ಲೋಕದರ್ಶನ ವರದಿ
ಬ್ಯಾಡಗಿ07: ಪಟ್ಟಣದ ಅಗಸನಹಳ್ಳಿಯಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಹಾಗೂ ಪುರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಿಮರ್ಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ಪಟ್ಟಣಕ್ಕೆ ಒಟ್ಟು 29 ಕೋಟಿ ವೆಚ್ಚದ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಶೀಘ್ರದಲ್ಲಿಯೇ ಪಟ್ಟಣದ ಪ್ರತಿಯೊಬ್ಬ ಸಾರ್ವಜನಿಕರಿಗೂ ದಿನದ 24 ಗಂಟೆಯೂ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ಜಲಜೀವಗಳೇ ನಲುಗಿವೆ: ಕಲುಷಿತ ನೀರಿಗೆ ಜಲಜೀವಿಗಳೇ ನಲುಗಿ ಹೋಗಿದ್ದು, ರೋಗಕ್ಕೆ ಅಂಜಿಕೊಂಡಿರುವ ಮನುಷ್ಯ ಅನಿವಾರ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆ ಹೋಗಬೇಕಾಗಿದೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿಮರ್ಾಣ ಸಕರ್ಾರದ ಮಟ್ಟಿಗೆ ಹೆಮ್ಮೆಯ ವಿಷಯ ಆದರೆ ಅವುಗಳ ನಿರ್ವಹಣೆಯಿಲ್ಲದೇ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದರು.
600 ಅಡಿಗೂ ನೀರಿಲ್ಲ: ಈ ಮೊದಲು ಎಲ್ಲ ಕಡೆಗಳಲ್ಲಿಯೂ ಸೇದುವ ಭಾವಿಗಳಲ್ಲಿ ನೀರು ಸಿಗುತ್ತಿತ್ತು ಇಲ್ಲಿಯೂ ಸಹ ಸೋಸಿದ ನೀರು ಸಾರ್ವಜನಿಕರಿಗೆ ಸಿಗುತ್ತಿತ್ತು, ಬಳಿಕ ಪರಿಚಿತವಾದ ಕೊಳವೆಭಾವಿಗಳಲ್ಲಿಯೂ ಸುಮಾರು 150 ರಿಂದ 200 ಅಡಿ ಆಳದಲ್ಲಿ ನೀರು ಲಭ್ಯವಿತ್ತು, ಅಂತರ್ಜಲ ಕುಸಿತದ ಪರಿಣಾಮವಾಗಿ ಇಂದು 800 ಅಡಿ ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ ಹೀಗಾಗಿ ನೀರಿನ ಸದ್ಭಳಕೆ ಬಗ್ಗೆ ಸಾಮೂಹಿಕ ಹೊಣೆಗಾರಿಕೆ ತೋರುವಂತೆ ಮನವಿ ಮಾಡಿದರು.
ನಿಮ್ಮೆದೆಂದು ಬಳಕೆ ಮಾಡಿ: ಸಾಮಾನ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಸ್ಥಗಿತಗೊಂಡ ಉದಾಹರಣೆಗಳಿವೆ.
ಅಲ್ಲದೇ ಕೆಲವರು ಅದರಲ್ಲಿ ಹಾಕಬೇಕಾದ 2 ರೂ. ಬದಲಾಗಿ ಅದೇ ಮಾದರಿಯ ರಟ್ಟಿನ ಕಾಯನ್ಗಳನ್ನು ಹಾಕುತ್ತಿರುವುದು ಕಂಡು ಬಂದಿದ್ದು, ಇಂತಹ ಕೃತ್ಯಕ್ಕೆ ಯಾವುದೇ ಸಾರ್ವಜನಿಕರು ಮಾಡದೇ ನಿಮ್ಮದೇ ಘಟಕವೆಂದು ಬಳಕೆ ಮಾಡುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ಮುರಿಗೆಪ್ಪ ಶೆಟ್ಟರ, ಯಲ್ಲಮ್ಮ ದಾವಣಗೇರಿ, ಮುಖ್ಯಾಧಿಕಾರಿ ವಿ.ಎಂ.ಪೂಜಾರ ಜಿ.ಪಂ.ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಬಿಎಲ್ಬಿಸಿ ಸದಸ್ಯ ಸುರೇಶ ಯತ್ನಳ್ಳಿ, ಸುರೇಶ ಅಸಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮಂಜುನಾಥ ಪೂಜಾರ ಸ್ವಾಗತಿಸಿ ವಂದಿಸಿದರು.