ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ : ಶಾಸಕ ಭೀಮಾನಾಯ್ಕ್ ಹ.ಬೊ.ಹಳ್ಳಿ ಕೊಟ್ಟೂರು ಕೂಡ್ಲಿಗಿ ಪಟ್ಟಣಗಳಿಗೆ ಕುಡಿಯುವ ನೀರಿನ ಹಾಹಾಕಾರಕ್ಕೆ ಫುಲ್ಸ್ಟಾಫ್

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ.ಜ.03: ಮುಂಬರುವ ದಿನಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಪಟ್ಟಣ ಸೇರಿದಂತೆ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ನೀರಿನ ಹಾಹಾಕಾರಕ್ಕೆ ವಿರಾಮ ಹಾಕಲಾಗುವುದೆಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.

ತಾಲೂಕು ಸೇರಿದಂತೆ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ತಾಲೂಕಿನ ಬನ್ನಿಗೋಳ ಜಾಕ್ವಾಲ್ಗೆ  ಶಾಸಕ ಎಸ್.ಭೀಮಾನಾಯ್ಕ್ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವರ್ಷದಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಜನರು ತತ್ತರಿಸಿದ್ದಾರೆ ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ವಾಲ್ ನಿಂದ ಯಾವುದೇ ತೊಂದರೆಗಳಾಗದಂತೆ ಕನಿಷ್ಠ 100ದಿನಗಳವರೆಗೆ ನೀರಿನ ಅಬಾವಕ್ಕೆ ಕಡಿವಾಣ ಹಾಕಲು , 12ರಿಂದ 14 ಅಡಿ ಬಂಡ್ ಹಾಕಲು ಯೋಜಿಸಲಾಗಿದೆ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣ ಪಂಚಾಯಿತಿಗಳು ತಲಾ 5ಲಕ್ಷ ಹಾಗೂ ಹಗರಿಬೊಮ್ಮನಹಳ್ಳಿ ಪುರಸಭೆಯಿಂದ 10ಲಕ್ಷ ಹಣವನ್ನು ನೀಡಲಾಗಿದೆ ಕಳೆದ ಬಾರಿ ಮೂರು ಪಟ್ಟಣಗಳಿಂದ ತಲಾ 2ಲಕ್ಷ ರೂಗಳಿಂದ ಬಂಡ್ ರೂಪಿಸಲಾಗಿತ್ತು ಈ ಬಾರಿ ನೀರಿನ ಪ್ರಮಾಣ ಹೆಚ್ಚಾಗಿಸಲು ನೀರಿನ ಪ್ರಮಾಣ ಹೇಚ್ಚು ಶೇಖರಣೆಗೊಳ್ಳುವ 3 ಕಡೆ 12ರಿಂದ 14ಅಡಿ ಬಂಡ್ ಹಾಕಲು ವೆವಸ್ಥೆ ಮಾಡಿಲಾಗುವುದು.ಇನ್ನು ನೀರಿನ ಬಳಕೆಗೆ ಭದ್ರಾ ಹಾಗೂ ಸಿಂಗಟಾಲೂರು ಜಲಾಶಯಗಳಿಂದ ನೀರನ್ನು ಬಿಡುವಂತೆ ಮನವಿ ಮಾಡಲಾಗುವುದು.ಈ ಯೋಜನೆಗೆ  ಮ್ಯಾನುಯಲ್ ಟೆಂಡರ್ ಮಾಡಲು ತಿಳಿಸಲಾಗಿದೆ ಹಾಗೂ ಶೀಘ್ರವೇ ಈ ಯೋಜನೆಯನ್ನು ಮಾಡಲಾಗುವುದು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ 30ರಿಂದ 40 ಗ್ರಾಮಗಳಿಗೆ ಟ್ರಯಲ್ ರನ್ ಮಾಡಲಾಗಿದೆ ಉಳಿದ ಹಲವು ಗ್ರಾಮಗಳಿಗೆ ಶೀಘ್ರವೇ ಟ್ರಯಲ್ ರನ್ ಮಾಡಲಾಗುವುದು,ಕು.ನೀ.ಯೋಜನೆಗಳಾದ ಬನ್ನಿಗೋಳು ಹಾಗೂ ಬಸರುಕೋಡ್ ಸ್ಕೀಮ್ 44 ಕೋಟಿ ಯೋಜನೆಯು ಫೆಬ್ರುವರಿಯಲ್ಲಿ ಪೂರ್ಣ ಮಾಡಲಾಗುವುದು ಹಾಗೂ ದಶ್ಮಾಪೂರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು, ಹಾಗೂ ತಾಂತ್ರಿಕ  ಕಾರಣಗಳು ಇದ್ದು ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದರು.

