ನಾಟಕ ರಚನೆ, ನಟನೆ ಹಾಗೂ ನಿರ್ದೇಶನ ಶಿಬಿರ

Playwriting, Acting and Directing Camp

ನಾಟಕ ರಚನೆ, ನಟನೆ ಹಾಗೂ ನಿರ್ದೇಶನ ಶಿಬಿರ 

ಧಾರವಾಡ 12: ದಿನಾಂಕ 6ರಿಂದ 15 ವರೆಗೆ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದಲ್ಲಿ ಡಾ.ವೀರೇಶ ಬಡಿಗೇರ ಅವರ ನೇತೃತ್ವದಲ್ಲಿ ನಾಟಕ ರಚನೆ, ನಟನೆ ಹಾಗೂ ನಿರ್ದೇಶನ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು. ಶ್ರೀಕಾಂತ ನವಿಲುಗರಿ ರಂಗಕರ್ಮಿಗಳು ನೀನಾಸಂ(ಧಾರವಾಡ), ಶ್ರೀಹರಿ ಧೂಪದ ರಂಗಕರ್ಮಿಗಳು ಬಾಗಲಕೋಟ ಇವರು ನಾಟಕ ಶಿಬಿರದ ನಿರ್ದೇಶಕರಾಗಿದ್ದಾರೆ.  ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ತರಬೇತಿ ಪಡೆಯುತ್ತಿದ್ದಾರೆ.  ದಿನಾಂಕ 15ರ ಶನಿವಾರ ಇಳಿಹೊತ್ತಿನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಭುವನ ವಿಜಯ ಸಭಾಂಗಣದಲ್ಲಿ ನಾಟಕ ಪ್ರದರ್ಶನವಿರುತ್ತದೆ. ಆಸಕ್ತರು ಪಾಲ್ಗೊಳ್ಳಬಹುದು ಎಂದು ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ತಿಳಿಸಿದ್ದಾರೆ.