ಪೊಲೀಸ ಇಲಾಖೆ, ಆರೋಗ್ಯ ಇಲಾಖೆ, ಪೌರಕಾರ್ಮಿಕರ ಕಾರ್ಯ ಶ್ಲ್ಯಾಘನೀಯ

ಲೋಕದರ್ಶನ ವರದಿ

ಸಿಂದಗಿ 13: ಪಟ್ಟಣದ ಆರಕ್ಷಕ ಠಾಣೆಯ ಆವರಣದಲ್ಲಿ ಕೊವಿಡ್-19 ವೈರಸ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಪೌರಕಾಮರ್ಿಕ ಸಿಬ್ಬಂದಿಗಳಿಗೆ ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ ಸಿಬ್ಬಂದಿವತಿಯಿಂದ ಮದ್ಯಾಹ್ನ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ್ದಿದ್ದಾರೆ. 

ಈ ಸಂದರ್ಭದಲ್ಲಿ ಬ್ಯಾಂಕ ವ್ಯವಸ್ಥಾಕ ಎಂ.ಎಸ್ ಎಡಕೊಂಡ್ಲು ಮಾತನಾಡಿ, ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ಹೊಡೆತಕ್ಕೆ ಇಡೀ ಜಗತ್ತೆ ಸ್ತಬ್ಧವಾಗಿದೆ. ಇದರಿಂದ ದೇಶದ ಸರ್ವ ಚಟುವಟಿಕೆಗಳು ನಿಂತು ಹೋಗಿವೆ. ಇದ್ದರಿಂದ ಆಥರ್ಿಕ ಮುಗ್ಗಟ್ಟಿನ ದೊಡ್ಡ ಬೀಳುತ್ತಿದೆ. ಈ ವೈರಸ್ ಸೊಂಕಿನ ಬಗ್ಗೆ ಆತಂಕ ಹೆಚ್ಚಾಗುತ್ತಿದೆ ಅದಕ್ಕಾಗಿ ನಾವೆಲ್ಲರೂ ಜಾಗೃತರಾಗಬೇಕಾಗಿರುವುದು ಅತ್ಯವಶ್ಯಕವಾಗಿದೆ ಅದರಲ್ಲಿ ಪೊಲೀಸ ಇಲಾಖೆ, ಆರೋಗ್ಯ ಇಲಾಖೆ, ಪೌರಕಾಮರ್ಿಕರ ಕಾರ್ಯ ಶ್ಲ್ಯಾಘನೀಯ ಎಂದರು.

ಈ ಸಂದರ್ಭದಲ್ಲಿ ಉಪ  ವ್ಯವಸ್ಥಾಪಕ ದೇವಾಸಿನಿ, ಬ್ಯಾಂಕ ಕಾನೂನು ಸಲಹೆಗಾರ ಬಿ.ಜಿ.ನೆಲ್ಲಗಿ ಸೇರಿದಂತೆ ಬ್ಯಾಂಕ ಸಿಬ್ಬಂದಿ ಇದ್ದರು.