ತಂಬ್ರಹಳ್ಳಿ ಗ್ರಾಮದ ಬಂಡೆ ರಂಗನಾಥ ಸ್ವಾಮಿ ದೇವಾಲಯಕ್ಕೆ ರಾಜ್ಯ ಸರಕಾರದಿಂದ ಅನುದಾನ ನೀಡಲಾಗಿದೆ, ಬನ್ನಿಗೋಳು ಜಾಕ್ವಾಲ್ನಲ್ಲಿ ಏರಿಳಿತ ಪ್ರದೇಶವಾಗಿದ್ದರಿಂದ ನೀರು ಸರಬರಾಜು ಮಾಡುವಲ್ಲಿ ಇದು ಒಂದು ಸಮಸ್ಯೆಯಗಿದೆ ಹಗಾಗಿ ಇದನ್ನು ಸ್ವಚ್ಛ ಮಾಡುವಂತೆ ತಿಳಿಸಲಾಗಿದೆ ಹಾಗೂ ನೂತನ ಮೋಟರ್ ಹಾಗೂ ಸ್ಟಾಟರ್ಗಳನ್ನು ನೀಡುವ ಯೋಜನೆ ಮಾಡಲಾಗುವುದು.ಸಣ್ಣ ನೀರಾವರಿ ಇಲಾಖೆಯಿಂದ 4.80ಲಕ್ಷ ಅನುದಾನ ಬಂದಿದ್ದು ಅವಶ್ಯಕತೆವಿರುವ ಕಡೆ ವ್ಯಯಿಸಲಾಗಿದೆ ನಕರಾಳ್ ತಾಂಡ,ನಂದಿಬಂಡಿ,ಅಂಕಸಮುದ್ರ ಸೇರಿದಂತೆ ಇನ್ನು ಅನೇಕ ಕಡೆ ನೂತನ ಮೋಟರ್ ಹಾಗೂ ಸ್ಟಾಟರ್ಗಳನ್ನು ನೀಡಲಾಗಿದೆ.ಮುಂಬರುವ ಎರೆಡು ವರ್ಷಗಳಲ್ಲಿ ಎಲ್ಲಾ ಲಿಫ್ಟ್ ಇರ್ರಿಗೇಷನ್ ಗಳಿಗೆ ನೂತನ ಯಂತ್ರಗಳ ಪೊರೈಕೆ ಮಾಡಲಾಗುವುದೆಂದರು. ಕ್ಷೇತ್ರ ಜೀವನಾಡಿ ಮಾಲವಿ ಜಲಾಶಯದ ಕಾಮಗಾರಿ ಶೀಘ್ರವೇ ಪ್ರಾರಂಭ ಮಾಡಲಾಗುವುದು ಇದಕ್ಕೆ ಸಂಭಂಧಿಸಿದಂತೆ ಬಾಕಾಗಿರುವ ಪೈಪ್ಗಳ ಅವಶ್ಯಕತೆ ಇದ್ದು ದೇಶದಲ್ಲೇ ಪೈಪ್ ನೀಡುವ ಕಂಪನಿಗಳು ಕೇವಲ 2ಇದ್ದು ಪೈಪ್ ದೊರಕದ ಕಾರಣ ವಿಳಂಬ ವಾಗುತ್ತಿದೆ, ಕ್ಷೇತ್ರಕ್ಕೆ 60ರಿಂದ70ಕೋಟಿ ಅನುದಾನ ದೊರಕಿದ್ದು ಅಂಗನವಾಡಿ ಶೌಚಾಲಯ,ಶಾಲೆ,ಗ್ರಂಥಾಲಯ,ಸಿಸಿ ರಸ್ತೆ,ಚರಂಡಿ,ವಸತಿ ಶಾಲೆ ಇನ್ನು ಮುಂತಾದ ಅಭಿವೃಥ್ಥಿ ಕಾರ್ಯಗಳನ್ನು ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ,ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ,ಅಕ್ಕಿ ತೋಟೇಶ್, ಜಂದೀಸಾಬ್,ಅಲ್ಲಾಬಕ್ಷ್,ಉಮಾಪತಿ ಇಂಜಿನೀಯರ್,ಪಾಂಡುನಾಯ್ಕ್,ಹಾಲ್ದಾಳ್ ವಿಜಯಕುಮಾರ್ ಹಾಗೂ  ಮುಖಂಡರು  ಅಧಿಕಾರಿಗಳು ಉಪಸ್ಥಿತರಿದ್ದರು.