ಪಥ ಸಂಚಲನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ

ಗದಗ 01: ಗದಗ  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿ ಪಥಸಂಚಲನ ಗೌರವ ರಕ್ಷೆ ಸ್ವೀಕರಿಸಿದರು. ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ಎಸ್.ಧನಗರ ಅವರು ವಹಿಸಿದ್ದರು. 

ಜಿಲ್ಲಾ ಪೋಲಿಸ ಬ್ಯಾಂಡಿನ ಮೇರೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೋಲಿಸ, ಹೋಮ ಗಾಡ್ರ್ಸ,  ಅಗ್ನಿಶಾಮಕ ದಳ, ಅರಣ್ಯ ದಳ, ಎನ್.ಸಿ.ಸಿ. ಸಿನಿಯರ್ಸ ಗಲ್ರ್ಸ, ಜೂನಿಯರ್ಸ, ಜೂನಿಯರ್ಸ ಗಲ್ರ್ಸ,  ಕೆ.ಎಲ್,ಇ, ಜನರಲ್ ವಿಭಾಗದಲ್ಲಿ ಸಕರ್ಾರಿ ಪ್ರಾಥಮಿಕ ಶಾಲೆ ಎಸ್.ಎಂ.ಕೆನಗರ, ಶಾಸ್ತ್ರೀಜಿ ಪ್ರೌಢ ಶಲೆ, ಕ್ರೀಡಾ ವಸತಿ ಶಾಲೆ, ಸೇಂಟ ಜಾನ್ ಪ್ರಾಥಮಿಕ ಶಾಲೆ,  ಸಿ.ಎಸ್.ಪಾಟೀಲ್ ಹೆಣ್ಣು ಮತ್ತು ಗಂಡು ಮಕ್ಕಳ ಪ್ರೌಢ ಶಾಲೆ, ಸಿ.ಎಸ್.ಪಾಟೀಲ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸಕರ್ಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಎಸ್.ಎಂ.ಕೆ.ನಗರ, ಎಚ್.ಸಿ.ಇ.ಎಸ್. ಹೆಣ್ಣು ಮಕ್ಕಳ ಪ್ರೌಢ ಶಾಲೆ ಬೆಟಗೇರಿ ಗೈಡ್ಸ ವಿಭಾಗದಲ್ಲಿ ಜೆ.ಸಿ.ಪ್ರೌಢ ಶಾಲೆ ಹಾಗೂ ಎಸ್.ಎಂ.ಕೆ ನಗರದ ಸಕರ್ಾರಿ ಹೆಣ್ಣು ಮತ್ತು ಗಂಡು ಮಕ್ಕಳ ಭಾರತ ಸೇವಾದಳದ ವಿದ್ಯಾಥರ್ಿಗಳ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ಸನ್ಮಾನಿತರು: ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ರಾಜ್ಯೋತ್ಸವ ಸಂದೇಶದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜಿಲ್ಲಾಧಿಕಾರಿಗಳು ಹಾಗೂ ಅತಿಥಿಗಳು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅವಂತಿಕಾ.ಪ.ಹೊಂಬನ್ನವರ, ಶಾಗಿಲ್ ಜ.ಕುಷ್ಟಗಿ, ದ್ವೀತಿಯ ಸ್ಥಾನ ಪಡೆದ ಅಂಕಿತ ಸಂಶಿ, ತೃತೀಯ ಸ್ಥಾನ ಪಡೆದ ಶಾರದಾ ಬೆಳಗಾವಿ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಮಲ್ಲೇಶ ಡಿ.ಎಚ್., ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ಪ್ರಶಸ್ತಗೆ ಭಾಜನರಾದ ಸುವರ್ಣ ನಂದಿಕೋಲಮಠ, ಶ್ರೀದೇವಿ ನೀಲಕಂಠಮಠ, ಈಶ್ವರ ಎಸ್.ಗೌಡರ, ರವಿ ಬೆಂಚಳ್ಳಿ, ಪದ್ಮರಾಜ ಅ.ಕುಲಕಣರ್ಿ, ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪೂಜಾ ಬಾರೇರಿ, ದ್ವೀತಿಯ ಸ್ಥಾನ ಪಡೆದ ಧನಂಜಯ ಎಂ.ಎಂ., ತೃತೀಯ ಸ್ಥಾನ ಪಡೆದ ಸಂತೋಷ ಭಜಂತ್ರಿ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸನೋಬರಮತಿನ ಮೊರಬ, ದ್ವೀತಿಯ ಸ್ಥಾನ ರಚಿತಕುಮಾರ ಜೈನ್, ತೃತೀಯ ಸ್ಥಾನ ಪಡೆದ ನೀಲ ಹಟ್ಟಿ, ಸೌಮ್ಯ ಬಡಿಗೇರ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಮ ದ್ರೋಣಗಿರಿ, ದ್ವೀತಿಯ ಸ್ಥಾನ ಕಿರಣ ಮಾನೇದ, ತೃತೀಯ ಸ್ಥಾನ ಪಡೆದ ಕಾವ್ಯಾ ಹುಬ್ಬಳ್ಳಿ, ಪರ್ವತಾರೋಹಣ ಕೋರ್ಸನಲ್ಲಿ ಭಾಗವಹಿಸಿದ ವಿರೇಶ ಬಡಿಗೇರ, ಕುಸ್ತಿಯಲ್ಲಿ ಸೋನಿಯಾ ಜಾಧವ, ಶ್ರೇಷ್ಠ ತೋಟಗಾರಿಕಾ ಕೃಷಿಕರಾದ ಮಹೇಶ ನಾ.ಛಬ್ಬಿ, ಕರಾಠೆಯಲ್ಲಿ ಸಂಜನಾ. ಹುಡೇದ, ಸುದರ್ಶನ ಲೋಕೂರ, ಪತ್ರಿಕಾ ರಂಗದಲ್ಲಿ ಜೆ.ಕೆ.ಸತ್ಯ ಪ್ರಶಸ್ತಿಗೆ ಭಾಜನರಾದ ವೆಂಕಟೇಶ ಇಮ್ರಾಪೂರ, ಕಾಮರಾಜ ಪ್ರಶಸ್ತಿಗೆ ಭಾಜನರಾದ ಮಂಜುನಾತ ಅರಪಲ್ಲಿ, ವೃತ್ತಿ ರಂಗಭೂಮಿ ಕಲಾವಿದರಾದ ರುದ್ರಪ್ಪ ಮತ್ತಿಗಟ್ಟಿ, ಶಿಲ್ಪಕಲಾ ಕಲಾವಿದರಾದ ಫಕೀರಸಾಬ ಕೋಲಕಾರ, ಪಾಂಡುರಂಗ ಬಡಿಗೇರ, ವೈಧ್ಯಕೀಯ ಕ್ಷೇತ್ರದಲ್ಲಿ ಡಾ.ಕೆ.ಯೋಗೇಶನ್, ದತ್ತಾತ್ರೇಯ ವೈಕುಂಠೆ, ಜನಪದ ಕಲಾವಿದರಾದ ಪಾಂಡಪ್ಪ ಲಮಾಣಿ, ಅಂತರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ದ್ವಿತಿಯ ಸ್ಥಾನ ಪಡೆದ ಸಯಂ ಭಾಗಮಾರ ಇವರುಗಳನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.