ಲೋಕದರ್ಶನವರದಿ
ಶಿಗ್ಗಾವಿ 12ಃ ಊರ ಆಡಳಿತ ಶಾಲೆಯ ಹೊರಗಡೆಯೇ ಇರಲಿ, ಊರ ಹಿರಿತನ, ಊರ ರಾಜಕೀಯ ಮತ್ತು ಊರ ಜಾತಿಗಳು ಶಾಲೆಯ ಒಳಗೆ ಬರಬಾರದು ಬಂದರೆ ಶಾಲೆಯ ಪ್ರಭಾವ ಹಾಗೂ ವಿದ್ಯಾಥರ್ಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎಂದು ಮಾಮರ್ಿಕವಾಗಿ ಬಾಲೇಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬನ್ನೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿಮಹೋತ್ಸವ ಮತ್ತು ಜ್ಞಾನ ಸಂಗಮ ಹಳೆ ವಿದ್ಯಾಥರ್ಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮ ಸಮಾರೋಪ ಸಮಾರಂಭವು ಜರುಗಿತು.
ನಂತರ ಮಾತನಾಡಿದ ಅವರು ಶಿಕ್ಷಕರ ಹುದ್ದೆ ಬಹಳ ಪವಿತ್ರವಾದುದು, ಆ ಶಿಕ್ಷಕ ಯಾವುದೇ ಋಣದಲ್ಲಿ ಇರುವವನಲ್ಲ ಇಂದಿನ ಶಿಕ್ಷಕರಲ್ಲಿ ಅದು ಕಡಿಮೆಯಾಗಿದೆ ಎಂದು ವಿಷಾದಿಸಿದ ಶ್ರೀಗಳು ಇಂದು ದೇಶದ ರಕ್ಷಣೆ ಮತ್ತು ದೇಶದ ಆಸ್ತಿ ವಿದ್ಯಾಥರ್ಿಗಳಾಗಿದ್ದು ಅಂಥ ದೇಶ ಕಟ್ಟುವ ವಿದ್ಯಾಥರ್ಿಗಳನ್ನು ಹುಟ್ಟು ಹಾಕುವಂತಹ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದು ಹೇಳಿದರು
ಖ್ಯಾತ ಜನಪದ ವಿದ್ವಾಂಸ ಶಂಬು ಬಳಿಗಾರ ಮಾತನಾಡಿ ಮೊದಲು ಇದ್ದ ಜನಪದ ಬದುಕು ಇಂದು ಬದಲಾಗಿದೆ ಸಂತ ಶರೀಫರು ತಮ್ಮ ಹಾಡಿನ ಮೂಲಕ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ತುಂಬುವ ಮೂಲಕ ಮಾದರಿಯಾದ ಮಹಾನ್ ವ್ಯಕ್ತಿ ಬೋಧಿಸಿದ ಈ ಶಾಲೆ 140 ವರ್ಷಗಳನ್ನು ಪೂರೈಸಿದೆ ಎಂದರೆ ಈ ಬನ್ನೂರ ಗ್ರಾಮ ಭಾಗ್ಯಶಾಲಿಯಾದುದ್ದು ಮತ್ತು ಇಲ್ಲಿ ಕಲಿತ ವಿದ್ಯಾಥರ್ಿಗಳೂ ಸಹಿತ ಭಾಗ್ಯಶಾಲಿಗಳು ಎಂದರು.
ಚಂಚಲ ಮನಸ್ಸು ಅಜ್ಞಾನ ವಿದ್ದಂತೆ ಆ ಅಜ್ಞಾನವನ್ನು ಶರೀಫರು ಕೋಡಗನ ಕೋಳಿ ನುಂಗಿತ್ತ ಎಂದು ಹೇಳಿ ಜ್ಞಾನದ ಅರಿವನ್ನು ಹಾಡಿನ ಮೂಲಕ ಜನತೆಗೆ ಬಿತ್ತುವ ಕಾರ್ಯ ಅಂದೇ ಮಾಡಿ ಹಾಲಿಗೆ ಹೆಪ್ಪು ಹಾಕುವ ಕಾರ್ಯ ಮಾಡಿದ್ದಾರೆಯೇ ವಿನಹ ಉಪ್ಪು ಹಾಕುವ ಕಾರ್ಯ ಮಾಡಿಲ್ಲ ಎಂದು ಅರ್ಥಪೂರ್ಣವಾಗಿ ತಿಳಿಸಿದರಲ್ಲದೇ ನಮ್ಮ ಜನರ ಪ್ರೀತಿ ಎಲ್ಲಿ ಹೋದರೂ ಸಿಗದು ಎಂದು ಹೇಳಿ ಇಂದಿನ ಮಕ್ಕಳನ್ನು ನಾವು ಕೈಮೀರಿ ಹೋಗದಂತೆ ಅವರಿಗೆ ಸಂಸ್ಕಾರ ನೀಡುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನ ಜ್ಞಾನ ಸಂಗಮ ಹಳೆ ವಿ.ಗಳ ಸಂಘದ ವತಿಯಿಂದ ಶಂಬು ಬಳಿಗಾರವರನ್ನ ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಹಾಗೂ ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಇನ್ನೋರ್ವ ಗೌರವಾದ್ಯಕ್ಷ ಶಂಕರಗೌಡ್ರ ಪೋಲೀಸ್ಗೌಡ್ರ, ತಾಪಂ ಸದಸ್ಯ ಶ್ರೀಕಾಂತ ಪೂಜಾರ, ನಾಗಪ್ಪ ಅಣ್ಣಿಗೇರಿ, ಸಂಘದ ಅಧ್ಯಕ್ಷ ಅರುಣ ಹುಡೇದೌಡ್ರ, ಮುಖಂಡರಾದ ವೀರಭದ್ರಪ್ಪ ಅಗಡಿ, ಕಿರಣ ಅವರಾದಿ, ಶಿವಾನಂದಯ್ಯ ಹಿರೇಮಠ, ಶಂಬನಗೌಡ ಪೋಲೀಸ್ಪಾಟೀಲ, ಅನಿಲ ಸಾತಣ್ಣವರ, ನಾಗರಾಜ ಪಟಣಶೆಟ್ಟಿ, ಈಶ್ವರಗೌಡ ಪಾಟೀಲ, ಮಂಜುನಾಥ ದುಬೆ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಗು ಇತರರು ಇದ್ದರು.