ಅನಧಿಕೃತ ಸ್ವತ್ತುಗಳಿಗೆ ಕಂದಾಯ ಪಾವತಿಸಿ ಇ-ಖಾತಾ ಪಡೆದುಕೊಳ್ಳಿ

Pay revenue for unauthorized assets and get e-account

ಅನಧಿಕೃತ ಸ್ವತ್ತುಗಳಿಗೆ ಕಂದಾಯ ಪಾವತಿಸಿ ಇ-ಖಾತಾ ಪಡೆದುಕೊಳ್ಳಿ 

ಹಾನಗಲ್ 12: ರಾಜ್ಯ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುತ್ತಿದ್ದು, ಇದರಿಂದ ಅನಧಿಕೃತ ಸ್ವತ್ತುಗಳ (ಬಿ-ಖಾತಾ) ಮಾಲೀಕರು ತಮ್ಮ ಸ್ವತ್ತಿನ ಕಂದಾಯ ಪಾವತಿಸಿ ಅತ್ಯಂತ ಸರಳ ವಿಧಾನಗಳ ಮೂಲಕ ಇ-ಖಾತಾ ಪಡೆಯಬಹುದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಇಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿ ನಿವೇಶನ, ಮನೆಯ ಆಸ್ತಿಗಳನ್ನು ಹೊಂದಿರುವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ-ಖಾತಾ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅನಧಿಕೃತ ಸ್ವತ್ತುಗಳನ್ನು ಅಧಿಕೃತಗೊಳಿಸಿ ಇ-ಖಾತಾ ಮಾಡಿಕೊಡಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಅದನ್ನೀಗ ರಾಜ್ಯ ಸರ್ಕಾರ ಸಾಕಾರಗೊಳಿಸಿದೆ. ಸಾರ್ವಜನಿಕರು ಈ ಅಭಿಯಾನದ ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಮೂರು ತಿಂಗಳ ಕಾಲ ಇ-ಖಾತೆ ಅಭಿಯಾನ ನಡೆಯಲಿದೆ. ಖಾತೆ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗಬೇಡಿ. ನೇರವಾಗಿ ಪುರಸಭೆ ಕಚೇರಿಗೆ ತೆರಳಿ ದಾಖಲೆ ಒದಗಿಸಿ ಇ-ಖಾತೆ ಪಡೆದುಕೊಳ್ಳಿ ಎಂದು ಶಾಸಕ ಮಾನೆ ಮನವಿ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ.ಮಾತನಾಡಿ, ಸ್ವತ್ತಿನ ಮಾಲೀಕರು ಪುರಸಭೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ, ಮಾಲೀಕರ ಫೋಟೊ, ಆಧಾರ್‌ಕಾರ್ಡ್‌ ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಬಹುದಾಗಿದೆಎಂದರು. ಪುರಸಭೆಅಧ್ಯಕ್ಷ ಪರಶುರಾಮಖಂಡೂನವರ, ಉಪಾಧ್ಯಕ್ಷೆ ವೀಣಾಗುಡಿ, ಮಾಜಿಅಧ್ಯಕ್ಷರಾದಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಮಮತಾಆರೆಗೊಪ್ಪ, ಮುಖಂಡರಾದರಾಜೂಗುಡಿ, ಶ್ರೀನಿವಾಸ ಭದ್ರಾವತಿ, ಸುರೇಶ ನಾಗಣ್ಣನವರ, ಉಮೇಶ ಮಾಳಗಿ ಸೇರಿದಂತೆಅನೇಕರಿದ್ದರು.