ಲೋಕದರ್ಶನ ವರದಿ
ಬೈಲಹೊಂಗಲ 28: ಬೈಲಹೊಂಗಲ ಭಾಗದ ಜನ ಕಲೆಗೆ ಬಹಳ ಬೆಲೆ ಕೊಡುವಂತವರು, ಅಭಿಮಾನವನ್ನು ಹೃದಯದಲ್ಲಿ ತುಂಬಿಕೊಂಡಿರುವ ಅಭಿಮಾನಿಗಳ ಮಧ್ಯದಲ್ಲಿ ಶಾಂಭವಿ ಶ್ರೀ ಪ್ರಶಸ್ತಿಯನ್ನು ಸ್ವೀಕಾರ ಮಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಚಿತ್ರನಟಿ ವಿನಯಾ ಪ್ರಸಾದ ಹೇಳಿದರು.
ಅವರು ಪಟ್ಟಣದ ಮುರಗೋಡ ರಸ್ತೆಯ ಮಾತಾ ಸಂಭ್ರಮದ ಶ್ರೀ ದುಗರ್ಾ ಪರಮೇಶ್ವರಿ 11 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಸಂಜೆ ನಡೆದ 2019 ನೇ ಸಾಲಿನ ಶಾಂಭವಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕನ್ನಡದ ಮಣ್ಣು, ಕನ್ನಡಿಗರು ತೋರಿಸುವ ಪ್ರೀತಿ, ವಿಶ್ವಾಸಕ್ಕಿಂತ ಯಾವುದು ದೊಡ್ಡದಲ್ಲ. ಇದೇ ರೀತಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಜೊತೆಗಿರಲಿ. ಎಷ್ಟು ಜನ್ಮದ ಪುಣ್ಯ ಮಾಡಿದ್ದೇ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಲ್ಲಿಕೆ. ನಿಮ್ಮ ಮನೆಯಲ್ಲಿ ಒಬ್ಬಳು ನಾನೂ ಒಬ್ಬಳು ಸದಸ್ಯೆ ಎನ್ನುವದಕ್ಕೆ ಖುಷಿ ಆಗಿದೆ.ಕಾರ್ಯಕ್ರಮದ ರೂವಾರಿ ಡಾ.ಮಹಾಂತಯ್ಯ ಶಾಸ್ರ್ತಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದು ಶ್ಲಾಘನೀಯವಾದದು ಎಂದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿವಿಧ ಮಠಾಧೀಶರು ಹಾಗೂ ಗಣ್ಯಮಾನ್ಯರು ಇದ್ದರು.