ಶಾಲಾ ವಿದ್ಯಾಥರ್ಿಗಳಿಗೆ ಪೆನ್ನು, ನೋಟ್ಬುಕ್ ವಿತರಣೆ

ಲೋಕದರ್ಶನ ವರದಿ

ಚಿಕ್ಕೋಡಿ : ಪಟ್ಟಣದ ಅಲ್ಲಮಪ್ರಭು  ಅನ್ನದಾನ  ಸಮಿತಿಯ ಮುಖಾಂತರ ಚಿಕ್ಕೋಡಿ ಪಟ್ಟಣದ ಇಂದಿರಾ ನಗರ ನಿವಾಸಿ ರವಿಚಂದ್ರನ್ ಎಮ್. ಅಳಗುಂಡಿ ಇವರು ತಮ್ಮ ತಂದೆ ಸ್ವ. ಮಾರುತಿ ಕೆ. ಅಳಗುಂಡಿ ಇವರ 2 ನೇ ಪುಣ್ಯತಿಥಿಯ ನಿಮಿತ್ಯ, ಆಶ್ರಯ ನಗರದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಣ್ಣು, ಪೆನ್ನು ಮತ್ತು ನೋಟಬುಕ್ಗಳನ್ನು ಹಂಚಿದರು.

ಸರಕಾರಿ ಕನ್ನಡ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಚಿಕ್ಕೋಡಿ ಪಟ್ಟಣದ ಇಂದಿರಾ ನಗರ ನಿವಾಸಿ ರವಿಚಂದ್ರನ್ ಎಮ್. ಅಳಗುಂಡಿ ಇವರು ತಮ್ಮ ತಂದೆ ಸ್ವ. ಮಾರುತಿ ಕೆ. ಅಳಗುಂಡಿ ಇವರ 2 ನೇ ಪುಣ್ಯತಿಥಿಯ ನಿಮಿತ್ಯ, ಆಶ್ರಯ ನಗರದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಣ್ಣು, ಪೆನ್ನು ಮತ್ತು ನೋಟಬುಕ್ಕಗಳನ್ನು ಹಂಚಿದರು. 

ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಎ. ಎಮ್. ನದಾಫ ಇವರು ಅಲಗುಂಡಿ ಗುರುಗಳ ಬಗ್ಗೆ ಸವಿಸ್ತಾರವಾಗಿ ಮಕ್ಕಳಿಗೆ ತಿಳಿ ಹೇಳಿದರು. ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಇವರು, ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸ್ವ. ಮಾರುತಿ ಅಳಗುಂಡಿಯವರು ಈ ಹಿಂದೆ ತಮ್ಮ ಇದೇ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಉತ್ತಮ ಸೇವೆ ಸಲ್ಲಿಸಿ, ಸಮಾಜದ ಒಳಿತಿಗಾಗಿ ಹಲವಾರು ಕಾರ್ಯಗಳನ್ನು ಮಾಡಿ ಒಬ್ಬ ಮಾದರೀಯ ಶಿಕ್ಷರಾಗಿದ್ದರು. ಅವರ ಆದರ್ಶಗಳು ನಮಗೆಲ್ಲರಿಗೂ ದಾರಿ ದೀಪವಾಗಿದೆ. ಈಗಿನ ಕಾಲದಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಿದ್ದು ಸರಕಾರಿ ಕನ್ನಡ ಶಾಲೆಗಳು ಕೊನೆಯ ಅಂಚಿನಲ್ಲಿವೆ. ಇವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಸಿಗುವ ಶಿಕ್ಷಣ ಗುಣಮಟ್ಟ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ, ಗಾಂಧೀಜಿ, ಅಂಬೇಡ್ಕರ ಅಂತಹ ಮಹಾನರು ಸರಕಾರಿ ಶಾಲೆಗಳಲ್ಲಿಯೇ ಕಲೆತು ರಾಷ್ಟ್ರ ಕಟ್ಟುವ ಕಾರ್ಯ ಮಾಡಿದ್ದಾರೆ. ತಾವೆಲ್ಲರೂ ಶೃದ್ಧಾ ಭಕ್ತಿಯಿಂದ ಕಲೆತು ಉತ್ತಮ ಸ್ಥಾನ-ಮಾನಗಳನ್ನು ಪಡೆದು ನಾಡಿನ-ದೇಶದ ಸೇವೆ ಮಾಡಬೇಕೆಂದು ಹೇಳಿದರು. 

ಈ ಸಂಧರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳಾದ ಉದಯ ವಾಘಮಾರೆ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ತಾನಾಜಿ ಕುಂಬಾರ, ಸುಭಾಷ ಅಳಗುಂಡಿ,  ಶಿಕ್ಷಕಿಯರಾದ ಎಮ್. ಬಿ. ಕಮತಿ, ಎಮ್. ಕೆ. ಜಂಬಗಿ, ಗೀತಾ ಹೊನ್ನಾಯಕ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಜೆ. ಬಿ. ಸಾಳುಂಕೆ ಇವರು ನಿಪೂಪಿಸಿ, ಆರ್. ಎನ್. ಮಡಿವಾಳರ ಇವರು ಸ್ವಾಗತಿಸಿದರು.