ಈದ್ ಮೀಲಾದ್ ಹಬ್ಬದ ಮೆರವಣಿಗೆಗೆ ಅನುಮತಿ

ಲೋಕದರ್ಶನ ವರದಿ

ಗಂಗಾವತಿ: ಕಳೆದ ಎರಡು ವರ್ಷಗಳಿಂದ ಗಂಗಾವತಿ ನಗರದಲ್ಲಿ ಈದ್ ಮೀಲಾದ್ ಹಬ್ಬದ ಮೆರವಣಿಗೆಗೆ ಗಂಗಾವತಿ ನಗರದಲ್ಲಿ ನಿಷೇಧ ಹೇರಲಾಗಿತ್ತು. ಆದರೆ, ಈ ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಸಭೆ ನಡೆದು ಹಬ್ಬದ ಆಚರಣೆ ಹಾಗೂ ಮೆರವಣಿಗೆಗೆ ಪರವಾಣಿಗೆ ನೀಡಲಾಯಿತು.

ಹಬ್ಬದ ಆಚರಣೆ ಸಂದರ್ಭದಲ್ಲಿ ಕೋಮುಸೌಹಾರ್ಧ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಯಾವುದೇ ಅಹಿತರ ಘಟನೆ ನಡೆಯದಂತೆ ಎಲ್ಲ ಧರ್ಮದ ಮುಖಂಡರು ಸಹಕಾರ ನೀಡಬೇಕು ಎನ್ನುವ ಕೆಲವೊಂದಿಷ್ಟು ನಿಯಮಗಳ ಅನುಸಾರ ಈ ಬಾರಿಯ ಮೆರವಣಿಗೆಗೆ ಅನುಮತಿ ನೀಡಲಾಗಿದೆ.

ಸಭೆಯಲ್ಲಿ ಹಾಜರಿದ್ದ ಈದ್ಗಾ ಕಮೀಟಿ ಹಾಗೂ ಜಾಮೀಯಾ ಮಸೀದಿ ಸದಸ್ಯರು ಮತ್ತು ಸಮಾಜದ ಮುಖಂಡರು, ಶಾಂತಿಯುತವಾಗಿ ಹಬ್ಬ ಆಚರಿಸುವುದರ ಜೊತೆಗೆ ಪೊಲೀಸ್ರಿಗೆ ಎಲ್ಲ ರೀತಿಯ ಸಹಕಾರ ನೀಡಲು ಒಪ್ಪಿಗೆ ಸೂಚಿಸಿದರು. ಜೊತೆಗೆ ಈದ್ ಮೀಲಾದ್ ಹಬ್ಬದ ಮೆರವಣಿಗೆಗೆ ಅನುಮತಿ ದೊರಕಿಸಿಕೊಡಲು ಕಾರಣೀಭೂತರಾದ ಮಾಜಿ ಸಚಿವ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಮಾಜದ ಪ್ರಮುಖರು ಸೇರಿದಂತೆ ಎಸ್ಪಿ ಅವರ ಜೊತೆ ಡಿವೈಎಸ್ಪಿ, ಪೊಲೀಸ್ ವೃತ್ತನಿರಕ್ಷಣಾಧಿಕಾರಿ ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್ ಸೇರಿದಂತೆ ಠಾಣೆಯ ಎಲ್ಲ ಸಿಬ್ಬಂದು ಉಪಸ್ಥಿತರಿದ್ದರು.