾಥ ಓಲೇಕಾರ ರಮೇಶ ಕಾಕೋಳ ವಿ ಬಿ ಪೂಜಾರ ಸುಬಾಸ ಓಲೇಕಾರ ರಮೇಶ ಸುತ್ತಕೋಟಿ ಗ್ರಾಮದ ಮುಖಂಡರಾದ ಮುಸ್ತಕ್ ಬ್ಯಾಡಗಿ ಜಯಪ್ಪ ನಂದಿಹಳ್ಳಿ ಇನ್ನೂ ಹಲವಾರು ಮುಖಂಡರು ಸೇರಿ ಜಾತ್ರಾ ಮಹೋತ್ಸವವನ್ನೇ ನೇರ ವೇರಿಸಿದರು.