ವ್ಯಕ್ತಿತ್ವ ವಿಕಸನಕ್ಕೆ ಅನುಭವ ಬೇಕು: ಎಸ್.ಪಿ.ದೇಸಾಯಿ

ಲೋಕದರ್ಶನ ವರದಿ

ಮುದ್ದೇಬಿಹಾಳ 19:ಪ್ರತಿಯೊಬ್ಬ ವಿದ್ಯಾಥರ್ಿಯೂ ತನ್ನಲ್ಲಿರುವ ಪ್ರತಿಭೆಯನ್ನಿ ತಿಳಿದುಕೊಂಡು ಸಾಧನೆ ಮಾಡಬೇಕಾದರೆ ಸತತ ಪ್ರಯತ್ನವನ್ನು ಮಾಡುತ್ತಾ ಅನುಭವಗಳನ್ನು ಪಡೆಯುತ್ತಾ ಸಾಗಬೇಕು ಎಂದು ವ್ಯಕ್ತಿತ್ವ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಎಸ್.ಪಿ.ದೇಸಾಯಿ, ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯ ತಾಳಿಕೋಟಿ ಇವರು ವಿದ್ಯಾಥರ್ಿಗಳಿಗೆ ಹೇಳಿದರು.

ಸ್ಥಳೀಯ ಎಮ್.ಜಿ.ವ್ಹಿ.ಸಿ. ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಅನುಭವ ಎಂಬುದು ವಿದ್ಯಾಥರ್ಿಗಳ ಹಂತ-ಹಂತವಾಗಿ ಗಳಿಸುವ ಸಂಪತ್ತು ಆಗಿದ್ದು, ಅನುಭವಗಳನ್ನು ಅನುಭವಿಸಲು ಕೌಶಲ್ಯ, ವಿದ್ಯಾಥರ್ಿಗಳಲ್ಲಿ ನಿಭರ್ೀತಿ, ತಾಳ್ಮೆ, ಆತ್ಮವಿಶ್ವಾಸ ಇರಬೇಕೆಂದು ಹೇಳಿದರು 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅರ್ಥಶಾಸ್ತ್ರದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ವಿಭಾಗದ ಸಂಚಾಲಕರಾದ ಪ್ರೊ.ಡಾ.ಬಿ.ಎ.ಗೂಳಿ, ಮಾತನಾಡಿ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಅಧ್ಯಯನದ ಜೊತೆ ಸ್ಪಧರ್ಾತ್ಮಕ ಪರೀಕ್ಷಗೆ ತಯಾರಿಯಾಗಲು ತಮ್ಮ ನೈಜ ಸಾಮಥ್ರ್ಯವನ್ನು ತಿಳಿದುಕೊಳ್ಳಲು ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾದ ಈ  ಕಾರ್ಯಕ್ರಮ     ಉಪಯುಕ್ತವಾಗಿದ್ದು ವಿದ್ಯಾಥರ್ಿಗಳಿಗೆ ಸ್ಪಧರ್ಾತ್ಮಕವಾಗಿ ತಯಾರಿ ಮಾಡುವದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಐಕ್ಯೂಎ  ವಾಣಿಜ್ಯ ವಿಭಾಗದ ವಿದ್ಯಾಥರ್ಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಬಿ.ಜಿ.ಅಸ್ಕಿ, ವಹಿಸಿದ್ದರು. ಪ್ರಾಸ್ತಾವಿಕವಾಗಿ ಪ್ರೊ.ಆರ್.ಡಿ.ನಂದೆಪ್ಪನವರ,  ಮಾತನಾಡಿದರು. ಪ್ರೊ.ಅನೀಲ.ತಳುಗೇರಿ,  ಕಾರ್ಯಕ್ರಮವನ್ನು ಸಂಘಟಿಸಿದರು. ಪ್ರೊ.ಎಸ್.ಆರ್.ಹಟ್ಟಿ, ನಿರೂಪಿಸಿದರು. ವಿದ್ಯಾಥರ್ಿನಿ ಸುವರ್ಣ ಮೇಟಿ ಪ್ರಾಥರ್ಿಸಿದರು. ಕು.ಸಂಕೇತ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ವಿದ್ಯಾಥರ್ಿಗಳು ಭಾಗವಹಿಸಿದ್ದರು.